Advertisement
ಜಿಎಸ್‌ಟಿ ಆರಂಭವಾಗುವುದಕ್ಕೆ ಮೊದಲೇ ಸರ್ವಿಸ್ ಚಾರ್ಜ್ ಬಗ್ಗೆ ಜಟಾಪಟಿಗಳು ಆರಂಭವಾಗಿದ್ದವು. ಶನಿವಾರ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹೋಟೆಲ್‌ಗಳು, ರೆಸ್ಟಾರೆಂಟ್‌ಗಳು ಸರ್ವಿಸ್ ಚಾರ್ಜ್ ವಿಧಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ. ಅದೊಂದು ಗ್ರಾಹಕನ ವತಿಯಿಂದ ಆತ ಇಷ್ಟ ಪಟ್ಟರೆ ಮಾತ್ರ ನೀಡಬೇಕಾದ ಶುಲ್ಕ ಎಂದು ಅವಿನಾಶ್ ಕೆ.ಶ್ರೀವಾಸ್ತವ ಎಂದು ಹೇಳಿದ್ದಾರೆ. ಈ ಬಗ್ಗೆ ಏಪ್ರಿಲ್‌ನಲ್ಲಿಯೇ ಸುತ್ತೋಲೆ ಹೊರಡಿಸ ಲಾಗಿತ್ತು. ಹೋಟೆಲ್‌ಗಳು ಅದನ್ನು ಉಲ್ಲಂಘನೆ ಮಾಡುವುದು ಕಂಡು ಬಂದರೆ ಗ್ರಾಹಕರು ಕೋರ್ಟ್ ಮೆಟ್ಟಿಲೇರಬಹುದು ಎಂದಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎನ್‌ಆರ್‌ಎಐ ಸರ್ವಿಸ್ ಚಾರ್ಜ್ ಪಡೆಯುವುದು ಕಾನೂನಿನ ಉಲ್ಲಂಘನೆ ಅಲ್ಲ. ನಿಯಮಗಳು ಕಾನೂನು ಅಲ್ಲ. ಸರಕಾರದ ಹೇಳಿಕೆ ಜನರಲ್ಲಿ ಗೊಂದಲ ಉಂಟು ಮಾಡುತ್ತದೆ ಎಂದು ಒಕ್ಕೂಟ ಹೇಳಿದೆ. ವಿವರ ಕಡ್ಡಾಯ: ಮುಂದಿನ ವರ್ಷದಿಂದ ಆನ್‌ಲೈನ್‌ಗಳಲ್ಲಿ ಮಾರಾಟ ಮಾಡುವ ಎಲ್ಲ ವಸ್ತುಗಳಲ್ಲಿ ಎಂಆರ್‌ಪಿ ಮತ್ತು ಇತರ ವಿವರಗಳು ಮುದ್ರಿತವಾಗಿರುವುದು ಕಡ್ಡಾಯ ಎಂದು ಕೇಂದ್ರ ಹೇಳಿದೆ. ಮಳಿಗೆಗಳಲ್ಲಿರುವ ವಸ್ತುಗಳಲ್ಲಿ ಯಾವ ರೀತಿ ಮುದ್ರಿತವಾಗಿರುತ್ತದೆಯೋ ಅದೇ ಮಾದರಿಯಲ್ಲಿ ಆನ್ ಲೈನ್‌ನಲ್ಲಿರುವ ವಸ್ತುಗಳಿಗೂ ನಿಯಮ ಕಡ್ಡಾಯವೆಂದಿದೆ ಸರಕಾರ.