Advertisement

“ಮೋದಿ ರೈತ ಪರವಾಗಿದ್ದರೆ ಸಾಲ ಮನ್ನಾ ಮಾಡಲಿ’

03:45 AM Jul 07, 2017 | Team Udayavani |

ಮೂಲ್ಕಿ:  ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರಿಗೆ ಪೊಳ್ಳು ಭರವಸೆಗಳನ್ನು ನೀಡುತ್ತಾ ಮೂರು ವರ್ಷಗಳಿಂದ ವಂಚಿಸುತ್ತಿದ್ದಾರೆ. ಅಭಿವೃದ್ಧಿಯ ನೆಪದಲ್ಲಿ ಪ್ರಪಂಚ ಸುತ್ತುತ್ತಿರುವ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಮೊದಲು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು  ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಹೇಳಿದರು.

Advertisement

ಅವರು ಮೂಲ್ಕಿ -ಮೂಡಬಿದಿರೆ ಕ್ಷೇತ್ರದ ಯುವ ಕಾಂಗ್ರೆಸ್‌ ವತಿಯಿಂದ ಗುರುವಾರ ಮೂಲ್ಕಿಯ ಕಾರ್ನಾಡು ಸ್ಟೇಟ್‌ ಬ್ಯಾಂಕಿನ ಎದುರಿ ನಲ್ಲಿ ರೈತರ ಸಾಲ ಮನ್ನಾ ಆಗ್ರಹಿಸಿ ನಡೆಸಿದ ಪ್ರತಿ ಭಟನೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮಟ್ಟದಲ್ಲಿ 23 ಲಕ್ಷ ಕುಟುಂಬದ 50 ಸಾವಿರ ರೂ.ವರೆಗಿನ  ಮೊತ್ತದ ಸಾಲ ಹೊಂದಿರುವ ರೈತರನ್ನು ಸಂಕಷ್ಟದಿಂದ ರಕ್ಷಿಸಿದ್ದಾರೆ ಎಂದರು.

ಮೂಡಬಿದಿರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಲೇರಿಯನ್‌ ಸಿಕ್ವೇರ ಮಾತನಾಡಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಇತ್ತೀಚೆಗೆ ನಮ್ಮ ಬದುಕಿನ ಜೀವನಾಡಿ, ಅನ್ನದಾತನಾಗಿರುವ ರೈತನ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ ಅಲ್ಲ ದೆ, ಸಾಲ ಮನ್ನಾ  ಅಸಾಧ್ಯ ಎಂದಿದ್ದಾರೆ. ಇಂಥ ವರಿಗೆ ರೈತರ ಬಗ್ಗೆ ಕಾಳಜಿ ಇರಲು ಸಾಧ್ಯವೇ ಇಲ್ಲ ಎಂದರು.
ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಕೋಟ್ಯಾನ್‌ ಮಟ್ಟು ಮಾತನಾಡಿ, ರಾಜ್ಯ ಸರಕಾರ ದಿಂದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆ ಮತ್ತು ಬವಣೆಗೆ ತಕ್ಕ ಪರಿಹಾರ ಕೊಡುವ ಹಲವಾರು ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದು ಹೇಳಿದರು.

ಮೋದಿ ಅವರು “ಅಚ್ಛೇ ದಿನ್‌ ಆಯೇಗಾ’ ಎಂದು ಹೇಳುತ್ತಾ ಹಲವಾರು ಕಠಿನವಾದ ಕಾನೂನಿನ ಮೂಲಕ ಬಡವರಿಗೆ ಕಷ್ಟ  ಕೊಡುವ ಕೆಲಸ ಮಾಡುತ್ತಿದ್ದಾರೆ. ಅವೆಷ್ಟೋ ಬಡವರು ಸಂಕ ಷ್ಟಕ್ಕೆ  ಸಿಲು ಕಿ ದ್ದರೂ ಆ ಬಗ್ಗೆ ಚಿಂತಿಸದೆ  ಶ್ರೀಮಂತ ವರ್ಗದವರ ಜತೆಗೆ ಕೈಜೋ ಡಿಸಿ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆಯ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ  ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಹೇಳಿದರು.

ಮೂಡಬಿದಿರೆ ಯುವ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಹಾಸ ಸನಿಲ್‌ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್‌. ವಸಂತ್‌ ಬೆರ್ನಾಡ್‌, ಮೂಡಬಿದಿರೆ ಪುರಸಭಾ ಸದಸ್ಯ ಸುರೇಶ್‌ ಕೋಟ್ಯಾನ್‌, ಸಂತೋಷ್‌ ಶೆಟ್ಟಿ, ನಗರ ಪಂಚಾಯತ್‌ ಸದಸ್ಯ ಯೋಗೀಶ ಕೋಟ್ಯಾನ್‌, ಬಶೀರ್‌ ಕುಳಾಯಿ, ಅಶೋಕ್‌ ಪೂಜಾರ್‌, ಸಂದೀಪ್‌ ಚಿತ್ರಾಪು, ಕಾಂಗ್ರೆಸ್‌  ಸೇವಾದಳದ ಅಧ್ಯಕ್ಷ  ಭೀಮಾಶಂಕರ್‌, ಕಾರ್ಯದರ್ಶಿ ಪಲ್ಲವಿ, ಮೂಲ್ಕಿ ಯುವ ಕಾಂಗ್ರೆಸ್‌ ಅಧ್ಯಕ್ಷ  ಹಕೀಂ ಮೂಲ್ಕಿ, ಉಪಾಧ್ಯಕ್ಷ ಸಫìರಾಜ್‌, ಮಾಜಿ ಅಧ್ಯಕ್ಷ ಲೋಕೇಶ್‌ ಕೋಟ್ಯಾನ್‌, ಮುಖಂಡರಾದ ಮಂಜುನಾಥ ಕಂಬಾರ, ಸಾಹುಲ್‌ ಹಮೀದ್‌, ಮಯ್ಯದ್ದಿ  ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next