Advertisement

ನಿರಂತರ 8 ತಾಸು ವಿದ್ಯುತ್‌ ನೀಡಿದರೆ ರೈತರ ಬಾಳು ಬಂಗಾರ

05:34 PM May 01, 2022 | Team Udayavani |

ಬಸವನಬಾಗೇವಾಡಿ: ರಾಜ್ಯ ಸರ್ಕಾರ ಅನ್ನದಾತರಿಗೆ ನಿರಂತರ 8 ತಾಸು ವಿದ್ಯುತ್‌ ನೀಡಿದಲ್ಲಿ ಅನ್ನದಾತರ ಬಾಳು ಹಸನಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೀನಮೇಷ ಮಾಡುತ್ತಿರುವುದು ವಿಷಾದದ ಸಂಗತಿ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನಿಗೆ ನಿರ್ಮಿಸಲಾದ ಗೋದಾಮು ಕಟ್ಟಡ ಉದ್ಘಾಟನೆ ಹಾಗೂ ಕಸದ ತೊಟ್ಟೆ ಮತ್ತು ಹೊಲಿಗೆ ಯಂತ್ರ, ಕಂಪ್ಯೂಟರ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಹಗಲು 4, ರಾತ್ರಿ 4 ತಾಸು ನಿತಂತರ ವಿದ್ಯುತ್‌ ನೀಡಬೇಕು ಎಂದು ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರೂ ಕೂಡಾ ಸರ್ಕಾರ ಸಮರ್ಪಕವಾಗಿ ವಿದ್ಯುತ್‌ ಪೂರೈಸುತ್ತಿಲ್ಲ. ಇದರಿಂದ ಕುಡಿಯುವ ನೀರು, ನೀರಾವರಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ರೈತರು ಮತ್ತು ಸಾರ್ವಜನಿಕರು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಬಸವನಬಾಗೇವಾಡಿ ಮತಕ್ಷೇತ್ರ ಹಾಗೂ ತಾಲೂಕಿನಾದ್ಯಾಂತ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಹಾಗೂ ಕಾಲುವೆಗಳ ಮೂಲಕ ಕರೆ ತುಂಬುವ ಯೋಜನೆ ಸೇರಿದಂತೆ ಅನೇಕ ಮೂಲಗಳಿಂದ ನೀರಿನ ಸೌಕರ್ಯವಿದ್ದರು ಕೂಡಾ ಸಮರ್ಪಕವಾದ ವಿದ್ಯುತ್‌ ಇಲ್ಲದ ಕಾರಣ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗಲಾದರೂ ರಾಜ್ಯಾದ್ಯಂತ ನಿರಂತರ 8 ತಾಸು ವಿದ್ಯುತ್‌ ನೀಡಿದಲ್ಲಿ ರೈತರ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮುತ್ತಗಿ ಗ್ರಾಪಂ ಅಧ್ಯಕ್ಷ ತೇಜಶ್ವಿ‌ನಿ ಉನ್ನಿಭಾವಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗೌರಿಶಂಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಮೇಶ ಸೂಳಿಭಾವಿ, ಟಿಎಪಿಎಂಸಿ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ಭೀಮಸಿ ಜಗ್ಗಲ್‌, ಗ್ರಾಪಂ ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ, ಸದಸ್ಯರಾದ ಈಶ್ವರ ದೇವರಗುಡಿ, ಶಿವಾಜಿ ಪವಾರ, ಬಸಪ್ಪ ದೇವನಗಾವಿ, ಮೈಬೂಬ ಮುಜಾವರ, ಭೀಮನಗೌಡ ಪಾಟೀಲ, ಅಪ್ಪು ಹಿರೇಮಠ, ಗೀತಾ ಪೂಜಾರಿ, ಮಂಜುಳಾ ಚವ್ಹಾಣ, ಕವಿತಾ ಬಡಿಗೇರ, ರಾಜು ದೊಡ್ಡಮನಿ, ಸೀತಾ ದೊಡ್ಡಮನಿ, ನಿಂಗು ಹಚ್ಚಾಳ, ಶಿಲ್ಪಾ ಶಿಲ್ಪಿ, ತಾಪಂ ಅಧಿಕಾರಿ ಉದಯಕುಮಾರ, ಪಿಡಿಒ ಬಿ.ಎಸ್‌. ಬಡಿಗೇರ ಸೇರಿದಂತೆ ಅನೇಕರು ಇದ್ದರು. ಪ್ರೇಮು ಮ್ಯಾಗೇರಿ ಸ್ವಾಗತಿಸಿದರು. ಶಶಿಧರ ಪಾಟೀಲ ನಿರೂಪಿಸಿದರು. ಅಪ್ಪು ಧನಶೆಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next