Advertisement

ನಮ್ಮ ಒಬ್ಬನನ್ನು ಕೆಣಕಿದರೆ ನಾವು 11 ಮಂದಿಯೂ ತಿರುಗಿ ಬೀಳುತ್ತೇವೆ: ಕೆ.ಎಲ್.ರಾಹುಲ್

10:14 AM Aug 17, 2021 | Team Udayavani |

ಲಾರ್ಡ್ಸ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಕ್ಷಣ ಕ್ಷಣಕ್ಕೂ ರೋಚಕತೆ ತುಂಬಿದ್ದ ಅಂತಿಮ ದಿನದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ.

Advertisement

ಈ ಪಂದ್ಯ ಹಲವು ಘರ್ಷಣೆಯ ಸನ್ನಿವೇಶಗಳು ನಡೆಯಿತು. ಹಲವಾರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಭಾರತದ ಬ್ಯಾಟಿಂಗ್ ವೇಳೆ ಕೆಣಕುತ್ತಿದ್ದ ಆಂಗ್ಲರಿಗೆ ವಿರಾಟ್ ಪಡೆ ತಿರುಗೇಟು ನೀಡಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೆ.ಎಲ್.ರಾಹುಲ್, ನೀವು ನಮ್ಮ ಒಬ್ಬ ಆಟಗಾರರನ್ನು ಕೆಣಕಿದರೆ ನಾವು 11 ಮಂದಿಯೂ ತಿರುಗಿ ಬೀಳುತ್ತೇವೆ ಎಂದರು.

ಇದನ್ನೂ ಓದಿ:ಲಾರ್ಡ್ಸ್‌ ವಶಪಡಿಸಿಕೊಂಡ ಭಾರತ

ಎರಡು ಸ್ಪರ್ಧಾತ್ಮಕ ತಂಡಗಳು ಆಡುವಾಗ ಶ್ರೇಷ್ಠ ಮಟ್ಟದ ಕೌಶಲ ಮತ್ತು ಸ್ವಲ್ಪ ಇಂತಹ ಮಾತುಗಳು ಇರುತ್ತದೆ. ನಾವು ಈ ಮಾತುಗಳಿಗೆ ತಲೆ ಕಡಿಸಿಕೊಳ್ಳುವುದಿಲ್ಲ. ಆದರೆ ನೀವು ನಮ್ಮ ಒಬ್ಬನನ್ನು ಕೆಣಕಿದರೆ ನಾವು 11 ಮಂದಿಯೂ ತಿರುಗಿ ಬೀಳುತ್ತೇವೆ ಎಂದು ರಾಹುಲ್ ಹೇಳಿದರು.

Advertisement

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಗಳಿಸಿತ್ತು. ರಾಹುಲ್ 129, ರೋಹಿತ್ 83 ರನ್ ಗಳಿಸಿದ್ದರು. ಇಂಗ್ಲೆಂಡ್ ತಂಡ 391 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 298 ರನ್ ಗೆ ಎಂಟು ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿದರೆ ಇಂಗ್ಲೆಂಡ್ 120 ರನ್ ಗಳಿಗೆ ಆಲೌಟ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next