ಭಾಲ್ಕಿ: ನಾಗರಿಕರಲ್ಲಿ ಕಾನೂನಿನ ಬಗ್ಗೆ ಸೂಕ್ತ ತಿಳಿವಳಿಕೆ ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ
ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಭುಸಗುಂಡೆ ಹೇಳಿದರು.
ಅಹ್ಮದಾಬಾದ್ ಗ್ರಾಮದಲ್ಲಿ ನಡೆದ ಕಾನೂನು ಸಾಕ್ಷರತಾ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ
ಅವರು, ಕಾನೂನಿನ ಜ್ಞಾನ ಇಲ್ಲದಿದ್ದಲ್ಲಿ ಸರಕಾರದ ಸವಲತ್ತು ಸೇರಿದಂತೆ ಜೀವನದಲ್ಲಿ ಸಣ್ಣ ವಿಚಾರದಲ್ಲೂ ತೊಂದರೆ
ಅನುಭವಿಸುಬೇಕಾಗುತ್ತದೆ. ಹಾಗಾಗಿ ಎಲ್ಲರೂ ಕಾನೂನಿನ ಬಗ್ಗೆ ತಿಳಿದುಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ವಕೀಲ ಅನಿಮೇಶ ಆನಂದವಾಡೆ, ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಸತೀಶ ಭೋರಾಳೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿದರು. ಗ್ರಾಪಂ ಸದಸ್ಯರಾದ ಶಾಂತಾಬಾಯಿ ಹರಿಹರಾವ್, ಕಂಬಳಾಬಾಯಿ ರೇವಣಪ್ಪ, ಶಿಕ್ಷಣ ಸಂಯೋಜಕ ಕೆ.ಎಸ್. ಅಶೋಕ, ವಕೀಲ ಧನರಾಜ ಸೂರ್ಯವಂಶಿ ಇದ್ದರು. ಶ್ರೀಧರ ಜವರೇಗೌಡ್ ಸ್ವಾಗತಿಸಿದರು.
ಗಣಪತರಾವ್ ಕಲ್ಲೂರೆ ವಂದಿಸಿದರು. ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನ್ಯಾಯಾವಾದಿಗಳ ಸಂಘ
ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.