ಹಾಗಂತ ಪ್ರಸನ್ನಗೆ ಚಿತ್ರತಂಡದವರು ಹೇಳಿದ್ದರಂತೆ. ಹಾಗಾಗಿ “ಚಿಟ್ಟೆ’ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಕಡಿಮೆ ಮಾತಾಡೋಕೆ ನಿರ್ಧರಿಸಿದ್ದರು ಪ್ರಸನ್ನ. ಹಾಗಂತ ಅವರು ಥ್ಯಾಂಕ್ಸ್ ಹೇಳಿ ಮೈಕು ಕೊಟ್ಟಿರಬಹುದು ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಕಳೆದ ಬಾರಿಯಷ್ಟಿಲ್ಲದಿದ್ದರೂ ಒಂದು ಲೆವೆಲ್‌ಗೆ ಮಾತಾಡಿಯೇ ಕೂತರು ಪ್ರಸನ್ನ.
Advertisement
“ಚಿಟ್ಟೆ’ ಚಿತ್ರದ ಬಗ್ಗೆ ಅವರು ಹೇಳದ್ದೇನೂ ಇಲ್ಲ. ಈ ಹಿಂದಿನ ಪತ್ರಿಕಾಗೋಷ್ಠಿಗಳಲ್ಲಿ ಅವರು ಚಿತ್ರದ ಬಗ್ಗೆ, ಮೇಕಿಂಗ್ ಬಗ್ಗೆ, ಸಹಕಾರ-ಪ್ರೋತ್ಸಾಹಗಳು ಕುರಿತು ಮಾತಾಡಿದ್ದರು. ಅದರ ಜೊತೆಗೆ ಈ ಬಾರಿ ಇನ್ನೂ ಎರಡು ವಿಷಯಗಳನ್ನು ಹೇಳುವುದಿತ್ತು ಅವರಿಗೆ. ಒಂದು ಚಿತ್ರ ಇಂದು ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಇದು ಹಾರರ್ ಚಿತ್ರ ಎಂದು ಅವರು ಇದುವರೆಗೂ ಎಲ್ಲೂ ಹೇಳಿರಲಿಲ್ಲ. ಈಗ ಅದನ್ನು ಒಪ್ಪಿಕೊಂಡರು. ಇದೊಂದು ಹಾರರ್ ಚಿತ್ರ ಎಂದು ಹೇಳುವ ಮನಸ್ಸಿರಲಿಲ್ಲವಂತೆ ಅವರಿಗೆ. ಸಸ್ಪೆನ್ಸ್ ಆಗಿ ಇರಲಿ, ಜನ ಚಿತ್ರದಲ್ಲೇ ನೋಡಲಿ ಅಂತಿದ್ದರಂತೆ. ಆದರೆ, ಚಿತ್ರದ ಒಂದು ಡಿಸೈನ್ ನೋಡಿ ಖುಷಿಯಾದ ವಿತರಕರು, ಇದೊಂದು ಹಾರರ್ ಚಿತ್ರ ಎಂದು ಮುಚ್ಚಿಡಬೇಡಿ ಎಂದರಂತೆ. ವಿತರಕರು ಹೇಳಿದ್ದರಿಂದ ಪ್ರಸನ್ನ ಸಹ ಒಪ್ಪಿ, ಇದೊಂದು ಹಾರರ್ ಚಿತ್ರ ಎಂದು ಘೋಷಿಸಿದ್ದಾರೆ.