Advertisement

ವಿಶಿಷ್ಟ ಸಿದ್ಧಾಂತಿಗಳಿಗೆ ಇಗ್ನೊಬೆಲ್‌!

09:52 AM Sep 16, 2019 | Team Udayavani |

ನ್ಯೂಯಾರ್ಕ್‌: ಮಕ್ಕಳ ಡೈಪರ್‌ ಬದಲಾಯಿಸುವ ಯಂತ್ರವನ್ನು ಆವಿಷ್ಕಾರ ಮಾಡಿದವರಿಗೆ, ವೊಂಬ್ಯಾಟ್ಸ್‌ ಎಂಬ ಸಸ್ತನಿಗಳ ಮಲ ಘನಾಕೃತಿ ಏಕಿರುತ್ತದೆ ಎಂದು ಪತ್ತೆ ಹಚ್ಚಿದವರಿಗೂ ಪ್ರಶಸ್ತಿ!

Advertisement

ಜನಸಾಮಾನ್ಯರು ಮೂಗು ಮುರಿಯಬಹುದಾದ ಇಂಥವುಗಳನ್ನೇ ಆವಿಷ್ಕರಿಸಿದ ವಿಜ್ಞಾನಿಗಳು, ತಂತ್ರಜ್ಞರನ್ನು ಪ್ರೋತ್ಸಾಹಿಸಲು ಹುಟ್ಟಿಕೊಂಡ ಪ್ರಶಸ್ತಿ ಇಗ್ನೊ ಬೆಲ್‌’. ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿಗಳ ಅಣಕು ಮಾದರಿಯ ಪ್ರಶಸ್ತಿಗಳು ಇವು. ಇತ್ತೀಚೆಗೆ ನಡೆದ ಹಾರ್ವರ್ಡ್‌ ವಿಶ್ವ ವಿದ್ಯಾನಿಲಯದ ವಾರ್ಷಿಕ ಸಮಾರಂಭದಲ್ಲಿ ಈ ಸಾಲಿನ 10 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಈ ಬಾರಿಯ ಪ್ರಶಸ್ತಿ ವಿಜೇತರು
– ರಸಾಯನಶಾಸ್ತ್ರ ವಿಭಾಗ
5 ವರ್ಷದ ಮಗುವಿನ ಬಾಯಿಯಲ್ಲಿ ದಿನಕ್ಕೆ ಅರ್ಧ ಲೀ. ಜೊಲ್ಲು ಉತ್ಪತ್ತಿಯಾಗುತ್ತದೆ ಎಂದದ್ದು ಜಪಾನ್‌ ಸಂಶೋಧ ಕರ ತಂಡ.

– ಎಂಜಿನಿಯರಿಂಗ್‌ ವಿಭಾಗ
ಮಕ್ಕಳ ಡೈಪರ್‌ ಬದಲಾಯಿಸುವ ಯಂತ್ರ ಆವಿಷ್ಕರಿಸಿ ವಿವರಿಸಿ ಪ್ರಶಸ್ತಿ ಪಡೆದದ್ದು ಇರಾನ್‌ನ ಎಂಜಿನಿಯರಿಂಗ್‌ ತಂಡ.

“ಕೆರೆತ’ಕ್ಕೆ ಶಾಂತಿ ಪ್ರಶಸ್ತಿ!
ನಮಗೆ ದೇಹದ ಯಾವ ಭಾಗವನ್ನು ಕೆರೆದುಕೊಳ್ಳುವುದರಲ್ಲಿ ಅತಿ ಹೆಚ್ಚು ಸುಖ ಸಿಗುತ್ತದೆ ಎಂಬುದನ್ನು ಸಂಶೋಧಿಸಿರುವ ಬ್ರಿಟಿಷ್‌ ಪ್ರೊಫೆಸರ್‌ ಫ್ರಾನ್ಸಿಸ್‌ ಮ್ಯಾಕ್‌ಗೊÉàನ್‌ಗೆ ಇಗ್ನೊಬೆಲ್‌ ಶಾಂತಿ ಪ್ರಶಸ್ತಿ ನೀಡಲಾಗಿದೆ. ಅವರ ಪ್ರಕಾರ, ಹಿಮ್ಮಡಿಯ ಮೇಲಿನ ಕೀಲಿನ ಕೆರೆತ ಅತಿ ಸುಖ ಕೊಡುತ್ತದೆ!

Advertisement

 ಔಷಧ ವಿಜ್ಞಾನ ಪ್ರಶಸ್ತಿ
ಪಿಜ್ಜಾ ಜಂಕ್‌ ಫ‌ುಡ್‌ ಅಲ್ಲ ಎಂಬುದನ್ನು ಸಂಶೋಧಿಸಿದ ಇಟಲಿಯ ಸಿಲ್ವಾನೋ ಗ್ಯಾಲಸ್‌ ಎಂಬ ಸಂಶೋಧಕರಿಗೆ ಈ ಪ್ರಶಸ್ತಿ ಸಂದಿದೆ. 507 ಅಕ್ಯೂಟ್‌ ಮಯೋಕಾರ್ಡಿಯೋ ಇನಾ#ರ್ಕೇಷನ್‌ (ಎಎಂಐ) ರೋಗಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಯಿತು. ಇವರಲ್ಲಿ ಕೆಲವರಿಗೆ ಆಗಾಗ, ಕೆಲವರಿಗೆ ನಿಯಮಿತವಾಗಿ ಮತ್ತೂ ಕೆಲವರಿಗೆ ದಿನಂಪ್ರತಿ ಪಿಜ್ಜಾ ತಿನ್ನಲು ಅನುವು ಮಾಡಲಾಗಿತ್ತು. ಪಿಜ್ಜಾ ಆಹಾರವು ಅವರ ಕಾಯಿಲೆ ಮೇಲೆ ಯಾವುದೇ ದುಷ್ಪರಿಣಾಮ ಬೀರಲಿಲ್ಲ ಎಂಬ ಫ‌ಲಿತಾಂಶ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next