Advertisement
ಆರ್.ಆರ್. ನಗರ ಉಪ ಚುನಾವಣೆ ಕುರಿತು ಪಾಲಿಕೆಆಯುಕ್ತರು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಮಲ್ಲೇಶ್ವರದ ಐಪಿಪಿ ಕಚೇರಿಯಲ್ಲಿ ಪೊಲೀಸ್ ಇಲಾಖೆ, ಅಬಕಾರಿ, ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಲಾಯಿತು.
Related Articles
Advertisement
ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಮಾತನಾಡಿ, ಕೋವಿಡ್ ತಡೆಗೆರೂಪಿಸಿರುವ ನಿರ್ಬಂಧಗಳು ಚುನಾವಣೆಗೂ ಅನ್ವಯಿಸಲಿದೆ. ಹೀಗಾಗಿ, 100 ಜನಕ್ಕಿಂತ ಹೆಚ್ಚಿನ ಜನ ಸೇರಿ ಸಭೆ ಸೇರುವಂತಿಲ್ಲ. ನಿಯಮ ಉಲ್ಲಂಘಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತಗಟ್ಟೆಗಳಸಂಖ್ಯೆ 381 ರಿಂದ 688 ಹೆಚ್ಚಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ವಿಂಗಡಿಸಲಾಗುತ್ತಿದೆ ಎಂದರು.
ಈ ವೇಳೆ ವಿಶೇಷ ಆಯುಕ್ತ ಜೆ.ಮಂಜುನಾಥ್, ಆರ್.ಆರ್.ನಗರ ವಲಯದ ಜಂಟಿ ಆಯುಕ್ತ ನಾಗರಾಜ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಶಿಕ್ಷೆಗೆ ಒಳಪಟ್ಟಿರುವ ಅಧಿಕಾರಿಗಳಿಗೆ ನಿರ್ಬಂಧ : ಅಧಿಕಾರಿಗಳ ಪೈಕಿ ಯಾರಾದರೂ ಇಲಾಖಾ ವಿಚಾರಣೆಯಾಗಿ ಶಿಕ್ಷಗೆಒಳಪಟ್ಟಿದ್ದರೆ,ಚುನಾವಣಾ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಉಪ ಚುನಾವಣೆ ಕಾರ್ಯಕ್ಕೆ ನೇಮಿಸಲಾಗಿರುವ ಸಿಬ್ಬಂದಿಯಲ್ಲಿ ಯಾರಾದರೂ ಈ ರೀತಿ ಶಿಕ್ಷೆಗೆ ಒಳಪಟ್ಟಿದ್ದರೆ, ತಿಳಿಸುವಂತೆ ಸೂಚನೆ ನೀಡಲಾಗಿದೆ. ಇವರ ಜಾಗಕ್ಕೆ ಬೇರೆ ಅಧಿಕಾರಿಯನ್ನುನೇಮಕಮಾಡಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.
ಜನಪ್ರತಿನಿಧಿಗಳ ಭಿತ್ತ ಪತ್ರ ತೆರವಿಗೆ ಸೂಚನೆ : ಆರ್. ಆರ್ ನಗರ ವ್ಯಾಪ್ತಿಯ ಬಸ್ ನಿಲ್ದಾಣ, ಶುದ್ಧಕುಯುವ ನೀರಿನ ಘಟಕ, ಉದ್ಯಾನ ಸೇರಿದಂತೆ ಯಾವುದೇಸಾರ್ವಜನಿಕ ಪ್ರದೇಶದಲ್ಲಿ ಜನಪ್ರತಿನಿಧಿಗಳ ಭಾವಚಿತ್ರ, ಹೆಸರು ಇರುವ ಭಿತ್ತಿಪತ್ರಗಳು, ನಾಮಫಲಕಗಳು ಇದ್ದರೆ ತತಕ್ಷಣದಿಂದಲೇ ತೆರವುಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು