Advertisement

ಕಸ್ತೂರಿ ರಂಗನ್‌ ವರದಿ ಬೇಡವಾದರೆ ಕೇಂದ್ರದ ಬಿಜೆಪಿ ಸರಕಾರ ತಡೆ ನೀಡಲಿ: ರಮಾನಾಥ ರೈ

11:49 PM Jul 31, 2023 | Team Udayavani |

ಮಂಗಳೂರು: ಕಸ್ತೂರಿ ರಂಗನ್‌ ವರದಿ ಜಾರಿಯ ವಿಚಾರದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್‌ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬಿಟ್ಟು, ಕೇಂದ್ರ ಸರಕಾರದ ಮೂಲಕ ಅದನ್ನು ಜಾರಿಗೊಳಿಸುವುದನ್ನು ತಡೆಹಿಡಿ ಯಲು ಅವಕಾಶವಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಸ್ತೂರಿ ರಂಗನ್‌
ವರದಿ ಜಾರಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾ ಗಿರುವ ದೇಶದ 10 ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ಇದನ್ನು ನಿಲ್ಲಿಸುವ ಅಧಿಕಾರ ಕೇಂದ್ರ ಸರಕಾರ ಕ್ಕಿದೆ. ಕೇಂದ್ರದ ಬಿಜೆಪಿ ಸರಕಾರ ವರದಿಯನ್ನು ತಡೆಯಲಿ ಎಂದರು.

ಕಸ್ತೂರಿ ರಂಗನ್‌ ವಿಚಾರಕ್ಕೆ ಸಂಬಂಧಿಸಿ ನಾನು ಪರಿಸರ ಸಚಿವ ನಾಗಿದ್ದಾಗಲೇ ಹಲವು ಬಾರಿ ಕೇಂದ್ರ ಸರಕಾರ ಕರಡು ಅಧಿಸೂಚನೆಗೆ ತಿದ್ದು ಪಡಿಗಾಗಿ ಅಭಿಪ್ರಾಯ ಕೋರಿತ್ತು. ಆ ಸಂದರ್ಭ ತಜ್ಞರ ಸಲಹೆ ನೀಡಲಾಗಿದೆ. ಅದಲ್ಲದೆ, ಜನವಸತಿ ಬಗ್ಗೆ ಚರ್ಚೆ ನಡೆಯುವ ಸಂದರ್ಭ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರದಿ ಜಾರಿಗೊಳಿಸುವುದು ಬೇಡ ಎಂಬುದಾಗಿಯೂ ನನ್ನ ಅವಧಿಯಲ್ಲೇ ಪತ್ರ ಬರೆಯಲಾಗಿದೆ. ಇದು ಕೇವಲ ಒಂದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯ ಅಲ್ಲ. ಇದನ್ನು ರಾಜ್ಯ ಸರಕಾರ ನಿರ್ಧಾರ ಮಾಡುವುದೂ ಅಲ್ಲ. ರದ್ದು ಮಾಡಬೇಕಾದರೆ ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ರಾಜ್ಯದಲ್ಲಿಯೂ ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಇತ್ತು. ಆ ಸಂದರ್ಭದಲ್ಲಿಯೇ ರದ್ದುಪಡಿಸುವ ಕಾರ್ಯ ನಡೆಯಬಹುದಿತ್ತು. ಆದರೆ ಇದೀಗ ರಾಜಕೀಯ ಮಾಡಲೆಂದೇ ಈ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್‌ ಸರಕಾರವನ್ನು ಬಿಜೆಪಿ ನಾಯಕರು ಪ್ರಸ್ತಾವಿಸುತ್ತಿರುವುದು ಪ್ರಶ್ನಾರ್ಹ ಎಂದರು.

ಜನರ ಭಾವನೆಗೆ ತೊಂದರೆಯಾಗ ಬಾರದು ಎಂಬ ಕಾರಣಕ್ಕೆ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಯಾಗಿದ್ದ ಸಿ. ರವಿ ಕುಮಾರ್‌ ಅವರು ಅಧಿಕೃತವಾಗಿ ಈ ವರದಿ ಬೇಡ ಎಂದು ವರದಿ ಸಲ್ಲಿಸಿದ್ದರು. ಅದು ಬೇಡ ಎಂದಾದರೆ ಅದನ್ನು ನಿಲ್ಲಿಸುವ ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ ಎಂದವರು ಹೇಳಿದರು.

ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಶಾಲೆಟ್‌ ಪಿಂಟೋ, ಮುಖಂಡರಾದ ಆರ್‌.ಕೆ. ಪೃಥ್ವಿರಾಜ್‌, ಜೋಕಿಂ ಡಿ’ಸೋಜಾ, ಜಯಶೀಲ ಅಡ್ಯಂತಾಯ, ಶಬೀರ್‌ ಎಸ್‌., ಶುಭೋ ದಯ ಆಳ್ವ, ಭಾಷಾ ಗುರುಪುರ, ಸುರೇಶ್‌ ಪಂಜಿಕಲ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next