Advertisement

ರಾಹುಲ್‌ ಕರ್ನಾಟಕಕ್ಕೆ ಬಂದರೆ ನಮಗೆ ಲಾಭ: ಯಡಿಯೂರಪ್ಪ

02:00 PM Feb 27, 2018 | |

ಬಸವಕಲ್ಯಾಣ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಅವರು ಕರ್ನಾಟಕಕ್ಕೆ ಬಂದರೆ ನಮಗೆ ಲಾಭವಿದೆ. ಅವರು ಎಷ್ಟು ಬಾರಿ ಇಲ್ಲಿಗೆ ಬರುತ್ತಾರೋ ಅಷ್ಟು ಸೀಟುಗಳು ನಮಗೆ ಹೆಚ್ಚಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು.

Advertisement

ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ನವ ಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ  ಸುತ್ತಾಡಿದ ದೇಶದ ಯಾವ ರಾಜ್ಯದಲ್ಲಿಯೂ ಕಾಂಗ್ರೆಸ್‌ ಗೆದ್ದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತದಿಂದಾಗಿ ದೇಶದ 19 ರಾಜ್ಯದಲ್ಲಿ ಇಂದು ಬಿಜೆಪಿ ಗೆಲ್ಲುವು ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕರ್ನಾಟಕ ಸೇರಿ ಇನ್ನೂ 3 ರಾಜ್ಯದಲ್ಲಿ ನಾವು ಗೆದ್ದರೆ ದೇಶದಲ್ಲಿ ನೂರಕ್ಕೆ, ನೂರರಷ್ಟು ಅ ಧಿಕಾರ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗುವ ದಿನಗಳು ಹತ್ತಿರ ಬರುತ್ತಿವೆ ಎಂದರು.

ನೀರಾವರಿ ಯೋಜನೆಗೆ ಒಂದು ಲಕ್ಷ ಕೋಟಿ ರೂ. ನೀಡಬೇಕು ಎನ್ನುವ ಸಂಕಲ್ಪ ನಮ್ಮದಾಗಿದೆ. ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಿಸುವ ಜತೆಗೆ ಮುಳುಗಡೆಯಾದ ಪ್ರದೇಶಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು, ಹೈದ್ರಾಬಾದ ಕರ್ನಾಟಕ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಜನರು ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಆಶೆ ನಮ್ಮದಾಗಿದೆ ಎಂದರು.

ಡಾ| ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಅಪಮಾನ ಮಾಡಿದ ಈ ಕಾಂಗ್ರೆಸ್‌ ಪಕ್ಷ, ಅವರಿಗೆ ದಿಲ್ಲಿಯಲ್ಲಿ ಶವ ಸಂಸ್ಕಾರ ಮಾಡಲು ಆರಡಿ, ಮೂರಡಿ ಜಾಗ ಕೂಡ ಕೊಟ್ಟಿಲ್ಲ. ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿ ಅವಮಾನ ಮಾಡಿದೆ. ಡಾ| ಬಾಬು ಜಗಜೀವನರಾಮ ಅವರಿಗೆ ಪ್ರಧಾನಿಯಾಗಲು ಬಿಡಲಿಲ್ಲ. ಇಂಥ ಕಾಂಗ್ರೆಸ್‌ ಪಕ್ಷವನ್ನು ಮನೆಗೆ ಕಳಿಸಲು ಈಗಿನಿಂದಲೇ ಕಾರ್ಯಪ್ರವರ್ತರಾಗಬೇಕು ಎಂದರು.

Advertisement

ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪ ಸಂಖ್ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಪ್ರತಿ ಬೂತ್‌ ಮಟ್ಟದಲ್ಲಿ ಕೆಲಸ ಮಾಡಿ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಪಕ್ಷದ ಕಾರ್ಯಕರ್ತರು ಹಗಲಿರಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಅಮಿತ ಶಾ, ರಾಜ್ಯ ಉಸ್ತುವಾರಿ ಮುರಳಿಧರರಾವ್‌, ಪುರಂದೇಶ್ವರಿ, ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವ್ಹಾಣ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಪಕ್ಷದ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಸಂಜಯ ಪಟವಾರಿ, ಸೂರ್ಯಕಾಂತ ನಾಗಮಾರಪಳ್ಳಿ, ಸುನೀಲ ಪಾಟೀಲ, ಡಿ.ಕೆ. ಸಿದ್ರಾಮ, ಲಿಂಗರಾಜ ಪಾಟೀಲ ಅಟ್ಟೂರ, ಸುಧಿಧೀರ ಕಾಡಾದಿ, ಪ್ರದೀಪ ವಾತಡೆ, ಗುರುನಾಥ ಕೊಳ್ಳೂರ, ಈಶ್ವರಸಿಂಗ್‌ ಠಾಕೂರ, ರವಿ ಚಂದನಕೇರೆ, ಅನೀಲ ಭುಸಾರೆ, ಗುಂಡುರೆಡ್ಡಿ, ವಿಜಯಕುಮಾರ ಮಂಠಾಳೆ, ಶಕುಂತಲಾ ಹೊಳಕುಂದೆ, ದತ್ತು ತುಗಾಂಕರ್‌, ಶಂಕರ ನಾಗದೆ, ಶಿವಪುತ್ರ ಗೌರ, ರವಿ ಸ್ವಾಮಿ, ಬಸವರಾಜ ಸ್ವಾಮಿ, ಕೃಷ್ಣಾ ಗೊಣೆ ಇದ್ದರು. ಪ್ರಕಾಶ ಮಾಶಟ್ಟೆ ನಿರೂಪಿಸಿದರು.

ಕೊನೆಯಲ್ಲಿ ಮತ್ತೆ ಮೈಕ್‌ ಹತ್ತಿರ ಬಂದ ಬಿ.ಎಸ್‌. ಯಡಿಯೂರಪ್ಪ ಅವರು, ಅಮಿತ ಶಾ ಅವರ ಕಾರ್ಯಕ್ರಮ ಯಶಸ್ವಿಗೊಳಿಸಿದ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಜಿಲ್ಲೆಯ ಜನತೆಗೆ ಅಭಿನಂದಿಸುತ್ತೆನೆ ಎಂದರು.
 
ಅಮಿತ್‌ ಶಾ ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸುತಿದ್ದಂತೆ ಕಾರ್ಯಕ್ರಮದ ವೇದಿಕೆ ಮುಂಭಾದಲ್ಲಿ$ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಹುಮನಾಬಾದನಲ್ಲಿ ಕಾಂಗ್ರೆಸ್‌ ನವರನ್ನು ಸೇರಿಸಿಕೊಳ್ಳಬಾರದು ಎನ್ನುವ ಘೋಷಣೆ ಕೂಗಿದರು

Advertisement

Udayavani is now on Telegram. Click here to join our channel and stay updated with the latest news.

Next