Advertisement
ಕಾರ್ಡ್‌ನಲ್ಲಿ ಹೆಸರು ಇಂಗ್ಲಿಷ್ ಜತೆಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಮುದ್ರಿತವಾಗಬೇಕು. ಅದರಂತೆ ರಾಜ್ಯದಲ್ಲಿ ಕನ್ನಡದಲ್ಲಿ ಹೆಸರು ಮುದ್ರಿತವಾಗುತ್ತದೆ. ಆದರೆ ತಾಂತ್ರಿಕ ದೋಷದಿಂದ ಏನಾದರೂ ಪ್ರಾದೇಶಿಕ ಭಾಷೆ ಬಿಟ್ಟುಹೋಯಿತೆಂದರೆ ತಿದ್ದುಪಡಿಯಾಗಲೇಬೇಕು.
Related Articles
Advertisement
ಬೆಳ್ತಂಗಡಿಯ ಮಗುವಿನ ಪೋಷಕ ರೊಬ್ಬರು ಎರಡೆರಡು ಬಾರಿ ತಿದ್ದುಪಡಿ ಮಾಡಿದಾಗಲೂ ಬಾಲ ಆಧಾರ್‌ನಲ್ಲಿ ಮಗುವಿನ ಹೆಸರು ಇಂಗ್ಲಿಷ್‌ನಲ್ಲಿ ಮಾತ್ರ ಮುದ್ರಿತ ವಾಗಿದೆ. ದ.ಕ. ಜಿಲ್ಲೆಯಲ್ಲಿ ಈ ಹಿಂದೆ 5 ವರ್ಷಕ್ಕಿಂತ ಕೆಳಗಿನ 200ಕ್ಕೂ ಹೆಚ್ಚು ಮಕ್ಕಳಿಗೆ ಟ್ಯಾಬ್ ಮೂಲಕ ಕನ್ನಡವಿಲ್ಲದ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ 5 ವರ್ಷಗಳ ಬಳಿಕ ಬಯೋ ಮೆಟ್ರಿಕ್ ಮೂಲಕ ಕಾರ್ಡ್ ಬದಲಿಸುವಾಗ ಕನ್ನಡ ಸೇರ್ಪಡೆಯಾಗುತ್ತದೆ. ಆದರೂ ಸಂಬಂಧಿತರ ಗಮನಕ್ಕೆ ತರಲಾಗು ವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರು ಕಚೇರಿಯಲ್ಲಿ ವಿಚಾರಿಸಿದಾಗ ಸಾಫ್ಟ್‌ವೇರ್ ತೊಂದರೆ ಯಿಂದ ಈ ರೀತಿ ಆಗಿದೆ. ಸರ್ವರ್‌ನಲ್ಲಿ ಭಾಷೆಯ ಬದಲಾವಣೆ ಆಗುತ್ತಿಲ್ಲ ಎಂದು ಮಾಹಿತಿ ನೀಡಿದ್ದರು. ಆದರೆ ಪ್ರಸ್ತುತ ಅಂತಹ ತೊಂದರೆ ಇರುವ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಆಧಾರ್‌ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು.
ಪಡಿತರ ಚೀಟಿಗೆ ಹೆಸರು ಸೇರ್ಪಡೆ ಸಂದರ್ಭ ಇಂಗ್ಲಿಷ್‌ನಲ್ಲಷ್ಟೇ ಇದ್ದರೂ ಪರಿಗಣಿಸುವಂತೆ ಆನ್‌ಲೈನ್ ವ್ಯವಸ್ಥೆಯ ಸಿಬಂದಿಗೆ ಸೂಚಿಸಿದರೆ ಸಮಸ್ಯೆ ಬಗೆ ಹರಿಯಲಿದೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಲಿಂಕ್ ಆಗುವುದಿಲ್ಲ
ಆಧಾರ್ ಕಾರ್ಡ್‌ನಲ್ಲಿ ಕೇವಲ ಇಂಗ್ಲಿಷ್ ಇದ್ದರೆ ರೇಷನ್ ಕಾರ್ಡ್‌ಗೆ ಲಿಂಕ್ ಆಗುವುದಿಲ್ಲ. ಕನ್ನಡ ಕಡ್ಡಾಯ. ಇಂಗ್ಲಿಷ್ ಮಾತ್ರ ಇದ್ದರೆ ಅಂತಹ ಆಧಾರ್ ಕಾರ್ಡ್‌ಗಳನ್ನು ತಿದ್ದುಪಡಿ ಮಾಡಬೇಕು. -ಸುನಂದಾ ವ್ಯವಸ್ಥಾಪಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ. ಜಿಲ್ಲೆ