Advertisement

ಮಕ್ಕಳು 7ಗಂಟೆಗೆ ಶಾಲೆಗೆ ಹೋಗಬಹುದಾದರೆ, 9ಗಂಟೆಗೆ  ಕೋರ್ಟ್ ಯಾಕೆ ಪ್ರಾರಂಭಿಸಬಾರದು:ಸುಪ್ರೀಂ

04:04 PM Jul 15, 2022 | Team Udayavani |

ನವದೆಹಲಿ:ಒಂದು ವೇಳೆ ಬೆಳಗ್ಗೆ ಏಳು ಗಂಟೆಗೆ ಮಕ್ಕಳು ಶಾಲೆಗೆ ಹೊರಡುತ್ತಾರೆ ಎಂದಾದರೆ, ನ್ಯಾಯಾಧೀಶರು ಮತ್ತು ವಕೀಲರು ಬೆಳಗ್ಗೆ 9ಗಂಟೆಗೆ ಯಾಕೆ ಕೆಲಸ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಜಡ್ಜ್ ಯು.ಯು.ಲಲಿತ್ ಶುಕ್ರವಾರ( ಜುಲೈ 15) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಆಲ್ಟ್ ನ್ಯೂಸ್‌ ಸಹಸಂಸ್ಥಾಪಕ ಜುಬೇರ್‌ ಮೊಹಮ್ಮದ್‌ ಗೆ ಜಾಮೀನು; ದೇಶವನ್ನು ತೊರೆಯುವಂತಿಲ್ಲ

ಸುಪ್ರೀಂಕೋರ್ಟ್ ನ ಜಸ್ಟೀಸ್ ಯು.ಯು.ಲಲಿತ್, ಜಸ್ಟೀಸ್ ಎಸ್.ರವೀಂದ್ರ ಭಟ್ ಮತ್ತು ಜಸ್ಟೀಸ್ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಇಂದು ಬೆಳಗ್ಗೆ 9.30ಕ್ಕೆ ಕಾರ್ಯಾರಂಭಿಸಿತ್ತು. ಸುಪ್ರೀಂಕೋರ್ಟ್ ನ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಕಾರ್ಯ ಆರಂಭಿಸಿತ್ತು ಎಂದು ವರದಿ ತಿಳಿಸಿದೆ.

“ನನ್ನ ದೃಷ್ಟಿಕೋನದ ಪ್ರಕಾರ ಬೆಳಗ್ಗೆ 9ಗಂಟೆಗೆ ಕಾರ್ಯಾರಂಭಿಸಬೇಕು. ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಒಂದು ವೇಳೆ ಬೆಳಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗಬಹುದಾದರೆ, ನಾವ್ಯಾಕೆ 9 ಗಂಟೆಗೆ ಬರಬಾರದು ಎಂದು ಜಸ್ಟೀಸ್ ಲಲಿತ್ ಪ್ರಶ್ನಿಸಿದರು.

ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು, ಸಮಯಕ್ಕಿಂತ ಮೊದಲೇ ವಿಚಾರಣೆ ನಡೆಸಿದ್ದಕ್ಕೆ ಪೀಠದ ಕಾರ್ಯವನ್ನು ಶ್ಲಾಘಿಸಿದ್ದರು. ಬಳಿಕ ಜಸ್ಟೀಸ್ ಯುಯು ಲಲಿತ್ ಅವರು ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next