Advertisement

ಈಗಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡಿ ಹೊರ ಬಂದಿದ್ದರೆ ಅವರ ಗೌರವ ಸಹ ಹೆಚ್ಚಾಗುತ್ತಿತ್ತು:ಆರಗ

03:33 PM Sep 24, 2024 | Kavyashree |

ತೀರ್ಥಹಳ್ಳಿ: ಸಂವಿಧಾನದತ್ತವಾದ ರಾಜ್ಯಪಾಲರ ಪೀಠ ಈ ತೀರ್ಪಿನಿಂದ ಅದರ ಗೌರವ ಮತ್ತು ಘನತೆ ಜಾಸ್ತಿಯಾಗಿದೆ. ಸಿದ್ದರಾಮಯ್ಯನವರ ಅಪರಾಧದ ಬಗ್ಗೆ ಎಲ್ಲಾ ದಾಖಲಾತಿ ಸಹ ಇತ್ತು. ಸಿದ್ದರಾಮಯ್ಯನವರಂತh ಹಿರಿಯರು ಅಧಿಕಾರಕ್ಕೆ ಆಂಟಿಕೊಂಡು ಕೂರಬಾರದಿತ್ತು. ಅವತ್ತೇ ರಾಜೀನಾಮೆ ನೀಡಿ ಹೊರ ಬಂದಿದ್ದರೆ ಅವರ ಗೌರವ ಸಹ ಹೆಚ್ಚಾಗುತ್ತಿತ್ತು ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ಕೋರ್ಟ್ ನಲ್ಲಿ ಫೈಟ್ ಮಾಡುವಂತ ಪ್ರಯತ್ನ ಮಾಡಿದರು. ಇಷ್ಟು ದಿನ ಕೇಸ್ ವಿಳಂಬ ಮಾಡುವ ಪ್ರಯತ್ನ ಮಾಡಿದರು. ಈಗಲೂ ಸುಪ್ರೀಂ ಕೋರ್ಟ್ ಗೆ ಹೋದರು. ಅದು ಒಂದು ಕಡೆ ನಡೆಯಲಿ, ಕರ್ನಾಟಕಕ್ಕೆ ಒಂದು ಸಂಸ್ಕೃತಿ ಇದೆ. ಆ ಕಾರಣಕ್ಕೆ ನೈತಿಕವಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ತಿಳಿಸಿದರು.

ರಾಜೀನಾಮೆ ನೀಡಿದ್ದರೂ ನಂತರ ಸುಪ್ರೀಂ ಕೋರ್ಟ್ ಗೆ ಹೋಗಿ ನಿರಪರಾಧಿ ಎಂದರೆ ಮತ್ತೆ ಬಂದು ಪೀಠದಲ್ಲಿ ಕೂರಲಿ, ಯಾರು ಸಹ ಬೇಡ ಎನ್ನುವುದಿಲ್ಲ. ಆದರೆ ಅಪರಾಧವನ್ನು ಹೊತ್ತುಕೊಂಡು ಆ ಕುರ್ಚಿಯಲ್ಲಿ ಕೂತು ಈ ಕರ್ನಾಟಕ ರಾಜ್ಯದ ಪರಂಪರೆ ಇರುವ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರೆಯುವುದು ಒಳ್ಳೆಯದಲ್ಲ ಎಂದರು.

ಕಾಂಗ್ರೆಸ್ ನವರು ಅಧಿಕಾರಕ್ಕೆ ಜೋತು ಬಿದ್ದಿದ್ದಾರೆ. ಬಹಳ ವರ್ಷದಿಂದ ಅಧಿಕಾರ ಇರಲಿಲ್ಲ. ಈಗ ಮತ್ತೆ ಚುನಾವಣೆ ನಡೆದರೂ ಅಧಿಕಾರಕ್ಕೆ ಬರುವುದಿಲ್ಲ. ಕಾರಣ 15 ತಿಂಗಳು ನಡೆದುಕೊಂಡ ರೀತಿ ಇಡೀ ರಾಜ್ಯದ ಅಭಿವೃದ್ಧಿಯನ್ನು ಹಾಳು ಮಾಡಿದ್ದಾರೆ. ಅಭಿವೃದ್ಧಿ ಶೂನ್ಯವಾಗಿರುವ ರಾಜ್ಯವಾಗಿದೆ. ಆರ್ಥಿಕವಾಗಿ ಅತ್ಯಂತ ಕೆಟ್ಟ ಸ್ಥಿತಿಗೆ ಕರ್ನಾಟಕ ಬಂದಿದೆ. ಸಂಬಳ ಕೊಡಲು ಹಣ ಇಲ್ಲ, ಲಂಚ ಇಲ್ಲದೆ ಕೆಲಸ ಆಗುತ್ತಿಲ್ಲ, ಇಂತಹ ದುರಾವಸ್ಥೆಯಲ್ಲಿ ಇವತ್ತು ರಾಜ್ಯ ಹೋಗುತ್ತಿದೆ ಎಂದರು.

ಬಿಜೆಪಿ ಮೇಲೆ ಎಷ್ಟು ಕೇಸ್ ಹಾಕಿಸಬಹುದು ಎಂದು ಅವರ ಕಾರ್ಯಕರ್ತರೆ ಎದ್ದು ನಿಂತಿದ್ದಾರೆ. 2017 ರಲ್ಲಿ ಇದೆ ಸಿದ್ದರಾಮಯ್ಯ ಅವರ ಸರ್ಕಾರ 30 ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಓಪನ್ ಮಾಡಿತ್ತು. ಯಾಕೆಂದರೆ ನಾನು ಗೃಹಸಚಿವನಾಗಿದ್ದಕ್ಕೆ ಅದರ ಬಗ್ಗೆ ನನಗೆ ಮಾಹಿತಿ ಇದೆ. ಇಡೀ ರಾಜ್ಯವೇ ರೌಡಿ ರಾಜ್ಯವಾಗಿತ್ತೋ ಏನೋ ಗೊತ್ತಿಲ್ಲ, ತಮಗೆ ಆಗದೇ ಇರುವವರನ್ನು ಜೈಲಿನಲ್ಲಿಡಬೇಕು ಅಥವಾ ದೈಹಿಕವಾಗಿ ಅವರನ್ನು ಮುಗಿಸಬೇಕು ಎಂಬ ಮಟ್ಟಕ್ಕೆ ಬಂದಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next