Advertisement

“ಅಜ್ಞಾನ ತೊಡೆದು ಸರ್ವಧರ್ಮ ಸಮನ್ವಯದ ಚಿಂತನೆ ಮೂಡಲಿ’

01:00 AM Mar 07, 2019 | Harsha Rao |

ಬ್ರಹ್ಮಾವರ: ಅಜ್ಞಾನ ತೊಡೆದು ಸರ್ವ ಧರ್ಮ ಸಮನ್ವಯದ ಚಿಂತನೆ ಮೂಡಬೇಕು. ತನ್ಮೂಲಕ ಸಾಮರಸ್ಯದ ಬದುಕು ಸಾಧ್ಯ ಎಂದು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಜಿ ಹೇಳಿದರು.

Advertisement

ಬ್ರಹ್ಮಾವರದಲ್ಲಿ ಕೂರಾಡಿಯ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಅಪ್ಪ ಅಮ್ಮ ಉಚಿತ ಅನಾಥಾಲಯ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪರೋಪಕಾರವೇ ಪುಣ್ಯ. ಸತ್ಕಾರ್ಯ, ಸಮಾಜಸೇವೆಯಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ದುಡಿಮೆಯ ಒಂದಂಶವನ್ನು ಸೇವೆಗೆ ವಿನಿಯೋಗಿಸಿದರೆ ಸಮಾಜದಲ್ಲಿ ಯಾರೂ ಅನಾಥರಾಗಲು ಸಾಧ್ಯವಿಲ್ಲ ಎಂದು ಉಡುಪಿ ಬಿಲ್ಡರ್ ಎಸೋಸಿಯೆಶನ್‌ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌ ಹೇಳಿದರು. ಬಡವರಿಗೆ ಮಾಡುವ ಸೇವೆ ಭಗವಂತನಿಗೆ ಸಮರ್ಪಿಸಿದ ಕಾಣಿಕೆ ಎಂದರು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್‌. ಶಂಕರ್‌ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್‌. ಸಚ್ಚಿದಾನಂದ ಚಾತ್ರಾ, ಬಾರಕೂರು ಜುಮ್ಮಾ ಮಸೀದಿಯ ಧರ್ಮಗುರು ಮಹಮ್ಮದ್‌ ರಫಿಕ್‌ ಮದನಿ, ಬೆಳಗಾವಿಯ ರೈಯಿಸ್‌ ವರ್ಲ್ಡ್ ಮೀಡಿಯಾದ ಆಡಳಿತ ನಿರ್ದೇಶಕ ಹನುಮಂತ ತಿರುಗುಪ್ಪಿ ಉಪಸ್ಥಿತರಿದ್ದರು.
ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್‌ ಪೂಜಾರಿ ಕೂರಾಡಿ ಸ್ವಾಗತಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸುಧಾಕರ ರಾವ್‌ ಕಾರ್ಯ ಕ್ರಮ ನಿರೂಪಿಸಿದರು. ಗೌರಿ ಪೂಜಾರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next