Advertisement
ಗುರುಪುರ ನದಿಯ ಸಮೀಪ ಅದ್ಯಪಾಡಿಯಲ್ಲಿ ಬಾವಿ, ಕೆರೆಗಳು ನೀರಿನ ಆಸರೆಗಳು. ಈಗ ಬಾವಿಗಳಲ್ಲಿ ನೀರಿಲ್ಲ ವಾಗಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಸದ್ಯ ಕುಡಿಯುವ ನೀರಿಗೆ ಅಲ್ಲಿನ ನಿವಾಸಿಗಳು ಟ್ಯಾಂಕರ್ ನೀರನ್ನೇ ಅಶ್ರಿತರಾಗಿದ್ದಾರೆ. ಬೇಸಗೆಯಲ್ಲಿಯೂ ನೀರು ಇಂಗದಿರು ವ ಬಾವಿಗಳು ಈ ಬಾರಿ ಕೆಸರು ಕಾಣಸಿಗುವ ಪರಿಸ್ಥಿತಿಯಲ್ಲಿದೆ. ನೀರಿನ ಪರಿಸ್ಥಿತಿ, ಅಂತರ್ಜಲ ಮಟ್ಟ ಎಷ್ಟರವರೆಗೆ ಕುಸಿದಿದೆ ಎಂಬುವುದು ತಿಳಿಯಬಹುದು. ಮನೆಗಳ ಬಾವಿಯಲ್ಲಿ ನೀರಿಲ್ಲದೆ ಕಾರಣ ಒಂದು ಕಿ.ಮೀ.ದೂರದಿಂದ ಜನರು ಕೊಡದಲ್ಲಿ ನೀರು ತರುತ್ತಿದ್ದಾರೆ. ಕೆಲವರು ಈಗಾಗಲೇ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಸಾರ್ವಜನಿಕ ಒಂದು ಬಾವಿ, ಕೊಳವೆಬಾವಿಗಳಿಂದ ಇಲ್ಲಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಕೊಳವೆಬಾವಿಯಲ್ಲಿಯೂ ಕೂಡ ಅಂತರ್ಜಲಮಟ್ಟ ಕುಸಿದ ಕಾರಣ ಅರ್ಧ ತಾಸಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಹೆಚ್ಚು ಬಾವಿಗಳು ಇರುವುದರಿಂದ ಪಂಚಾಯತ್‌ನಿಂದ ನೀಡಲಾಗುವ ಕುಡಿಯುವ ನೀರಿಯನ್ನು ಇಲ್ಲಿನ ನಿವಾಸಿಗಳು ತೆಗೆದುಕೊಂಡಿಲ್ಲ. ಈಗ ಬಾವಿಗಳಲ್ಲಿ ನೀರಿಲ್ಲದ್ದರಿಂದ ಜನರಿಗೆ ಸಮಸ್ಯೆಯಾಗಿದೆ. ಅದ್ಯಪಾಡಿ ದೇವಸ್ಥಾನದ ಬಳಿಯ ಬಾವಿಯಲ್ಲಿ ನೀರಿಲ್ಲ ಎಂದು ಕೆಸರನ್ನು ತೆಗೆದರೂ ಈಗ ದಿನದಲ್ಲಿ ಮುಕ್ಕಾಲು ತಾಸು ನೀರು ಸಿಗುತ್ತದೆ. ಇದು 200 ಮನೆಗಳಿಗೆ ವಾರಕ್ಕೊಂದು ಬಾರಿಯಂತೆ ನೀರು ನೀಡಲಾಗುತ್ತದೆ. ಈ ಪ್ರದೇಶದಲ್ಲಿ ಈ ಬಾವಿಯೇ ಕುಡಿಯುವ ನೀರಿಗೆ ಅಶ್ರಯವಾಗಿದೆ.
Related Articles
ಈ ಪ್ರದೇಶ ಹೆಚ್ಚಿನ ಬಾವಿಗಳು 30ರಿಂದ 40 ಅಡಿ ಅಳವಾಗಿದೆ. ಗುರುಪುರ ನದಿ ಸಮೀಪದಲ್ಲಿ ಹರಿಯುವ ಕಾರಣ ಹೆಚ್ಚು ಅಳದ ಬಾವಿಯನ್ನು ಕೊರೆಯುವ ಆವಶ್ಯಕತೆಯಿರಲಿಲ್ಲ, ಆದರೆ ಈಗ ಬಾವಿಗಳಲ್ಲಿ ನೀರಿಲ್ಲರಿರುವುದರಿಂದ ಬಾವಿಗಳನ್ನು ಇನ್ನೂ ಅಳಕ್ಕೆ ಕೊರೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ ಇಲ್ಲಿನ ನಿವಾಸಿಗಳು.
Advertisement
ಪಂಚಾಯತ್‌ಗೆ ಈ ಪ್ರದೇಶದಲ್ಲಿ ನೀರಿಲ್ಲದ ಬಗ್ಗೆ ಗಮನಕ್ಕೆ ತರಲಾಗಿದೆ. ಅದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುವುದು ಇಲ್ಲಿನ ನಿವಾಸಿಗಳ ಅಳಲು. ಕೆರೆ, ಬಾವಿಗಳು ಹೂಳು, ಕೆಸರಿನಿಂದ ತುಂಬಿದ್ದು ಸ್ವತ್ಛ ಕಾರ್ಯ ಎಲ್ಲೆಡೆ ನಡೆಯಬೇಕಾಗಿದೆ. ಹೆಚ್ಚಿನ ಖಾಸಗಿ ಹಾಗೂ ಸಾರ್ವಜನಿಕ ನೀರಿನ ಅಶ್ರಯವಾದ ಬಾವಿ, ಕೆರೆ, ಮದಕಗಳು ಇಂದು ಮುಚ್ಚಿ ಹೋಗುತ್ತಿದೆ. ಇದಕ್ಕೆ ಉದ್ಯೋಗ ಖಾತರಿ ಯೋಜನೆ ಅನ್ವಯವಾಗುವಂತೆ ಮಾಡಬೇಕಾಗಿದೆ. ಇದು ಒಂದು ಪ್ರಯತ್ನವಾದಲ್ಲಿ ನೀರಿನ ಸಮಸ್ಯೆಗಳು ಕಡಿಮೆಯಾಗಬಹುವುದು.ಬಾವಿಗಳು, ಕೆರೆಗಳು, ಮದಕಗಳು ಉಳಿಯಬಹುವುದು. ನಳ್ಳಿ ನೀರಿನ ಉಪಯೋಗದಿಂದಾಗಿ ಬಾವಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಎಲ್ಲೆಡೆ ಬಾವಿಗಳನ್ನು ಮುಚ್ಚುತ್ತಿರುವುದು ಕಂಡು ಬರುತ್ತಿದೆ.
ಟ್ಯಾಂಕರ್ ಮೂಲಕ ನೀರು ಸರಬರಾಜುಟ್ಯಾಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಾಟೆಬೈಲಿನಲ್ಲಿ ಕೊಳವೆಬಾವಿಗೆ ಪೈಪ್‌ಲೈನ್ ವಿಸ್ತರಣೆ ಕಾಮಗಾರಿ ನಡೆದಿದೆ. ದೈವಂಗಳಗುಡ್ಡೆಯ ಬಾವಿಯ ನೀರು ಒಳ್ಳೆದಿಲ್ಲದಿರುವುದರಿಂದ ನೀರನ್ನು ಎರಡು ದಿನಗಳಿಗೊಮ್ಮೆ ನೀಡಲಾಗುತ್ತದೆ.ಅದ್ಯಪಾಡಿಯಲ್ಲಿ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಬೇಡಿಕೆ ಬಂದಿಲ್ಲ, ಬಂದರೆ ನೀಡಲಾಗುತ್ತದೆ.
– ರೋಹಿಣಿ ಬಿ., ಪಿಡಿಒ, ಕಂದಾವರ ಗ್ರಾಮ ಪಂಚಾಯತ್ -ಸುಬ್ರಾಯ ನಾಯಕ್ ಎಕ್ಕಾರು