Advertisement

ಓದುವ ಮೋಹ-ಪ್ರಯತ್ನ ಇಲ್ಲದಿದ್ದರೆ ಗುರಿ ಅಸಾಧ್ಯ

12:43 PM Jun 19, 2018 | |

ಹೊಸಪೇಟೆ: ಓದುವ ಮೋಹ ಮತ್ತು ಪ್ರಯತ್ನ ಇಲ್ಲದಿದ್ದರೆ ಗುರಿ ಸಾಧಿಸುವುದು ಅಸಾಧ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಡಾ| ಪದ್ಮರಾಜ ದಂಡಾವತಿ ಅಭಿಪ್ರಾಯಪಟ್ಟರು. 

Advertisement

ಹಂಪಿ ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ದೂರಶಿಕ್ಷಣ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ 2017-18ನೇ ಸಾಲಿನ ಸ್ನಾತಕೋತ್ತರ ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪ್ರಥಮ ಮತ್ತು ಅಂತಿಮ ವರ್ಷ ಹಾಗೂ ಪತ್ರಿಕೋದ್ಯಮ ಅಧ್ಯಯನ, ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಡಿಪ್ಲೋಮ ಸಂಪರ್ಕ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.

ತಾವು ವರದಿ ಮಾಡುವ ವೃತ್ತ ಪತ್ರಿಕೆಯನ್ನು ತಾವೇ ಓದದಂತಹ ವರದಿಗಾರರು ಇದ್ದಾರೆ. ವರದಿಗಾರರಿಗೆ ವಿದ್ವತ್ತು ಬಹಳ ಮುಖ್ಯವಾಗುತ್ತದೆ. ಬೇರೆ ಬೇರೆ ವೃತ್ತ ಪತ್ರಿಕೆಗಳನ್ನು ಓದಬೇಕಾಗುತ್ತದೆ. ವಿದ್ಯಾರ್ಥಿಗಳು ವಿವಿಧ ಪತ್ರಿಕೆಗಳ ಹೆಸರುಗಳನ್ನು ಅಧ್ಯಯನ ಮಾಡಬೇಕು. ಪತ್ರಿಕೆಗಳು ಅಧಿಕಾರವನ್ನು ಓಲೈಸಬಾರದು. ಜಾಹೀರಾತು ಮತ್ತು ಸುದ್ದಿಯ ನಡುವಿನ ದೊಡ್ಡ ಗೋಡೆ ಕುಸಿದು ಹೋಗಿದೆ. ಸರ್ಕ್ನೂಲೇಷನ್‌ ಹೆಚ್ಚಿಸಿಕೊಳ್ಳಲು ಪತ್ರಿಕೆಗಳು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತವೆ. ಇಂದು ಮಾಧ್ಯಮಗಳ ಒಡೆತವನ್ನು ರಾಜಕೀಯ ಪಕ್ಷಗಳು ವಹಿಸಿಕೊಂಡಿದ್ದರೆ
ತಪ್ಪಲ್ಲ. ಆದರೆ ಅಲ್ಲಿ ಕಾರ್ಯನಿರ್ವಹಿಸುವ ವರದಿಗಾರರು ಆ ಪಕ್ಷದ ವಕ್ತಾರರಂತೆ ಮುಖವಾಣಿಯಾಗಿ ಕಾರ್ಯನಿರ್ವಹಿಸುವುದು ಬಹಳ ಅಪಾಯಕಾರಿಯಾಗಿದೆ ಎಂದರು.

ಕವಿವಿ ಸಮಾಜಶಾಸ್ತ್ರದ ಪ್ರಾಧ್ಯಾಪಕ ಡಾ| ಎಸ್‌.ಜಯಶ್ರೀ ಮಾತನಾಡಿ, ಉದ್ಯೋಗಸ್ಥರು ಬಡ್ತಿಗಾಗಿ, ವಂಚಿತರು ಶಿಕ್ಷಣಕ್ಕಾಗಿ, ಬಡತನದಲ್ಲಿರುವ ಅಲ್ಲದೇ ಹವ್ಯಾಸಕ್ಕಾಗಿ ಓದುವವರು ದೂರಶಿಕ್ಷಣದ ಉಪಯೋಗ ಪಡೆದುಕೊಳ್ಳುತ್ತಾರೆ. ಇಂದು ಶಿಕ್ಷಣ ವ್ಯಾಪಾರೀಕರಣವಾಗುತ್ತದೆ. 

ಸಮಾಜಶಾಸ್ತ್ರದ ವಿದ್ಯಾರ್ಥಿಗಳು ನಿರ್ವಹಿಸಬೇಕಾದ ಕೆಲಸಗಳನ್ನು ಮಾಧ್ಯಮದವರು ಮಾಡುತ್ತಿದ್ದಾರೆ.
ಸಮಾಜಶಾಸ್ತ್ರ ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯ ಪುಸ್ತಕ ಎಂದರೆ ವೃತ್ತ ಪತ್ರಿಕೆಗಳಾಗಿವೆ. ಸಮಾಜಶಾಸ್ತ್ರದ ವಿದ್ಯಾರ್ಥಿಗಳು ಮೈಯಲ್ಲ ಕಿವಿಯಾಗಿ ಕೇಳಿಸಿಕೊಂಡರೆ ಮಾತ್ರ ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದರು. 

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಡಾ| ಮಲ್ಲಿಕಾ ಎಸ್‌. ಘಂಟಿ, ಕನ್ನಡ ವಿವಿಯ ದೂರಶಿಕ್ಷಣ ನಿರ್ದೇಶನಾಲಯವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳು ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣದ ಕಲಿಕಾ ಸಾಮಗ್ರಿಗಳನ್ನು ಓದುತ್ತಾರೆ. ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣದ 13 ವಿದ್ಯಾರ್ಥಿಗಳು ಪದವಿ ಕಾಲೇಜುಗಳಿಗೆ ಉಪನ್ಯಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರು.

ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ಆ ವಿಭಾಗದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ದೂರ ಶಿಕ್ಷಣದ ಮೂಲಕ ಪ್ರಯತ್ನ ನಡೆಸಿದೆ. ಶ್ರದ್ಧೆ, ಪರಿಶ್ರಮ, ಪ್ರಯತ್ನ ಇಲ್ಲದವರು ಏನು ಆಗಲು ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ ಗಳ ಬಳಕೆಯಿಂದ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ವೇಳೆಯನ್ನು ವ್ಯರ್ಥ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ಅಪಾಯದಿಂದ ಎಚ್ಚೆತ್ತುಕೊಳ್ಳಬೇಕು. 

ಮಾಧ್ಯಮ ಮತ್ತು ಸಮಾಜ ಎರಡು ಒಟ್ಟಾಗಿ ಸಾಗಬೇಕು. ಅಂತಿಮ ಸತ್ಯವನ್ನು ಹುಡುಕುವ ಪ್ರಯತ್ನ ವಿದ್ಯಾರ್ಥಿಗಳು
ಮಾಡಬೇಕೆಂದು ಕಿವಿಮಾತು ಹೇಳಿದರು. ಹಂಪಿ ಕನ್ನಡ ವಿವಿಯ ಕುಲಸಚಿವ ಡಾ| ಡಿ.ಪಾಂಡುರಂಗಬಾಬು ಮಾತನಾಡಿದರು. ದೂರಶಿಕ್ಷಣದ ವಿದ್ಯಾರ್ಥಿಗಳು, ವಿವಿಧ ಕೋರ್ಸ್‌ಗಳ ಸಂಚಾಲಕರು, ಸಂಪನ್ಮೂಲ ವ್ಯಕ್ತಿಗಳು, ಡೀನರ್‌, ಅಧ್ಯಾಪಕರು ಇದ್ದರು.  

ಶ್ರದ್ಧೆ, ಪರಿಶ್ರಮ, ಪ್ರಯತ್ನ ಇಲ್ಲದವರು ಏನು ಆಗಲು ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ ಗಳ ಬಳಕೆಯಿಂದ
ವಿದ್ಯಾರ್ಥಿಗಳು ತಮ್ಮ ಅಮೂಲ್ಯ ವೇಳೆಯನ್ನು ವ್ಯರ್ಥ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ಅಪಾಯದಿಂದ
ಎಚ್ಚೆತ್ತುಕೊಳ್ಳಬೇಕು. ಮಾಧ್ಯಮ ಮತ್ತು ಸಮಾಜ ಎರಡೂ ಒಟ್ಟಾಗಿ ಸಾಗಬೇಕು. ಅಂತಿಮ ಸತ್ಯವನ್ನು ಹುಡುಕುವ ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕು.

ಡಾ| ಮಲ್ಲಿಕಾ ಘಂಟಿ, ಕುಲಪತಿ, ಕನ್ನಡ ವಿವಿ.

Advertisement

Udayavani is now on Telegram. Click here to join our channel and stay updated with the latest news.

Next