ಮಂಗಳೂರು: ಕೆರಗೋಡು ಗ್ರಾಮದ ಧ್ವಜಸ್ತಂಭದಲ್ಲಿ ರಾಜ್ಯ ಸರಕಾರ ಮತ್ತೆ ಹನುಮಧ್ವಜ ಹಾರಿಸದಿದ್ದರೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರೇ “ಕೆರಗೋಡು ಚಲೋ’ ಅಭಿಯಾನ ಹಮ್ಮಿಕೊಳ್ಳುವರು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ತೆರವುಗೊಳಿಸಿದ ಕೃತ್ಯವನ್ನು ಖಂಡಿಸಿ, ಅದೇ ಜಾಗ ದಲ್ಲಿ ಹನುಮಧ್ವಜ ಮರುಸ್ಥಾಪಿ ಸಲು ಆಗ್ರಹಿಸಿ ವಿಹಿಂಪ, ಬಜರಂಗ ದಳ ವತಿಯಿಂದ ಮಿನಿವಿಧಾನ ಸೌಧ ಮುಂಭಾಗ ಗುರುವಾರ ನಡೆದ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಜರಂಗದಳದ ಎಲ್ಲ ಕಾರ್ಯ ಕರ್ತರು ಕೆರಗೋಡು ಗ್ರಾಮ ಚಲೋ ನಡೆಸಲಿದ್ದು, ಅಲ್ಲಿಯೇ ವಾಸ್ತವ್ಯ ನಡೆಸಿ, ಹನು ಮಧ್ವಜ ಮರು ಹಾರಿಸಲಿದ್ದೇವೆ ಎಂದರು.
ಅಲ್ಲಿನ ಗ್ರಾಮಸ್ಥರು 40 ವರ್ಷದ ಹಿಂದೆ ಹನುಮಧ್ವಜ ಸ್ಥಾಪಿಸಿದ್ದರು. ಯಾವುದೇ ಗಲಾಟೆ ಇರಲಿಲ್ಲ. ನಮಗೆ ರಾಷ್ಟ್ರಧ್ವಜ, ಕನ್ನಡಧ್ವಜದ ಮೇಲೆ ಗೌರವವಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಓಟ್ ಬ್ಯಾಂಕ್ ಗಾಗಿ ಹನುಮ ಧ್ವಜ ತೆರವುಗೊಳಿಸಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಕಾಂಗ್ರೆಸ್ ಹಿಂದೂ ವಿರೋಧಿ ಯಾಗಿ ವರ್ತಿಸುತ್ತಿದೆ. ಮುಂದಿನ ಚುನಾವಣೆ ಯಲ್ಲಿ ಮುಸಲ್ಮಾನರ ಮತಕ್ಕಾಗಿ ಈಗ ಹನುಮಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಆಪಾದಿಸಿದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಹಿಂಪ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಪ್ರಮುಖರಾದ ಮನೋ ಹರ ಸುವರ್ಣ, ಪುನೀತ್ ಅತ್ತಾವರ, ಲತೀಶ್ ಗುಂಡ್ಯ, ಶ್ರೀಕಾಂತ್ ಕಾಟಿಪಳ್ಳ, ಅಜಿತ್ ಕುಮಾರ್, ಭರತ್ , ನವೀನ್ ನೆರಿಯ, ಶ್ವೇತಾ, ವೈಶಾಲಿ, ಮುಂತಾದವರು ಶ್ರೀಧರ್ ಭಾಗವಹಿಸಿದ್ದರು. ವಿಹಿಂಪ, ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದರು.