ಕಾಂಕ್ರೀಟ್ ಹಾಕಿದ ಚರಂಡಿ ವ್ಯವಸ್ಥೆ, ಹಡೀಲು ಬಿಟ್ಟ ಕೃಷಿ ಭೂಮಿ, ಕಾಡು-ವನ ನಾಶ, ಮೂಲ ನೀರಿನ ಸೆಲೆಗಳನ್ನು ಮುಚ್ಚಿ ಸೈಟ್ ನಿರ್ಮಾಣ, ಕಟ್ಟ ಹಾಕದ ತೋಡುಗಳು ನೀರನ್ನು ಎಂದೂ ಇಂಗಿಸಿ ಹಿಡಿದಿಟ್ಟು ಕೊಳ್ಳಲಾರವು. ಇವುಗಳನ್ನು ನಾವೇ ನಾಶ ಮಾಡಿ ಈಗ ನೀರಿನ ಬರಕ್ಕೆ ಹಳ್ಳಿ ಹಳ್ಳಿಗಳಲ್ಲೂ ಹಾಹಾಕಾರ ಎಬ್ಬಿಸುತ್ತಿದ್ದೇವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತು
ಕೊಳ್ಳಬೇಕಾಗಿದೆ ಎಂದು ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಅಭಿಪ್ರಾಯಪಟ್ಟರು.
Advertisement
ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿಯಿಂದ ಪೆರಂಪಳ್ಳಿ ಶ್ರೀ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ಆಯೋಜಿಸಲಾದ ಕೃಷಿ ವಿಚಾರಧಾರೆ, ವಾರ್ಷಿಕ ಹಬ್ಬ “ಸಿರಿತುಪ್ಪೆ-2019′ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲೆ ಜ್ಯೋತಿ ಚೇಳಾÂರ್ ಮಾತನಾಡಿ, ಅನಾದಿ ಕಾಲದಿಂದಲೂ ಕೃಷಿಯ ಮೂಲ ಕಾರಣಕರ್ತಳೇ ಸಿರಿ (ಸ್ತ್ರೀ). ಅತ್ತ ಪುರುಷರು ಮೃಗ ಭೇಟೆಗೆ ಹೊರಟರೆ, ಇತ್ತ ಪ್ರಾಣಿ-ಪಕ್ಷಿಗಳು ತಿನ್ನುವ-ತಿನ್ನದ ಸಸ್ಯ-ಪ್ರಾಣಿಜನ್ಯ ಆಹಾರ ವಸ್ತುಗಳನ್ನು ಸ್ತ್ರೀ ಗಮನಿಸುತ್ತಾ ಕೃಷಿ-ಸಾಕು ಪ್ರಾಣಿಗಳ ಪಾಲನೆ ಆರಂಭಿಸಿದಳು. ಈಗ ಭೂಮಿ ತಾಯಿಯೊಂದಿಗೆ ನಮ್ಮ ಶ್ರಮ ಸಂಸ್ಕೃತಿ ಮರೆಯಾಗಿ ವ್ಯವಹಾರ ಸಂಸ್ಕೃತಿ ಹುಟ್ಟಿಕೊಂಡಿರುವುದೇ ಇಂದಿನ ದುರಂತ, ದುಸ್ತಿತಿಗಳಿಗೆ ಕಾರಣ ಎಂದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರ ಅಭಿವೃದ್ಧಿಗೆ ಸಮಗ್ರ ಕೃಷಿ ಕುರಿತು ಜಿಲ್ಲಾ ಕೃಷಿಕ ಸಂಘದ ಪ್ರ.ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾಹಿತಿ ನೀಡಿದರು. ಪೆರಂಪಳ್ಳಿ ಫಾತಿಮಾ ಚರ್ಚ್ ಧರ್ಮಗುರು ರೆ|ಫಾ| ಅನಿಲ್ ಡಿ’ಸೋಜಾ ಆಶೀರ್ವಚನ ನೀಡಿದರು.
Related Articles
ಶಂಕರ ಕೋಟ್ಯಾನ್, ಪೀಟರ್ ಡಿ’ಸೋಜಾ, ಬೆನೆಡಿಕ್ಟ್ ಪೆರಂಪಳ್ಳಿ, ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು.
Advertisement
ಪೆರಂಪಳ್ಳಿ ವಲಯದ ಪ್ರಗತಿಪರ ಕೃಷಿಕ ದುಗ್ಗಪ್ಪ ಪೂಜಾರಿ ಶೀಂಬ್ರ, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿದ ಕಾಳು ನಾಯ್ಕ ಅವರನ್ನು ಸಮ್ಮಾನಿಸಲಾಯಿತು. ಸಿರಿ ತುಳು ಚಾವಡಿ ತಂಡ, ಸ್ಥಳೀಯರಿಂದ ನೃತ್ಯ ವೈವಿಧ್ಯ, ಅಂಗಣದ ಐಸಿರಿ- ತುಳು ಜಾನಪದ ನಲಿಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಕಾಂತ ಶೆಟ್ಟಿ ಕಾರ್ಕಳ ನಿರ್ವಹಿಸಿದರು. ರವೀಂದ್ರ ಪೂಜಾರಿ ಶೀಂಬ್ರ ನಿರೂಪಿಸಿ, ರಾಜೇಶ್ ಪೆರಂಪಳ್ಳಿ ವಂದಿಸಿದರು.