Advertisement
ನಿಜವಾಗಿಯೂ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತ್ತು. ಪಂದ್ಯ ಅಂಕವೊಂದನ್ನು ರಕ್ಷಿಸಿದ ಅವರು ಸತತ ಐದು ಗೇಮ್ ಗೆಲ್ಲುವ ಮೂಲಕ ಪಂದ್ಯವನ್ನು 7-6 (1), 1-6, 7-5 ಸೆಟ್‌ಗಳಿಂದ ಒಸಾಕಾ ಅವರನ್ನು ಕೆಡಹಿ ಮುನ್ನಡೆದರು. ನವೋಮಿ ಅದ್ಭುತ ರೀತಿಯಲ್ಲಿ ಆಡಿದರು. ಅವರು ಚೆನ್ನಾಗಿ ಆಡುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ಸ್ವಿಯಾಟೆಕ್ ಹೇಳಿದ್ದಾರೆ.
Related Articles
Advertisement
ಗಾಫ್ ಮುನ್ನಡೆ
ಅಮೆರಿಕದ ಕೊಕೊ ಗಾಫ್ ಸ್ಲೋವಾನಿಯದ ತಮರ ಝಿದನ್ಸೆಕ್ ಅವರನ್ನು 6-3, 6-4 ಸೆಟ್‌ಗಳಿಂದ ಕೆಡಹಿ ಮುನ್ನಡೆದರು. ದಿನದ ಇನ್ನುಳಿದ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಎಲೆನಾ ರಿಬಕಿನಾ, ಎಲಿನಾ ಸ್ವಿಟೋಲಿಯಾ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ. ರಿಬಕಿನಾ ಅವರು ಅರಂತಾ ರಸ್ ಅವರನ್ನು 6-3, 6-4 ಸೆಟ್‌ಗಳಿಂದ ಕೆಡಹಿದರೆ ಸ್ವಿಟೋಲಿನಾ ಅವರು 6-4, 7-6 (7-3) ಸೆಟ್‌ಗಳಿಂದ ಪ್ಯಾರಿ ಅವರನ್ನು ಉರುಳಿಸಿದರು.
ಮೆಡ್ವೆಡೇವ್‌ಗೆ ಜಯ
ಸರ್ಬಿಯದ ಮಿಯೊಮಿರ್ ಕೆಮನೋವಿಕ್ ಅವರ ವಿರುದ್ಧ ನಡೆದ ದ್ವಿತೀಯ ಸೆಟ್‌ನ ಹೋರಾಟದ ವೇಳೆ ಕೆಮನೋವಿಕ್ ಗಾಯಗೊಂಡು ಪಂದ್ಯ ತ್ಯಜಿಸಿದ್ದರಿಂದ ಡ್ಯಾನಿಲ್ ಮೆಡ್ವೆಡೇವ್ ಸುಲಭವಾಗಿ ಮೂರನೇ ಸುತ್ತು ತಲುಪಿದರು. ಪಂದ್ಯ ತ್ಯಜಿಸಿದಾಗ ಮೆಡ್ವೆಡೇವ್ 6-1, 5-0 ಮುನ್ನಡೆಯಲ್ಲಿದ್ದರು.
ಇನ್ನೊಂದು ಪಂದ್ಯದಲ್ಲಿ ಇಟಲಿಯ ತಾರೆ ಮತ್ತು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಾನ್ನಿಕ್ ಸಿನ್ನರ್ ಅವರು ಸ್ಥಳೀಯ ಫೇವರಿಟ್ ರಿಚರ್ಡ್ ಗಾಸ್ಕೆಟ್ ಅವರನ್ನು 6-4, 6-2, 6-4 ಸೆಟ್‌ಗಳಿಂದ ಸೋಲಿಸಿದರು. ಯಾವುದೇ ಸೆಟ್ ಕಳೆದುಕೊಳ್ಳದೇ ಮೂರನೇ ಸುತ್ತು ಪ್ರವೇಶಿಸಿದ ಸಿನ್ನರ್ ಅಲ್ಲಿ ಪಾವೆಲ್ ಕೊಟೋವ್ ಅವರ ಸವಾಲನ್ನು ಎದುರಿಸಲಿದ್ದಾರೆ. ಕೊಟೋವ್ ತನ್ನ ಪಂದ್ಯದಲ್ಲಿ ಸ್ಟಾನ್ ವಾವ್ರಿಂಕ ಅವರನ್ನು 7-6 (5), 6-4, 1-6, 7-6 (5) ಸೆಟ್‌ಗಳಿಂದ ಉರುಳಿಸಿದ್ದರು.