ಅಜೆಕಾರು : ಹಿರ್ಗಾನದಲ್ಲಿ ಮೊದಲ ಸಾಹಿತ್ಯ ಸಮ್ಮೇಳನ ಬಿ.ಎಂ. ಶಾಲೆಯಲ್ಲಿ ನಡೆಯುತ್ತಿರುವುದು ಗ್ರಾಮಕ್ಕೆ ಸಂದ ಗೌರವವಾಗಿದೆ.
ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನಗಳು ಊರಿಗೆ ಶೋಭೆ ತರುತ್ತವೆ. ಶಾಲೆಯಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರ ನಡೆದರೆ ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಶ್ರೀ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನ ಹಿರ್ಗಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಹೇಳಿದರು.
ಆದಿಗ್ರಾಮೋತ್ಸವ ಸಮಿತಿ, ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಲಯನ್ಸ್ ಕ್ಲಬ್ ಮುನಿಯಾಲು ಸಂಸ್ಥೆಗಳ ಆಶ್ರಯದಲ್ಲಿ ಹಿರ್ಗಾನ ಬಿ.ಎಂ. ಶಾಲೆಯ ರಾಮಕೃಷ್ಣ ಕಡಂಬ ಮತ್ತು ಶಿಲ್ಪಿ ವಾದಿರಾಜ ಆಚಾರ್ಯ ಅವರ ಸ್ಮರಣಾರ್ಥ ವೇದಿಕೆಯಲ್ಲಿ ನಡೆದ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹಿರಿಯರು ಹಾಕಿಕೊಟ್ಟ ಅಭಿವೃದ್ಧಿಯ ಮಂತ್ರಗಳ ಆಧಾರದಲ್ಲಿಯೇ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಸಮ್ಮೇಳನದ ಆಶಯ ಭಾಷಣ ಮಾಡಿದ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಎನ್. ದುರ್ಗಾ, ಉದ್ಯಮಿ ಚೇತನ ಕುಮಾರ್ ಕೊರಳ, ಸಹಕಾರಿ ಧುರೀಣ ಸಿರಿಯಣ್ಣ ಶೆಟ್ಟಿ , ಮುಖ್ಯೋಪಾಧ್ಯಾಯಿನಿ ಆಶಾ ಕ್ಲೇರಾ ವಾಜ್, ಕಾಪು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುಂಡಲೀಕ ಮರಾಠೆ, ಹಾಡಿ ಗರಡಿ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಕಾರ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಣೈ, ಹೆಬ್ರಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ ಪೂಜಾರಿ, ಯುವ ಉದ್ಯಮಿ ಜಗದೀಶ ಶೆಟ್ಟಿ ದೆಪ್ಪುತ್ತೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಕುಮಾರ್ ಕೆ.ಪಿ., ಸಣ್ಣ ಉಳಿತಾಯದ ಮಹಿಳಾ ಸಾಧಕಿ. ಕೆ.ಪಿ. ಪದ್ಮಾವತಿ, ಯುವ ವಾಗ್ಮಿ ಪ್ರದ್ಯುಮ್ನ ಮೂರ್ತಿ ಕಡಂದಲೆ, ಸಮಿತಿಯ ಮಕ್ಕಳ ವಿಭಾಗದ ಸುನಿಧಿ ಎಸ್. ಅಜೆಕಾರು, ಸುನಿಜಾ ಅಜೆಕಾರು, ಮುಜೂರು ಹಿರ್ಗಾನ ಪ್ರೌಢಶಾಲೆಯ ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ ಅತಿಥಿಗಳಾಗಿದ್ದರು.
ಸಮ್ಮೇಳನ ಸಂಘಟಕ ಡಾ| ಶೇಖರ ಅಜೆಕಾರು ಪ್ರಸ್ತಾವಿಕವಾಗಿ ಮಾತನಾಡಿದರು. ಹಿರ್ಗಾನ ಪಂಚಾಯತ್ ಅಧ್ಯಕ್ಷ ಸಂತೋಷ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ವಂದಿಸಿದರು. ಯುವ ಕವಯಿತ್ರಿ ಕಾವ್ಯಾ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು.
ಸರಿ -ತಪ್ಪು ವಿಮರ್ಶಿಸಿ ಪ್ರಚುರಪಡಿಸಿ
ಸಮ್ಮೇಳನಾಧ್ಯಕ್ಷತೆ ವಹಿಸಿದ ಮಂಜುನಾಥ ಬೊರ್ಗಲ್‌ಗುಡ್ಡೆ ಮಾತನಾಡಿ ಆಧುನಿಕ, ತಾಂತ್ರಿಕ ವೇಗದ ಈ ಯುಗದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಪೊಳ್ಳು ಸಮಾಜ ನಿರ್ಮಾಣ ವಾಗುವ ಆತಂಕವಿದೆ. ನಮಗೆ ಇಷ್ಟವಾಗುವಂತೆ ಬಂದ ಅಭಿಪ್ರಾಯಗಳನ್ನು ಹಿಂದೆ ಮುಂದೆ ನೋಡದೆ, ತಾನು ಇಷ್ಟಪಡುವ ಬರಹಗಾರ ಬರೆದ ಲೇಖನವನ್ನು ವಿಮರ್ಶಿಸದೆ ಪ್ರಚಾರ ಮಾಡುವ ಮೂಲಕ ಸುಳ್ಳನ್ನು ಹರಡುವ ಕೆಟ್ಟ ಸಂಪ್ರದಾಯ ಬೆಳೆಯುತ್ತಿದೆ. ಆ ಕುರಿತ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.