ಅಂತಿಮ ರಾತ್ರಿ. ಆದ್ದರಿಂದ ಜೀವನದಲ್ಲಿ ಮನುಷ್ಯನಾದವನಿಗೆ ಒಂದು ಕಲೆ ಇರಬೇಕು. ಅದು ಸದಾ ಅರಳುತ್ತಿದ್ದರೆ ಜೀವನ ಅಜರಾಮರವಾಗುತ್ತದೆ ಎಂದು ಹುಲಸೂರು ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು ಕರೆ ನೀಡಿದರು.
Advertisement
ನಗರದಲ್ಲಿ ರವಿವಾರ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇಶಪಾಂಡೆ ಸಹ ನೂರಾರು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿರುವುದು ಆದರ್ಶದಾಯಕ ಬೆಳವಣಿಗೆ ಎಂದು ಬಣ್ಣಿಸಿದರು.
Related Articles
Advertisement
ಉದಗೀರದ ಸಾಹಿತಿ ಮಾಣಿಕರಾವ್ ಬಿರಾದಾರ ಮಾತನಾಡಿದರು. ಬೆಂಗಳೂರಿನ ಸಾಹಿತಿ ಪ್ರಕಾಶ ಅಂಬಲಕರ್ ಅಧ್ಯಕ್ಷತೆ ವಹಿಸಿದ್ದರು. ಉಚ್ಚಾ ಶಬರಿ ಮಾತಾ ಆಶ್ರಮದ ಶ್ರೀ ನೀಲಾಂಬಿಕಾ ಮಾತಾಜಿ ನೇತೃತ್ವ ವಹಿಸಿದ್ದರು. ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಹಲವಾರು ಕವಿಗಳು ತಮ್ಮ ಕವಿತೆ ಪ್ರಸ್ತುತಪಡಿಸಿದರು. ಸ್ಥಳೀಯ ಹಾಗೂ ಇತರೆ ಕಲಾಕಾರರು ತಮ್ಮ ಕಲೆ ಪ್ರದರ್ಶಿಸಿದರು. ಕಾಸರಗೂಡಿನ ಸಾಹಿತಿ ವಿ.ಬಿ. ಕುಳಮರ್ವಗೆ ಸಾಹಿತ್ಯ ಮಂದಾರ ಪ್ರಶಸ್ತಿ, ಹುಬ್ಬಳ್ಳಿಯ ಸಂಶೋಧಕ ಕೆ.ಸಿ. ಮಲ್ಲಿಗೆವಾಡಗೆ ಸಂಶೋಧನಾ ಚೂಡಾಮಣಿ ಪ್ರಶಸ್ತಿ, ಸ್ಥಳೀಯ ಕಲಾವಿದ ನಾಗರಾಜ ಜೋಗಿಗೆ ಸಂಗೀತ ರತ್ನ ಪ್ರಶಸ್ತಿ, ಬಾಗಲಕೋಟೆಯ ರಮೇಶ ಕಮತಗಿ ಅವರಿಗೆ ಸಾಹಿತ್ಯ ಪ್ರತಿಭಾ ರತ್ನ ಪ್ರಶಸ್ತಿ, ಚಿಕ್ಕಮಂಗಳೂರಿನ ಅಜ್ಜಿಂಪುರ ಎಸ್.ಶ್ರುತಿ ಅವರಿಗೆ ಸಂಚಾಲನೆ ಪ್ರತಿಭಾ ರತ್ನ ಪ್ರಶಸ್ತಿ, ಉಡುಪಿಯ ರಾಘವೇಂದ್ರ ಉಳ್ಳುರಗೆ ಸಾಹಿತ್ಯ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ, ಇಂಡಿ ಜಾನಪದ ಸಂಶೋಧಕ ದಾನಪ್ಪ ಬಗಲಿ, ಅ.ಭಾ.ವ.ಸಾ.ಸ. ಪರಿಷತ್ ರಾಜ್ಯ ಸಂಚಾಲಕ ಜೆ.ಸಿ. ರಂಗನಾಥ, ಕೀರ್ತಿ ಎನ್ ಜಿಒ ಅಧ್ಯಕ್ಷ ವಿಜಯಕುಮಾರ ಅಷ್ಟುರೆ, ಸಾಹಿತಿ ಗೋಪಾಲಕೃಷ್ಣ ವಂಡ್ಸೆ, ಹಂಶಕವಿ, ಜಯದೇವಿ ದುಬುಲಗುಂಡಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಾಹಿತಿ ದೇಶಾಂಶ ಹುಡುಗಿ, ಬಸವರಾಜ ದಯಾಸಾಗರ, ಡಾ| ಗವಿಸಿದ್ದಪ್ಪ ಪಾಟೀಲ, ಸಂಜುಕುಮಾರ ಅತಿವಾಳೆ, ಸಂಜೀವಕುಮಾರ ಸ್ವಾಮಿ, ಪ್ರಕಾಶ ಕನ್ನಾಳೆ ಸೇರಿದಂತೆ ನೂರಾರು ಕವಿಗಳು, ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು. ಉಷಾ ಪ್ರಭಾಕರ ಹಾಗೂ ತಂಡದವರು ಪ್ರಾರ್ಥನೆ ನೃತ್ಯ ಪ್ರಸ್ತುತಪಡಿಸಿದರು. ತ್ರಿವೇಣಿ ರಮೇಶ ಕೊಳಾರ ಹಾಗೂ ತಂಡದವರು ನಾಡಗೀತೆ ಹಾಡಿದರು. ಜಗದೇವಿ ತಿಪಶಟ್ಟಿ ಸ್ವಾಗತಿಸಿದರು. ಚಿಕ್ಕಮಂಗಳೂರಿನ ಶೃತಿ ನಿರೂಪಿಸಿದರು.