Advertisement
ದೇವರು! ಹಾಗಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಭಯವೊಂದು ಹಾದು ಹೋಗುತ್ತದೆ. ಮೊದಲಿನಿಂದಲೂ ನಮಗೆ ಕಲಿಸಿದ್ದು ಹಾಗೆ. ದೇವರೆಂದರೆ ಭಯಪಡಬೇಕು ಎಂದು. ಆದರೆ, ದೇವರ ವಿಚಾರದಲ್ಲಿ ನಾನು ಉಳಿದವರಿಗಿಂತ ಸ್ವಲ್ಪ$ಭಿನ್ನವಾಗಿ ಯೋಚನೆ ಮಾಡುತ್ತೇನೆ. ನನಗೆ ದೇವರೆಂದರೆ ಭಯವಿಲ್ಲ. ನಾನು ದೇವರನ್ನು ತುಂಬಾ ಪ್ರೀತಿಸುತ್ತೇನೆ!
Related Articles
Advertisement
ಪ್ರಾರ್ಥನೆ ಮಾಡಲು ಒಂದು ನಿಯಮವಿದೆ, ಆ ನಿಯಮ ಪಾಲಿಸದಿದ್ದರೆ, ನಮಗೆ ದೇವರು ಶಿಕ್ಷೆ ಕೊಡುತ್ತಾನೆ ಎಂಬುದನ್ನೆಲ್ಲಾ ನಾನು ನಂಬುವುದಿಲ್ಲ. ನನಗೆ ದೇವರೆಂದರೆ ಭಯವಿಲ್ಲ, ನಾನು ದೇವರನ್ನು ಪ್ರೀತಿಸುತ್ತೇನೆ ಅಷ್ಟೇ. ಇನ್ನು ನಾನು ಬೆಳಗ್ಗಿನ ತಿಂಡಿ ತಿನ್ನುವಾಗ ದೇವರಿಗೆ ಹೇಳುತ್ತೇನೆ: “ಕಾರ್ನ್ಫ್ಲೇಕ್ಸ್‌ಗೆ ತಣ್ಣಗಿನ ಹಾಲು ಹಾಕಿಕೊಂಡು ತಿನ್ನು, ಇದರ ರುಚಿ ತುಂಬಾ ಅದ್ಭುತವಾಗಿದೆ’ ಎಂದು. ಕೆಲಸಕ್ಕೆ ಹೋಗುವಾಗ ದೇವರಿಗೊಂದು ಮುತ್ತುಕೊಟ್ಟು ಹೋಗುತ್ತೇನೆ. ದೇವರನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುತ್ತೇನೆ. ನಾನು ಹೇಳುವ ಸಣ್ಣ ವಿಷಯವನ್ನು ಅವನು ಅಷ್ಟೇ ಮುತುವರ್ಜಿಯಿಂದ ಕೇಳುತ್ತಾನೆ, ನಾನು ಅತ್ತಾಗ ಅವನೂ ಅಳುತ್ತಾನೆ, ನಾನು ತುಂಬಾ ಖುಷಿಯಾದಾಗ ಅವನೂ ಖುಷಿಯಾಗುತ್ತಾನೆ, ನಾನು ಅವನನ್ನು ಗಾಢವಾಗಿ ಪ್ರೀತಿಸುತ್ತೇನೆ, ನನ್ನೆಲ್ಲ ಪ್ರಶ್ನೆಗಳಿಗೆ ಅವನು ನೀಡುವ ಉತ್ತರಗಳನ್ನು ಯಾವುದೇ ಸಂದೇಹವಿಲ್ಲದೇ, ಒಪ್ಪಿಕೊಳ್ಳುತ್ತೇನೆ. ನಾನು ಯಾವುದೇ ಬೇಸರದಲ್ಲಿದ್ದರೂ ಅವನು ಯಾವತ್ತೂ ನನ್ನನ್ನು ಅಲಕ್ಷಿಸುವುದಿಲ್ಲ… ಹೀಗೆ ದೇವರು ಮತ್ತು ಅವನ ಜತೆಗಿನ ನನ್ನ ಪ್ರೀತಿಯ ನಂಟು ಸಾಗುತ್ತಲೇ ಇರುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಪ್ರಾರ್ಥನೆ ಮಾಡುವಾಗ ಯಾವುದೇ ಅಜೆಂಡಾವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ದೇವರನ್ನು ಪ್ರೀತಿಸಿ, ದೇವರೆಂದರೆ ಭಯಪಡಬೇಡಿ. ದೇವರು ಎಲ್ಲರಿಗೂ ಒಳಿತನ್ನೇ ಮಾಡುತ್ತಾನೆ.
ಪಟ್‌ಪಟಾಕಿ ಶ್ರುತಿ, ಆರ್.ಜೆ.