Advertisement

ಕೆಲಸ ಮಾಡಿದ್ರೂ ಮತ ಹಾಕದಿದ್ರೆ ಬೇಸರವಾಗುತ್ತೆ

07:12 AM Jun 29, 2019 | Team Udayavani |

ಬೆಂಗಳೂರು: “ಸಂಸದರಾಗಿ ಮಲ್ಲಿಕಾರ್ಜುನ ಖರ್ಗೆ ಮಾಡಿರುವಷ್ಟು ಕೆಲಸವನ್ನು ಬೇರೆ ಯಾರೂ ಮಾಡಿರಲಿಲ್ಲ. ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ, ಧ್ರುವ ನಾರಾಯಣ ಎಲ್ಲರೂ ಜನಪರವಾಗಿ ಕೆಲಸ ಮಾಡಿದ್ದರೂ, ಚುನಾವಣೆಯಲ್ಲಿ ಅವರನ್ನು ಜನ ಸೋಲಿಸಿರುವುದರಿಂದ ರಾಜಕೀಯವಾಗಿ ನೋವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

“ಮೋದಿಗೆ ಓಟ್‌ ಹಾಕಿ, ನಮ್ಮ ಬಳಿ ಮತ ಕೇಳುತ್ತೀರಾ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಅವರು, “ಕಾಂಗ್ರೆಸ್‌ ಸಂಸದರು ಎಷ್ಟೆಲ್ಲಾ ಜನಪರ ಕೆಲಸ ಮಾಡಿ, ಹೋರಾಟ ಮಾಡಿದರೂ. ರಾಜ್ಯದಲ್ಲಿ ಕೇವಲ ಒಂದು ಸ್ಥಾನ ನೀಡಿರುವುದರಿಂದ ರಾಜಕೀಯವಾಗಿ ನೋವಾಗಿದೆ. ಜನರು ನಮ್ಮನ್ನು ಯಾಕೆ ಪರಿಗಣಿಸಲಿಲ್ಲ ಎಂಬ ಕಾರಣಕ್ಕೆ ಬೇಸರವಾಗಿದೆ’ ಎಂದು ಹೇಳಿದರು.

ಪ್ರಚೋದನಾತ್ಮಕ ಭಾಷಣ ಮಾಡಿದವರು ದೊಡ್ಡ ಅಂತರದಲ್ಲಿ ಗೆದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಜನರು ಯಾಕೆ ನಮ್ಮ ಪರವಾಗಿ ನಿಲ್ಲಲಿಲ್ಲ ಎಂದು ಪ್ರಶ್ನಿಸಿದ್ದಾರೆ. ನಾವು ಯಾರ ಪರ ಹೋರಾಟ ಮಾಡಿದ್ದೆವೋ ಅವರೇ ನಮಗೆ ಮತ ಹಾಕಿಲ್ಲ. ಹೀಗಾಗಿ ಸಹಜವಾಗಿ ಮಾತನಾಡುವ ಸಂದರ್ಭದಲ್ಲಿ ಆ ರೀತಿ ಕೇಳಿದ್ದಾರೆಯೇ ಹೊರತು ಮತದಾರರಿಗೆ ಅಗೌರವ ತೋರುವ ಉದ್ದೇಶದಿಂದಲ್ಲ ಎಂದು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next