Advertisement

ಕನ್ನಡ ಉಳಿದರೆ ಸಂಸ್ಕೃತಿ ಉಳಿಯುತ್ತದೆ: ಶಿವ ಪೂಜಾರಿ

01:00 AM Feb 03, 2019 | Harsha Rao |

ಬ್ರಹ್ಮಾವರ: ಕನ್ನಡ ಶ್ರೀಮಂತ ಪ್ರಾಚೀನ ಭಾಷೆ. ಕನ್ನಡ ಉಳಿದರೆ ಸಭ್ಯತೆ, ಸಂಸ್ಕೃತಿ ಉಳಿಯುತ್ತದೆ ಎಂದು ಸಾಹಿತಿ, ಲೇಖಕ ಬಾರಕೂರಿನ ಬಾಬು ಶಿವ ಪೂಜಾರಿ ಹೇಳಿದರು.

Advertisement

ಅವರು ಶನಿವಾರ ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಠಾರದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌, ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀ ರಾಮಕೃಷ್ಣ ಆಶ್ರಮ ಬೆಳಗಾವಿ ಮತ್ತು ಮಂಗಳೂರು, ಬಾರಕೂರು ಆನ್‌ಲೈನ್‌ ಡಾಟ್‌ಕಾಮ್‌, ಕನ್ನಡ ಸಾಹಿತ್ಯ ಪರಿಷತ್‌ ಬ್ರಹ್ಮಾವರ-ಬಾರಕೂರು ವಲಯದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇಯ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಇಂದು ಕನ್ನಡದ ಸ್ಥಿತಿಗತಿ ಚಿಂತಾಜನಕವಾಗಿದೆ. ಸುಮಾರು 1,800 ಕನ್ನಡ ಶಾಲೆಗಳು ಅಂತಿಮ ಹಂತದಲ್ಲಿವೆ. ನಾವು ಸಂಕಲ್ಪ ಮಾಡಿದರೆ ಖಂಡಿತ ಕನ್ನಡ ಶಾಲೆ, ಭಾಷೆ ಉಳಿಯುತ್ತದೆ ಎಂದರು.

ಬೈಂದೂರು ಕಿರಿಮಂಜೇಶ್ವರದ ಶುಭದಾ ಅಂಗ್ಲ ಮಾಧ್ಯಮ ಶಾಲೆಯ ಎಂಟನೆ  ತರಗತಿಯ ವಿದ್ಯಾರ್ಥಿನಿ ಸ್ವೀಕೃತಿ ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳ ಸ್ವರಚಿತ ಕವನ ಸಂಕಲನ ವನ್ನು ಕನ್ನಡ ಸಾಹಿತ್ಯ ಪರಿಷತ್‌ ಬ್ರಹ್ಮಾವರ-ಬಾರಕೂರು ವಲಯ ಘಟಕದ ಅಧ್ಯಕ್ಷ ಕೆ. ಅಶೋಕ್‌ ಭಟ್‌ ಚಾಂತಾರು ಬಿಡುಗಡೆಗೊಳಿಸಿದರು.

Advertisement

ಸಾ.ಶಿ.ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿ ಕಾರಿ ಮಧುಕರ ಎಸ್‌. ಶುಭಾಶಂಸನೆಗೈದರು. ಅತಿಥಿಗಳಾಗಿ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ  ನಿರ್ದೇಶಕ ಐ. ಶಶಿಕಾಂತ್‌ ಜೈನ್‌, ಬಾರಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ| ರಮೇಶ್‌ ಆಚಾರ್ಯ, ಬಾರಕೂರು ಆನ್‌ಲೈನ್‌ ಡಾಟ್‌ಕಾಮ್‌ನ ಪ್ರತಿನಿ ಧಿ ಎರಿಕ್‌ ಸೋನ್ಸ್‌, ಬಾರಕೂರು ರಂಗನಕೇರಿ ಶೆಟ್ಟಿಗಾರ್‌ ಇಂಡಸ್ಟ್ರೀಸ್‌ನ ಮಾಲಕ ಶ್ರೀನಿವಾಸ ಶೆಟ್ಟಿಗಾರ್‌, ಪ್ರಧಾನ ಸಂಘಟಕ ರಾಮ ಭಟ್ಟ ಸಜಂಗದ್ದೆ ಉಪಸ್ಥಿತರಿದ್ದರು.

ಸಮ್ಮಾನ
ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಾಗೇಶ್‌ ಶ್ಯಾನುಭಾಗ್‌ ಅವರನ್ನು ಅಭಿನಂದಿಸಲಾಯಿತು. ಕೊಕ್ಕರ್ಣೆ ಸರಕಾರಿ ಪ್ರೌಢಶಾಲೆಯ ಹತ್ತನೇ  ತರಗತಿಯ ಕ್ರೀಡಾ ಪ್ರತಿಭೆಗಳಾದ ಪ್ರಸನ್ನ, ವಿN°àಶ,  ಬಾರಕೂರು ಹೊಸಾಳದ ಸರಕಾರಿ ಹಿ.ಪ್ರಾ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಅಶ್ವಿ‌ನ್‌ ಅವರನ್ನು ಸಮ್ಮಾನಿಸಲಾಯಿತು.

ಮಕ್ಕಳ ಸ್ವರಚಿತ ಕವನಗೋಷ್ಠಿ, ಚಿಂತನಗೋಷ್ಠಿ ನಡೆಯಿತು. ಅಕ್ಷತಾ ಸ್ವಾಗತಿಸಿ, ರಶ್ಮಿತಾ ವಂದಿಸಿದರು. ವಂಧ್ಯಾ ಆರ್‌. ಭಟ್‌, ಜನಾರ್ದನ ಎಸ್‌. ಉಡುಪ  ನಿರೂಪಿಸಿದರು. ವಡ್ಡರ್ಸೆ ಪ್ರಕಾಶ್‌ ಆಚಾರ್ಯ, ಬಿ. ಅಶೋಕ್‌ ಸಿ. ಪೂಜಾರಿ  ಸಹಕರಿಸಿದರು.

ಮನಸ್ಸಿನ ಆರೋಗ್ಯ
ದೇಹದ ಬೆಳವಣಿಗೆಗೆ ಸಂತುಲಿತ ಆಹಾರ ಹೇಗೆ ಮುಖ್ಯವೋ ಹಾಗೆಯೇ ಮನಸ್ಸಿನ ಆರೋಗ್ಯಕರ ಬೆಳವಣಿಗೆಗೆ ಸಾಹಿತ್ಯದ ಓದು ಮುಖ್ಯ. ಈ ನಿತ್ಯ ಸತ್ಯ ಅರ್ಥ ಮಾಡಿಕೊಂಡು ಓದುವ ಹವ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷೆ ಸ್ವೀಕೃತಿ ಶೆಟ್ಟಿ ಹೇಳಿದರು. ಎಲ್ಲ ರಾಜ್ಯಗಳಲ್ಲೂ  ಭಾಷಾಭಿಮಾನ ಸ್ವಾಭಿಮಾನದ ಮುಕುಟವಾಗಿದೆ. ಆದರೆ ಇಂದು ಗ್ರಾಮೀಣ ಪ್ರದೇಶದ ಮಕ್ಕಳೂ ಕೂಡ ನಗರವಾಸದ ಆವೇಗದ ಸಂಕ್ರಮಣ ಕಾಲದಲ್ಲಿರುವಾಗ ಸಾಹಿತ್ಯ ಎಲ್ಲಿ ತನ್ನ ಮಹತ್ವ  ಕಳೆದುಕೊಳ್ಳುತ್ತದೋ ಎನ್ನುವ ಭಯ ಕಾಡುತ್ತಿದೆ. ಭಾಷೆಯೊಂದು ಉಳಿಯಬೇಕಾದರೆ ಶಿಕ್ಷಣದಲ್ಲಿ ಅದು ಸಶಕ್ತವಾಗಿ ಬಳಕೆಯಾಗಬೇಕು. ಒಂದನೇ ತರಗತಿಯಿಂದಲೇ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಬೇಕು. ಕನ್ನಡಕ್ಕೆ ಪ್ರಾಧಾನ್ಯ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next