Advertisement

ಪ್ಲಾಸ್ಟಿಕ್‌ ಬಳಕೆ ನಿಷೇಧ ವಾಗ್ಧಾನ ಮಾಡಿದರೆ ಕಂಪ್ಯೂಟರ್‌: ಜೋಶಿ

10:16 AM Aug 31, 2019 | Team Udayavani |

ಹುಬ್ಬಳ್ಳಿ: ಶಾಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವ ಬಗ್ಗೆ ವಾಗ್ಧಾನ ಮಾಡಿದರೆ ಕಂಪ್ಯೂಟರ್‌ ಕೊಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸರಕಾರಿ ಮಾದರಿ ಗಂಡುಮಕ್ಕಳ ಶಾಲೆ ಸಂಖ್ಯೆ-3 ಹಾಗೂ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ಸಂಖ್ಯೆ-5ರಲ್ಲಿ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ನೆರೆಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೋಟ್ಬುಕ್‌ ವಿತರಣೆ ಮಾಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್‌ನಿಂದ ಮಾರಕ ಪರಿಣಾಮಗಳಾಗುತ್ತಿವೆ. ದನಕರುಗಳು ಪ್ಲಾಸ್ಟಿಕ್‌ ತಿಂದು ಜೀವ ಕಳೆದುಕೊಳ್ಳುತ್ತಿವೆ. ಶಿಕ್ಷಕರು ಮಕ್ಕಳಿಗೆ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಿಳಿಸಿಕೊಡಬೇಕು. ಮಕ್ಕಳು ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಪಾಲಕರಿಗೆ ತಿಳಿಸಬೇಕು ಎಂದರು.

ಈಗಾಗಲೇ ಶಾಲೆಗೆ ಒಂದು ಸ್ಮಾರ್ಟ್‌ ಬೋರ್ಡ್‌ ನೀಡಲಾಗಿದ್ದು, ಮುಂದಿನ ವರ್ಷ ಶಾಲೆಗೆ ಇನ್ನೊಂದು ಕಂಪ್ಯೂಟರ್‌ ನೀಡಲಾಗುವುದು. ಮಕ್ಕಳಿಗೆ ಕಂಪ್ಯೂಟರ್‌ ಕಲಿಸಲು ಶಿಕ್ಷಕರು ಆಸಕ್ತಿ ವಹಿಸಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಶಿವು ಮೆಣಸಿನಕಾಯಿ, ನಾರಾಯಣ ಜರತಾರಘರ, ಡಿ.ಕೆ. ಚವ್ಹಾಣ, ಸುಧೀರ ಸರಾಫ, ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ಮಹೇಶ ಟೆಂಗಿನಕಾಯಿ, ಶಂಕ್ರಪ್ಪ ಛಬ್ಬಿ, ಶಂಕ್ರಪ್ಪ ಬಿಜವಾಡ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next