Advertisement
ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮನೆಯಿಂದ ಹೊರಡುವಾಗ ಹತ್ತು ನಿಮಿಷ ಮುಂಚಿತವಾಗಿ ಬಿಡಬೇಕು. ಆಟೋದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ನಿಗದಿತ ಮಿತಿ ದಾಟದಂತೆ ಎಚ್ಚರ ವಹಿಸಬೇಕು. ರಸ್ತೆ ಮೇಲೆ ಹೋಗುವಾಗ ಅಥವಾ ದಾಟುವ ಸಂದರ್ಭದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
Related Articles
Advertisement
ರಸ್ತೆ ಸುರಕ್ಷತೆ ಜಾಗೃತಿ ಜಾಥಾ: 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದಲ್ಲಿ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಡಿವೈಎಸ್‌ಪಿ ಎಸ್.ವೈ.ಹುಣಸೆಕಟ್ಟಿ ಅವರು ಪುಷ್ಪಾರ್ಚನೆ ಮೂಲಕ ಜಾಥಾಗೆ ಚಾಲನೆ ನೀಡಿದರು. ಮೆರವಣಿಗೆಯು ಮಹಾವೀರ ವೃತ್ತ, ಭಗತ್‌ಸಿಂಗ್ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ತೆರಳಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಧೂಮಪಾನ ಮಾಡಿ ವಾಹನ ಚಲಾಯಿಸಬೇಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ನಾಲ್ಕು ಚಕ್ರದ ವಾಹನ ಚಾಲಕರು ಕಡ್ಡಾಯ ಸೀಟ್ ಬೆಲ್ಟ್ ಧರಿಸಬೇಕು, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು, ದ್ವಿ ಚಕ್ರ ವಾಹನ, ಕಾರು, ಜೀಪು ಮತ್ತಿತರ ವಾಹನಗಳಿಗೆ ಇರುವ ಹಿನ್ನೋಟ ಕನ್ನಡಿ ಬಳಕೆ ಮಾಡಬೇಕು. ಇದು ಚಾಲಕನ ಮೂರನೇ ಕಣ್ಣಿದ್ದಂತೆ ಎನ್ನುವ ಕುರಿತು ಜನರಲ್ಲಿ ಅರಿವು ಮೂಡಿಸಿದರು.
ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್‌ಐ ವಿಜಯಕುಮಾರ, ಶಿವರಾಜ ಜಮಾದಾರ, ಮನೋಹರ್, ಪೀರಪ್ಪ, ಜನಾರ್ಧನ್ ಬೋವಿನ್, ಶಿವರಾಜ ಏಕಲಾರ್, ರವಿಕುಮಾರ ಕಾಮಶೆಟ್ಟಿ ಪ್ರಕಾಶ ಮಠಪತಿ ಹಾಗೂ ವಿದ್ಯಾರ್ಥಿಗಳು ಇದ್ದರು.