Advertisement

ಹದಿನಾಲ್ಕು ಮಾರ್ಗಸೂಚಿ ಪಾಲಿಸಿದರೆ ಕೋವಿಡ್ ನಿಂದ ಗೆಲುವು ಸಾಧ್ಯ

10:30 AM Jul 28, 2020 | mahesh |

ಮಹಾನಗರ: ಎಲ್ಲರ ಸಂಘಟಿತ ಕ್ರಮಗಳು, ಬೆಂಬಲದಿಂದ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಸೋಂಕು ಹರಡುವಿಕೆ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಇದರ ಜತೆಗೆ ಕರ್ನಾಟಕ ಹೆಲ್ತ್‌ ಪ್ರಮೋಶನ್‌ ಟ್ರಸ್ಟ್‌ (ಕೆಎಚ್‌ಪಿಟಿ) 14 ಮಹತ್ವದ ಮಾರ್ಗ ದರ್ಶಿಗಳನ್ನು ಸೂಚಿಸಿದೆ. ಇವುಗಳ ಕಟ್ಟುನಿಟ್ಟಿನ ಪಾಲನೆಯಿಂದ ಕೊರೊನಾ ವಿರುದ್ಧ ಗೆಲುವು ಸಾಧಿಸಬಹುದು.

Advertisement

ಮಾರ್ಗಸೂಚಿಗಳು
– ಕೈ-ಮೈ ಸ್ಪರ್ಶಿಸದೆ ಶುಭ ಹಾರೈಸಬೇಕು.
– ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಕಚೇರಿ, ಕೋಣೆ ಗಳಲ್ಲೂ ಇದನ್ನು ಪಾಲಿಸುವುದು ಅವಶ್ಯ.
– ಸಾರ್ವಜನಿಕ ಸ್ಥಳಗಳಿಗೆ ಹೋಗು ವಾಗ, ಪ್ರಯಾಣ ಮಾಡಲೇಬೇಕಾದಾಗ, ಒಳಾಂಗಣದಲ್ಲಿ ಅಥವಾ ಒಂದು ಕೋಣೆ ಯಲ್ಲಿ ಬೇರೆ ಜನರೊಂದಿಗೆ ಇರುವಾಗ ಮಾಸ್ಕ್ ಬಳಸಲೇಬೇಕು. ಮಾಸ್ಕ್ನ ಮೂಗಿನ ಮೇಲೆ ಬರುವ ಕ್ಲಿಪ್‌ ಮೇಲ್ಮು ಖವಾಗಿರಲಿ. ಹೊರಭಾಗದ ನೆರಿಗೆಗಳು ಕೆಳಮುಖವಾಗಿರಲಿ. ಹೊರಭಾಗದ ನೆರಿಗೆ ಗಳನ್ನು ಹಿಗ್ಗಿಸಿ ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚುವಂತೆ ತೊಡಬೇಕು. ಮಾಸ್ಕ್ ಮತ್ತು ಮುಖದ ಮಧ್ಯೆ ಅಂತರ ವಿಲ್ಲದಂತೆ ಧರಿಸಬೇಕು. ಮಾಸ್ಕ್ನ ಮುಂಭಾಗವನ್ನು ಮುಟ್ಟಿಕೊಳ್ಳಬಾರದು.

ಮಾಸ್ಕ್ ಧರಿಸುವ ಮೊದಲು ಕೈಯನ್ನು ಸಾಬೂನು ಹಾಕಿ ತೊಳೆಯಬೇಕು ಅಥವಾ ಸ್ಯಾನಿಟೈಸರ್‌ ಬಳಸಬೇಕು. ತೆಗೆದ ಬಳಿಕವೂ ಸಾಬೂನು ಹಾಕಿ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು.

ಹದಿನಾಲ್ಕು ಮಾರ್ಗಸೂಚಿ ಪಾಲಿಸಿದರೆ ಕೋವಿಡ್ ನಿಂದ ಗೆಲುವು ಸಾಧ್ಯ-
– ಅನೇಕ ವಸ್ತು, ಜಾಗ ಅಥವಾ ಮೇಲ್ಮೈಗಳನ್ನು ನಾವು ಮುಟ್ಟುತ್ತೇವೆ. ಇದ ರಿಂದ ಅಲ್ಲಿರಬಹುದಾದ ವೈರಸ್‌ ದೇಹ ಸೇರುತ್ತವೆ. ಈ ಬಗ್ಗೆ ಎಚ್ಚರವಹಿಸಬೇಕು.
– ಕೆಮ್ಮುವಾಗ ಮತ್ತು ಸೀನುವಾಗ ಮೂಗು, ಬಾಯನ್ನು ಮುಚ್ಚಿಕೊಳ್ಳಬೇಕು. ಕೆಮ್ಮು, ಸೀನಿದ ಬಳಿಕ ಚೆನ್ನಾಗಿ ಕೈ ತೊಳೆಯಬೇಕು.
– ಆಗಾಗ ಸಾಬೂನಿನಿಂದ ಕೈತೊಳೆ ಯಬೇಕು, ಸ್ಯಾನಿಟೈಸರ್‌ ಬಳಸಬೇಕು.
– ಎಲ್ಲರೂ ಸಾಮಾನ್ಯವಾಗಿ ಮುಟ್ಟುವ ಸ್ಥಳಗಳನ್ನು ಕ್ರಿಮಿನಾಶಕ ಸಿಂಪಡಿಸಿ ಸ್ವಚ್ಛಗೊಳಿಸಬೇಕು.
– ಎಲ್ಲೆಂದರಲ್ಲಿ ಉಗಿಯಬಾರದು. ಇದು ಶಿಕ್ಷಾರ್ಹ ಅಪರಾಧ.
– ಅಗತ್ಯವಿದ್ದರೆ ಮಾತ್ರ ಪ್ರಯಾಣ ಮಾಡಬೇಕು.
– ಕೋವಿಡ್ ಸೋಂಕು ಲಕ್ಷಣ ಗಳಿದ್ದಲ್ಲಿ ಪರೀಕ್ಷಿಸಿಕೊಳ್ಳಬೇಕು. ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿ ಕೊಳ್ಳಬೇಕು. ಸೋಂಕು ಇರುವ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ಸಹಾನುಭೂತಿ ತೋರಿಸಬೇಕು.

– ಗುಂಪುಗೂಡುವುದು ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಮಾಜಿಕವಾಗಿ ಒಟ್ಟು ಸೇರುವುದನ್ನು ಕಡಿಮೆ ಮಾಡಬೇಕು.
– ಕೊರೊನಾ ಕುರಿತು ಸುಳ್ಳು- ನಕಾರಾತ್ಮಕ ವಿಷಯಗಳನ್ನು ಹರಡಬಾರದು.
– ಅಧಿಕೃತವಾದ, ನಂಬಲರ್ಹ ಮೂಲದಿಂದ ಕೋವಿಡ್ ಸಂಬಂಧಿ ಮಾಹಿತಿ ಪಡೆಯಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ www.mohfw.gov.in ಸಂಪರ್ಕಿಸಬೇಕು.
– ಆತಂಕ ಮತ್ತು ಒತ್ತಡವಿದ್ದಲ್ಲಿ ಆಪ್ತ ಸಮಾಲೋಚನೆ ಸೇವೆಗಳ ಬೆಂಬಲ ಪಡೆದುಕೊಳ್ಳಬೇಕು. ಇದಕ್ಕಾಗಿ ರಾಷ್ಟ್ರೀಯ ಉಚಿತ ಸಹಾಯವಾಣಿ 080-46110007ಕ್ಕೆ ಕರೆ ಮಾಡಬೇಕು.

Advertisement

ಮಾಹಿತಿಗೆ ಕರೆಮಾಡಿ
ಕೋವಿಡ್ ಸಂಬಂಧಿ ಪ್ರಶ್ನೆಗಳು ಅಥವಾ ಸಂದೇಹಗಳು ಮತ್ತು ಕೊರೊನಾ ಸೋಂಕಿನ ಲಕ್ಷಣಗಳು ಇದ್ದಲ್ಲಿ ರಾಷ್ಟ್ರೀಯ ಉಚಿತ ಸಹಾಯವಾಣಿ 1075 ಅಥವಾ ರಾಜ್ಯದ ಉಚಿತ ಸಹಾಯವಾಣಿ 14410ಕ್ಕೆ ಕರೆ ಮಾಡಬಹುದು.

ಪಾಲನೆ ಅಗತ್ಯ
ಕೋವಿಡ್ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಸೂಚಿಸಿರುವ ಮಾರ್ಗ ದರ್ಶನಗಳನ್ನು ಎಲ್ಲರೂ ಪಾಲಿಸಿದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯವಿದೆ. ಇದು ಪೂರ್ಣವಾಗಿ ಪಾಲನೆಯಾಗಬೇಕು.
 - ಡಾ| ರತ್ನಾಕರ್‌, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ( ಪ್ರಭಾರ)

Advertisement

Udayavani is now on Telegram. Click here to join our channel and stay updated with the latest news.

Next