Advertisement

ನೇರ ಮಾರುಕಟ್ಟೆಗೆ ಐಮಂಡಿ 

08:45 AM Jul 18, 2018 | Team Udayavani |

ನವದೆಹಲಿ: ರೈತರಿಗೆ ನೇರವಾಗಿ ಬೆಳೆಗಳ ಮಾರಾಕಟ್ಟೆ, ಕೃಷಿ ಉತ್ಪನ್ನ ಖರೀದಿ, ಕಿರು ಸಾಲ ಸೌಲಭ್ಯ, ಬೆಳೆ ವಿಮೆ ನೀಡಲು ‘ಐಮಂಡಿ’ ಎಂಬ ಮೊಬೈಲ್‌ ಆ್ಯಪ್‌ ಆರಂಭಿಸಲಾಗಿದೆ. ಸಿಂಗಾಪುರ ಮೂಲದ ರಸಗೊಬ್ಬರ ತಯಾರಿಕೆ ಸಂಸ್ಥೆ ಐಎಫ್ಎಫ್ಸಿಒ ಲಿಮಿಟೆಡ್‌, ‘IFFCO iMandi’ ಎಂಬ ಈ ಕಾಮರ್ಸ್‌ ಆ್ಯಪ್‌  ಬಿಡುಗಡೆ ಮಾಡಿದ್ದು, 5.5 ಕೋಟಿ ರೈತರು ಒಂದೇ ವೇದಿಕೆಯಡಿ ಬೆಳೆಗಳ ಮಾರಾಟ, ಕೃಷಿ ಉಪಕರಣಗಳ ಖರೀದಿ, ಸಾಲ, ವಿಮೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Advertisement

ಜೊತೆಗೆ IFFCO ಸಂಸ್ಥೆಯ ರಾಸಾಯನಿಕ ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ಈ ಸೌಲಭ್ಯಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈಗಾಗಲೇ ಈ ಆ್ಯಪ್‌ ಅನ್ನು ಚಂಡೀಗಡದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು IFFCO ವ್ಯವಸ್ಥಾಪಕ ನಿರ್ದೇಶಕಿ ಡಾ.ಯು.ಎಸ್‌. ಅಶ್ವಥಿ ತಿಳಿಸಿದ್ದಾರೆ. ಜೊತೆಗೆ ಈ ಆ್ಯಪ್‌ ನಲ್ಲಿ ಚಾಟ್‌, ಕರೆ ಮೂಲಕ ವಿಷಯ ತಜ್ಞರನ್ನು ಸಂಪರ್ಕಿಸಬಹುದಾಗಿದೆ. IFFCO ಸಂಸ್ಥೆಯು 55 ಸಾವಿರ ಮಾರುಕಟ್ಟೆ ಕೇಂದ್ರ, 36 ಸಾವಿರ ಸಹಕಾರ ಸಂಘಗಳು, 30 ಸಾವಿರ ಮಳಿಗೆಗಳು ಹಾಗೂ 25 ಕೋಟಿ ಗ್ರಾಮೀಣ ಗ್ರಾಹಕರನ್ನು ಹೊಂದಿದೆ ಎಂದು ಹೇಳಿದ್ದಾರೆ. ಇ-ಕಾಮರ್ಸ್‌ ಆ್ಯಪ್‌ ಅನ್ನು ಆ್ಯಂಡ್ರಾಯಿಡ್‌ ಹಾಗೂ ಐಒಎಸ್‌ ಮೊಬೈಲ್‌ ಫೋನ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next