Advertisement

ಪ್ರತಿಯೊಬ್ಬರ ಕೈಯಲ್ಲಿ ಕ್ಯಾಮೆರಾ ಇದೆ : ಆದರೆ ಸಿನಿಮಾ ಇಲ್ಲ !

12:48 PM Nov 25, 2019 | keerthan |

ಪಣಜಿ: ಚಿತ್ರಕಥೆ, ಸಿನೆ ಛಾಯಾಗ್ರಹಣ ಹಾಗೂ ವಿನ್ಯಾಸವೇ ಸಿನಿಮಾದ ಅಂತಃಸತ್ತ್ವ. ಅದೇ ಇಂದಿನ ಸಿನಿಮಾಗಳಲ್ಲಿ ಕಾಣೆಯಾಗುತ್ತಿದೆ !
ಇದನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ ಎಂದವರು ಭಾರತೀಯ ಪನೋರಮಾ ವಿಭಾಗದ ಆಯ್ಕೆ ಸಮಿತಿ. ಇದರ ಅಧ್ಯಕ್ಷರಾದ ಪ್ರಿಯದರ್ಶನ್ ಸಿನಿಮಾ ಆಯ್ಕೆ ಕುರಿತು ವಿವರಿಸುವಾಗ ಆತಂಕ ವ್ಯಕ್ತಪಡಿಸಿದ್ದು ಇದೇ ನೆಲೆಯಲ್ಲಿ.

Advertisement

‘ಭಾರತೀಯ ರಿಯಲಿಸ್ಟಿಕ್ ಸಿನಿಮಾಗಳು ತಮ್ಮ ಬಣ್ಣ ಕಳೆದುಕೊಳ್ಳುತ್ತಿವೆ. ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಇದು ಸಮಿತಿಗೆ ಈ ಬಾರಿಯ ಆಯ್ಕೆಗೆ ಬಂದ ಸಿನಿಮಾಗಳು ಕಂಡು ಬಂದಾಗ ಅನಿಸಿದ್ದು’ ಎಂದರು ಪ್ರಿಯದರ್ಶನ್.

ಒಂದು ಸಿನಿಮಾದ ಗುಣಮಟ್ಟವನ್ನು ನೋಡುವುದೇ ಅದರ ಚಿತ್ರಕಥೆ, ಸಿನೆ ಛಾಯಾಗ್ರಹಣ ಹಾಗೂ ವಿನ್ಯಾಸದಿಂದ. ಅವುಗಳೇ ಇಂದಿನ ಹಲವು ಸಿನಿಮಾಗಳಲ್ಲಿ ಕಾಣೆಯಾಗಿವೆ. ಹಾಗಾದರೆ ಒಳ್ಳೆಯ ಸಿನಿಮಾ ಎಂದರೆ ಏನು ಎಂಬುದು ಅವರ ಪ್ರಶ್ನೆಯಾಗಿತ್ತು.

ಬಹಳ ಕಷ್ಟವಾಗಲಿಲ್ಲ
ಒಟ್ಟು 314 ಸಿನಿಮಾಗಳನ್ನು ವೀಕ್ಷಿಸುವ ಮೊದಲು ಸಂಖ್ಯೆಯನ್ನು ಕಂಡು ಕಷ್ಟವೆಂದಕೊಂಡಿದ್ದೆವು. ಸೀಮಿತ ಅವಧಿಯಲ್ಲಿ ಎಲ್ಲವನ್ನೂ ವೀಕ್ಷಿಸಿ, ಅಭಿಪ್ರಾಯ ಸಂಗ್ರಹಿಸಿ ನಿರ್ಧರಿಸುವುದು ಕಷ್ಟ. ಆದರೆ, ಸಿನಿಮಾಗಳ ಗುಣಮಟ್ಟ ಕಂಡ ಬಳಿಕ ಆಯ್ಕೆ ಬಹಳ ಕಷ್ಟವೆನಿಸಲಿಲ್ಲ ಎಂದರು ಪ್ರಿಯದರ್ಶನ್ ಮತ್ತು ಹರೀಶ್ ಬಿಮಾನಿ.

ಇಂದು ಎಲ್ಲರ ಕೈಯಲ್ಲೂ ಕ್ಯಾಮರಾ ಬಂದಿದೆ. ಎಲ್ಲರೂ ವಿಡಿಯೋ ಚಿತ್ರೀಕರಿಸುತ್ತಾರೆ. ಆದರೆ ಅದಕ್ಕೊಂದು ವಿನ್ಯಾಸ ಮತ್ತು ಕಥೆ ಕಟ್ಟುವಿಕೆ ಇರುವುದಿಲ್ಲ. ಹಾಗಾಗಿಯೇ ಸಿನಿಮಾಗಳೆನಿಸುವುದಿಲ್ಲ ಎಂಬುದು ಸಮಿತಿಯ ಅಭಿಪ್ರಾಯ.

Advertisement

ಎಲ್ಲರೂ ತಮ್ಮ ಮನಸ್ಸಿನೊಳಗಿರುವುದನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅದು ಸರಿಯೇ. ಆದರೆ ಅದಕ್ಕೊಂದು ತರಬೇತಿ ಅವಶ್ಯವಿದೆ ಎಂಬುದು ಪ್ರಿಯದರ್ಶನ್ ಅಭಿಪ್ರಾಯ.
ಈ ಬಾರಿ ಭಾರತೀಯ ಪನೋರಮಾ ವಿಭಾಗದ ಕಥಾ ವಿಭಾಗದಲ್ಲಿ 26 ಸಿನಿಮಾಗಳು ಹಾಗೂ ಕಥೇತರ ವಿಭಾಗದಲ್ಲಿ 15 ಸಿನಿಮಾಗಳು ಪ್ರದರ್ಶಿತವಾಗುತ್ತಿವೆ. ಕನ್ನಡದ ರಂಗನಾಯಕಿ ಘದಯಾಳ್ ಪದ್ಮನಾಭನ್ ನಿರ್ದೇಶನ] ಇದೇ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿದೆ.

ಕಾಶ್ಮೀರಿ ಭಾಷೆಯ ನೂರೆ, ಮರಾಠಿಯ ಫೋಟೋ ಫ್ರೇಮ್, ಬೋಗ್ರಾ ಅಲ್ಲದೇ ಮಲಯಾಳಂ, ಬಂಗಾಳಿ, ಖಾಸಿ ಮತ್ತಿತರ ಭಾರತೀಯ ಭಾಷಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next