Advertisement
ಕಾವೂರಿನಲ್ಲಿ ರವಿವಾರ ಬಿಜೆಪಿ ಮಂಗಳೂರು ಉತ್ತರ ಮಂಡಲದ ಬೂತ್ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕೇಂದ್ರದ ಸೌಲಭ್ಯ ರಾಜ್ಯಕ್ಕೆ ಪರಿಣಾಮಕಾರಿಯಾಗಿ ಸಿಗಬೇಕಾದರೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದರು.
ಚುನಾವಣೆ ಮತ್ತು ಯುದ್ಧಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಛಲ ಹಾಗೂ ಒಗ್ಗಟ್ಟಿನ ಏಕ ಗುರಿಯಿದ್ದರೆ ಯುದ್ಧ ಜಯಿಸಬಹುದು. ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡುವ, ಧರ್ಮವನ್ನು ಒಡೆಯುವ, ಓಲೈಕೆಯ ಸರಕಾರ ಈಗಿನ ಕಾಂಗ್ರೆಸ್. ಇದರ ಆಡಳಿತವನ್ನು ಕಿತ್ತೆಸೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ಕೇಂದ್ರದ ಸೌಲಭ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶ್ರಮಿಸಬೇಕು ಎಂದರು. ಮೋದಿ ಸರಕಾರ ವಿವಿಧ ಜನಪರ ಯೋಜನೆ ಮೂಲಕ ಮನೆ ಮಾತಾಗಿದೆ. ಕೇಂದ್ರವು ಪ್ರತೀ ವ್ಯವಸ್ಥೆಯನ್ನು ಮನೆ ಮನೆಗೆ ಮುಟ್ಟಿಸಲು ಕಟಿಬದ್ಧವಾಗಿದೆ ಎಂದರು.
Related Articles
Advertisement
ಮಂಗಳೂರು ಆರ್ಥಿಕ ಕೇಂದ್ರವಾಗಲಿದೆದೇಶದಲ್ಲಿ ಕುಳಿತುಕೊಳ್ಳುವ ಕುರ್ಚಿಯಿಂದ ಹಿಡಿದು ಧರಿಸುವ ಬಟ್ಟೆಯವರೆಗೆ ಪೆಟ್ರೋಲಿಯಂನ ಪೂರಕ ವಸ್ತುಗಳಾಗಿವೆ. ದ.ಭಾರತದಲ್ಲಿ ಅತೀ ದೊಡ್ಡ ತೈಲ ಸಂಸ್ಕರಣಾ ಘಟಕ ಮಂಗಳೂರಿನಲ್ಲಿದೆ. ಈಗ ಇದೇ ಭಾಗದಲ್ಲಿ ಪೆಟ್ರೋಲಿಯಂ ಕಾಂಪ್ಲೆಕ್ಸ್ ಬರಲಿದೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಉದ್ಯೋಗ, ಪೂರಕ ಸಣ್ಣ ಸಣ್ಣ ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರಲಿವೆ. ಇದರ ಜತೆಗೆ ಉಕ್ಕಿನ ಕಾರ್ಖಾನೆ ನಿರ್ಮಿಸುವ ಯೋಜನೆಯಿದೆ. ಇದರಿಂದ ಮಂಗಳೂರು ಆರ್ಥಿಕ ಕೇಂದ್ರವಾಗಿ ಪ್ರಸಿದ್ಧಿಯಾಗಲಿದೆ.
– ಧರ್ಮೇಂದ್ರ ಪ್ರಧಾನ್,
ಸಚಿವ, ಕೇಂದ್ರ ನೈಸರ್ಗಿಕ ಅನಿಲ ಮತ್ತು
ಪೆಟ್ರೋಲಿಯಂ ಇಲಾಖೆ