Advertisement

ವಾಹನದಲ್ಲಿ ದೋಷ ಇದ್ದರೆ ಕಂಪನಿಯೇ ಹೊಣೆ

03:45 AM Feb 09, 2017 | Team Udayavani |

ಹೊಸದಿಲ್ಲಿ:ನೀವು ಹೊಸದಾಗಿ ಖರೀದಿಸಿದ ವಾಹನದ ಮೂಲ ವಿನ್ಯಾಸದಲ್ಲಿ ದೋಷ ಉಂಟಾಗಿ, ಖರೀದಿಸಿದ ಬಳಿಕ ಅದು ಬಹಿರಂಗಗೊಂಡರೆ ಮಾಲಕನಿಗೆ ಸಂಪೂರ್ಣ ಹಣ ಹಿಂಪಡೆಯುವ ಅವಕಾಶ ಸಿಗಲಿದೆ. ಈ ಅಂಶವನ್ನು ಸಂಸತ್‌ನ ಸಾರಿಗೆ, ಪ್ರವಾಸೋದ್ಯಮಕ್ಕಾಗಿನ ಸ್ಥಾಯೀ ಸಮಿತಿ ಶಿಫಾರಸು ಮಾಡಿದೆ. ಸಂಸತ್‌ನಲ್ಲಿ ಮಂಡಿಸಲಾಗಿರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ 2016ಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವರದಿಯಲ್ಲಿ ಈ ಅಂಶವನ್ನು ಪ್ರಸ್ತಾವಿಸಲಾಗಿದೆ. ಇದರಿಂದಾಗಿ ಕಾರು ಕಂಪೆನಿಗಳು ಗ್ರಾಹಕರಿಗೆ ಮೋಸ ಮಾಡುವುದನ್ನು ತಪ್ಪಿಸಲು ಕ್ರಮ ಕೈಗೊಂಡಂತಾಗುತ್ತದೆ. ಬಿಡಿ ಭಾಗಗಳಲ್ಲಿನ ದೋಷ, ಕರಪತ್ರದಲ್ಲಿ ಪ್ರಸ್ತಾವ ಮಾಡಿರುವ  ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಕಂಪೆನಿಗಳ ಜವಾಬ್ದಾರಿ ಆಗಿರುತ್ತದೆ. ಗ್ರಾಹಕನ ಕೈಗೆ ವಾಹನದ ಕೀಲಿ ಕೊಡುವ ಮುನ್ನವೇ 

Advertisement

ವಾಹನ ಪರೀಕ್ಷಾ ಏಜೆನ್ಸಿಗಳಿಂದ ಗುಣಮಟ್ಟದ ಪರೀಕ್ಷೆ ಮಾಡಿಸಬೇಕು. ಇದರ ಸರ್ಟಿಫಿಕೇಟನ್ನು ಗ್ರಾಹಕನಿಗೆ ನೀಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next