Advertisement

ಕಾನೂನು ಅರಿತರೆ ಅಪರಾಧ ಕಡಿಮೆ

03:03 PM Dec 03, 2018 | Team Udayavani |

ಸುರಪುರ: ಸಂವಿಧಾನವನ್ನು ಅಪಾರ್ಥ ಮಾಡಿಕೊಳ್ಳುವ ಅಥವಾ ಅರ್ಥ ಮಾಡಿಕೊಂಡರು ಅದರಂತೆ ನಡೆದುಕೊಳ್ಳದೆ ತಮ್ಮ ಅಸಹನೆ ವ್ಯಕ್ತಪಡಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಜನರಿಗೆ ಸರಳವಾಗಿ ಕನಿಷ್ಟ ಕಾನೂನಿನ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕಳೆದ ಕೆಲ ವರ್ಷಗಳಿಂದ ಈ ಸಾಕ್ಷರತಾ ಜಾಥಾ ಸಂಚಾರ ಜಾರಿಗೆ ತಂದಿದೆ ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶ ಡಿ. ನಾಗರಾಜೇಗೌಡ ಹೇಳಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಜಾಥಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಕ್ಷರತಾ ಜಾಥಾ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಅವರ ಮನೆ ಬಾಗಿಲಕ್ಕೆ ತೆರಳಿ ಕಾನೂನು ಅರಿವು ನೆರವು ಕುರಿತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
 
ಅಪರಾಧಗಳ ಸಂಖ್ಯೆ ಕಡಿಮೆ ಮಾಡಬೇಕು ಎನ್ನುವುದೆ ನ್ಯಾಯಾಂಗ ಇಲಾಖೆ ಉದ್ದೇಶ ಇದೆ. ಪ್ರಸ್ತುತ ದಿನಗಳಲ್ಲಿ ಕಾನೂನು ಪ್ರತಿಯೊಬ್ಬರ ಅಂಗವಾಗಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ನಮ್ಮನ್ನು ನಿರ್ಭಂದಿಸುತ್ತದೆ. ಪ್ರತಿ ಸಮಸ್ಯೆಗೂ ಕಾನೂನಲ್ಲಿ ಪರಿಹಾರವಿದೆ. ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದರು.

ಸಿವಿಲ್‌ ನ್ಯಾಯಾಧೀಶ ವಿನೋದ ಭಾಳನಾಯ್ಕ ಮಾತನಾಡಿ, ಕಾನೂನು ಅರಿವು ಇರದ ಅನಕ್ಷರಸ್ಥರಿಗೆ ಕಾನೂನಿನ ಕನಿಷ್ಟ ಅರಿವು ಮೂಡಿಸುವುದು ಮತ್ತು ನೆರವು ಪಡೆದುಕೊಳ್ಳುವ ವಿಧಾನ ತಿಳಿಸುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ. ಆದ್ದರಿಂದ ವಕೀಲರು ಮತ್ತು ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ನಮ್ಮೊಂದಿಗೆ ಇದ್ದು, ಸಾಕ್ಷರತಾ ರಥ ಯಾತ್ರೆ ಯಶಸ್ವಿಗೆ ಸಹಕರಿಸಬೇಕು ಎಂದು ತಿಳಿಸಿದರು.
 
ತಹಶೀಲ್ದಾರ್‌ ಸುರೇಶ ಅಂಕಲಗಿ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ, ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಪಾಟೀಲ, ಉದಯಸಿಂಗ, ದೇವಿಂದ್ರಪ್ಪ ಭೇವಿನಕಟ್ಟಿ, ಮಹ್ಮದ ಹುಸೇನ್‌, ಎಸ್‌.ಜಿ.ಆರ್‌. ಬನ್ನಾಳ, ವ್ಯಾಸರಾಜ ಮನೋಹರ ಕುಂಟೋಜಿ, ಅಪ್ಪಣ್ಣ ಗಾಯಕವಾಡ, ಶಿವಾನಂದ ಅವಂಟಿ, ಮಂಜುನಾಥ ಹುದ್ದಾರ, ಯಲ್ಲಪ್ಪ ಹುಲಕಲ, ವೆಂಕಟೇಶ ನಾಯಕ, ಛಾಯಾ ಕುಂಟೋಜಿ, ಆದಪ್ಪ ಹೊಸ್ಮನಿ, ಮಂಜುನಾಥ ಗುಡುಗುಂಟಿ ಇದ್ದರು.

ಬೆಳಗ್ಗೆ 9:00 ಗಂಟೆಗೆ ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶ ಡಿ. ನಾಗರಾಜೇಗೌಡ, ಸಿವಿಲ್‌ ನ್ಯಾಯಾಧೀಶ ವಿನೋದ ಬಾಳನಾಯ್ಕ. ಹೆಚ್ಚುವರಿ ನ್ಯಾಯಾಧೀಶ ಬಿ.ಎನ್‌. ಅಮರನಾಥ, ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಪಾಟೀಲ ಮತ್ತು ವಕೀಲರು ಸೇರಿ ವಾಹನಕ್ಕೆ ಸ್ವಾಗತ ಕೋರಿ ಬರಮಾಡಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next