Advertisement

Cricket: ಬೌಲಿಂಗ್‌ ವಿಳಂಬವಾದರೆ ಎದುರಾಳಿಗೆ ಪೆನಾಲ್ಟಿ ರನ್‌!

11:19 PM Nov 21, 2023 | Team Udayavani |

ಅಹ್ಮದಾಬಾದ್‌: ನಿಗದಿತ ಅವಧಿಯಲ್ಲಿ ಆಟಗಾರನೋರ್ವ ಕ್ರೀಸ್‌ಗೆ ಆಗಮಿಸದಿದ್ದರೆ ಏನಾಗಲಿದೆ ಎಂಬುದಕ್ಕೆ ಈ ವಿಶ್ವಕಪ್‌ನ ಏಂಜೆಲೊ ಮ್ಯಾಥ್ಯೂಸ್‌ ಪ್ರಕರಣ ಉತ್ತಮ ನಿದರ್ಶನ. ಬಹುತೇಕ ಮಂದಿಗೆ ಮೊದಲ ಸಲ “ಟೈಮ್ಡ್ ಔಟ್‌” ನಿಯಮ ಏನೆಂಬುದು ಅರಿವಾಯಿತು.

Advertisement

ಹಾಗೆಯೇ ಬೌಲರ್ ನಿಗದಿತ ಅವಧಿಯಲ್ಲಿ ಬೌಲಿಂಗ್‌ ಆರಂಭಿಸದಿದ್ದರೆ ಏನಾಗಲಿದೆ? ಐಸಿಸಿ ಇದಕ್ಕಾಗಿ ಮಂಗಳವಾರ ನೂತನ ನಿಯಮವನ್ನು ಜಾರಿಗೆ ತಂದಿದೆ. ಇದಕ್ಕೆ “ಸ್ಟಾಪ್‌ ಕ್ಲಾಕ್‌’ ಎಂದು ಹೆಸರಿಸಲಾಗಿದೆ. ಒಂದು ಓವರ್‌ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್‌ ಆರಂಭಿಸದೇ ಹೋದರೆ 3ನೇ ನಿದರ್ಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್‌ ಲಭಿಸಲಿದೆ. ಮೊದಲೆರಡು ಬಾರಿ ಈ ವಿಳಂಬಕ್ಕೆ ರಿಯಾಯಿತಿ ಇರಲಿದೆ.

ಇಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಲಾಯಿತು. ಇದರಂತೆ ಡಿ. 2023-ಎ. 2024ರ ಅವಧಿಯ ಪುರುಷರ ಏಕದಿನ ಹಾಗೂ ಟಿ20 ಪಂದ್ಯಗಳ ವೇಳೆ “ಸ್ಟಾಪ್‌ ಕ್ಲಾಕ್‌’ ನಿಯಮದ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next