Advertisement

ಮೀಸಲಾತಿ ನೀಡದಿದ್ದರೆ ಈಶ್ವರಪ್ಪ ರಾಜೀನಾಮೆ ಕೊಡಲಿ

06:49 PM Jan 15, 2021 | Team Udayavani |

ದೇವದುರ್ಗ: ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಕೆ.ಎಸ್‌. ಈಶ್ವರಪ್ಪ ಕುರಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸದಿದ್ದರೆ ಸಚಿವ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ವರ್ತೂರ್‌ ಪ್ರಕಾಶ ತಾಕೀತು ಮಾಡಿದರು.

Advertisement

ತಾಲೂಕಿನ ತಿಂಥಣಿ ಬ್ರಿಡ್ಜ್ನ ಕನಕಗುರುಪೀಠದಲ್ಲಿ ಗುರುವಾರ ಹಾಲುಮತ ಸಂಸ್ಕೃತಿ ವೈಭವದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವುದಿಲ್ಲ. ಈ ಸರ್ಕಾರಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸುವುದಿಲ್ಲ. ಬಿಜೆಪಿ ಸರ್ಕಾರ ಮೇಲ್ವರ್ಗದ ಹಿತ ಕಾಪಾಡುವುದೇ ಮುಖ್ಯ. ಈಶ್ವರಪ್ಪ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಕಳುಹಿಸಲು ಸರ್ಕಾರದ ಮೇಲೆ ಒತ್ತಡ ಹೇರಲಿ. ಆದರೆ, ಈಶ್ವರಪ್ಪ ಅವರಿಗೆ ಯಡಿಯೂರಪ್ಪನವರನ್ನು ಕೇಳುವ ಧೈರ್ಯ ಇಲ್ಲ ಎಂದು ಟೀಕಿಸಿದರು.

ಐಎಎಸ್‌ ಅಧಿಕಾರಿ ಆಕಾಶ ಮಾತನಾಡಿ, ನಮ್ಮ ಸಮಾಜದ ಮುಂದಿನ ಪೀಳಿಗೆಯ ಯುವಕರು ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಜನರು ಐಎಎಸ್‌ ಅಧಿಕಾರಿಗಳಾಗಲಿ ಎಂದರು.

ಇದನ್ನೂ ಓದಿ:ಯಾದಗಿರಿ: ಶರಣರ ಜಯಂತಿ ಸರಳ ಆಚರಣೆಗೆ ನಿರ್ಧಾರ

ಹಟ್ಟಿ ಚಿನ್ನದ ಗಣಿ ಕಂಪೆನಿಯ ಅಧ್ಯಕ್ಷ ಮಾನಪ್ಪ ವಜ್ಜಲ್‌ ಮಾತನಾಡಿ, ಈ ಭಾಗದಲ್ಲಿ ಕನಕ ಪೀಠ ಸ್ಥಾಪನೆ ಆದಮೇಲೆ ಜನರು ಜಾಗೃತರಾಗಿದ್ದಾರೆ. ಈ ಮಠಕ್ಕೆ ನಮ್ಮ ಸರ್ಕಾರದಿಂದ ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

Advertisement

ಸಿದ್ದುಬಂಡಿ, ರಾಜ್ಯ ಕುರಿ ಉಣ್ಣೆ ನಿಗಮದ ಅಧ್ಯಕ್ಷರಾದ ಶರಣಪ್ಪ ತಳಗೇರಿ, ಸಿದ್ದು ಲಮಂಡಿ ಮಾತನಾಡಿದರು. ಕುರುಬ ಸಂಸ್ಕೃತಿ ಮತ್ತು ಧರ್ಮ ಕುರಿತು ಚಂದ್ರಕಾಂತ ಬಿಜ್ಜರಗಿ ಮಾತನಾಡಿದರು. ಮೈಸೂರು ಪೀಠದ ಶಿವಾನಂದ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಸಿದ್ಧರಾಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಬೀದರ ಜಿಪಂ ಅಧ್ಯಕ್ಷೆ ನಿರ್ಮಲಾ ರಾಜು ಕಂಬಳಿ, ವಿ.ಎಂ. ಮೇಟಿ. ವಿಜಯಪುರ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ನಾರಾಯಣಪ್ಪ, ಅಮೃತರಾವ್‌ ಚಿಮಕೊಡ. ಬೀದರನ ರತನ್‌ ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next