Advertisement
ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ಅಧ್ಯಕ್ಷೆ ಯಾದ ನನಗೆ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವಿದೆ ಎಂದು ನಗರಸಭಾಧ್ಯಕ್ಷೆ ಆಶಾ ನಟರಾಜು ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ಗೌರವಾರ್ಥ ಅವರ ಹೆಸರನ್ನು ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡುವಂತೆ ಪುನೀತ್ ಅಭಿಮಾನಿಗಳು, ಕನ್ನಡ ಸಂಘಟನೆಗಳು, ಅಂಬೇಡ್ಕರ್ ಸೇನೆ ಸೇರಿದಂತೆ ಅನೇಕ ಸಂಘಟನೆಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಶೇಷ ಸಭೆಯಲ್ಲಿ ವಿಚಾರವನ್ನಿಟ್ಟು ಅನುಮೋದನೆ ಪಡೆದುಕೊಳ್ಳುವ ಉದ್ದೇಶವಿತ್ತು ಎಂದರು.
Related Articles
Advertisement
ಗೊಂದಲ ಇಲ್ಲ: ಈ ಹಿಂದೆ ನಡೆದಿರುವ ಸಭಾ ನಡಾವಳಿ ಮತ್ತು ಈ ಹಿಂದಿನ ಸದಸ್ಯರ ಅಭಿ ಪ್ರಾಯಗಳು ನಗರಸಭೆ ಕಡತದಲ್ಲಿದ್ದರೆ ಕುಲಂಕುಷ ವಾಗಿ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಒತ್ತಡವು ಸಹ ಇಲ್ಲ. ಪಾರದರ್ಶಕವಾಗಿ ನಗರಸಭೆ ಆಡಳಿತ ನಡೆದುಕೊಳ್ಳುತ್ತದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಅಲ್ಲಿ ರಸ್ತೆಗೆ ಹೆಸರಿಡುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ದೂರಬೇಡಿ: ಸದಸ್ಯ ಶಿವರಾಜ್ ಮಾತನಾಡಿ, 2015ರಲ್ಲಿ ಅಂಬೇಡ್ಕರ್ ರಸ್ತೆ ಎಂದು ಹೆಸರಿಟ್ಟಿದ್ದ ಮೇಲೆ ಆಗ ಅಧಿಸೂಚನೆ ಹೊರಡಿಸಿ, ಫಲಕ ನೆಟ್ಟು ಕಾರ್ಯರೂಪಕ್ಕೆ ತರುವ ಕೆಲಸವನ್ನು ಅಂದಿನ ನಗರಸಭೆ ಆಡಳಿತ ಮಾಡಬೇಕಿತ್ತು. ಅದನ್ನು ಗುಪ್ತ ವಾಗಿಟ್ಟು ಈಗ ನಮ್ಮ ಆಡಳಿತವನ್ನು ದೂರುವುದು ಸರಿಯಲ್ಲ ಎಂದರು. ಉಪಾಧ್ಯಕ್ಷೆ ಪಿ. ಸುಧಾ, ಸದಸ್ಯೆ ಕುಮದಾ ಕೇಶವಮೂರ್ತಿ ಉಪಸ್ಥಿತರಿದ್ದರು.
ನಗರದಲ್ಲಿ ಮೂರ್ನಾಲ್ಕು ಕಡೆ ಅಂಬೇಡ್ಕರ್ ಹೆಸರು ಇದೆ-
ಸದಸ್ಯ ಮನೋಜ್ ಪಟೇಲ್ ಮಾತನಾಡಿ, ಅಂಬೇಡ್ಕರ್ ಹೆಸರನ್ನು ನಗರದ ಜಿಲ್ಲಾ ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹೌಸಿಂಗ್ ಬೋರ್ಡ್ ಕಾಲೋನಿ ಉದ್ಯಾನ ವನಕ್ಕೆ ಇಡಲಾಗಿದೆ. ಜಿಲ್ಲಾಡಳಿತ ಭವನದ ಮುಂದೆ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ನಮ್ಮ ಜಿಲ್ಲೆಯ ರಾಯಭಾರಿ ಯಾಗಿದ್ದವರು. ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಅವರಿಗೊಂದು ಗೌರವ ಸಲ್ಲಿಸುವ ಸಲುವಾಗಿ ರಸ್ತೆಗೆ ಹೆಸರಿಡಲು ಮುಂದಾಗಿದ್ದೆವು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.