Advertisement

ಭಾರತಕ್ಕೆ ಮಗ್ಗಲು ಮುಳ್ಳಾಗುವರೇ ಇಮ್ರಾನ್‌?

06:00 AM Jul 27, 2018 | |

ಇಸ್ಲಾಮಾಬಾದ್‌: “ನನ್ನ ಮೇಲೆ ನನಗೆ ವಿಶ್ವಾಸವಿದೆ. ನಾನೊಬ್ಬ ಸಾಮಾನ್ಯ ಕ್ರಿಕೆಟಿಗನಾಗಿ ಇರುತ್ತೇನೆಂದು ಎಂದಿಗೂ ಭಾವಿಸಿಯೇ ಇರಲಿಲ್ಲ’ ಎಂದುಕೊಂಡೇ ಪಾಕಿಸ್ಥಾನಕ್ಕೆ 1992ರ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಇಮ್ರಾನ್‌ ಖಾನ್‌ (65) ದೇಶದ ಚುನಾವಣೆ ಗೆದ್ದು, ಪ್ರಧಾನಿ ಹುದ್ದೆಯ ಸನಿಹದಲ್ಲಿದ್ದಾರೆ. ಪಾಕಿಸ್ತಾನ್‌ ತೆಹ್ರಿಕ್‌- ಇ- ಇನ್ಸಾಫ್ (ಪಿಟಿಐ) ಪಕ್ಷ ಸ್ಥಾಪಿಸಿ, ಕ್ರಿಕೆಟ್‌ ಬಳಿಕ, ರಾಜಕಾರಣಿ ಯಾಗಿಯೂ ಜನಮನ್ನಣೆ ಪಡೆಯುವ ಸಾಮರ್ಥ್ಯವಿದೆ ಎನ್ನುವು ದನ್ನು ಸಾಬೀತು ಪಡಿಸಿದ್ದಾರೆ. ಬಲಿಷ್ಠ ಪಕ್ಷಗಳೆನ್ನಿಸಿಕೊಂಡಿರುವ ಪಾಕಿಸ್ತಾನ್‌ ಮುಸ್ಲಿಂ ಲೀಗ್‌-ನವಾಜ್‌ (ಪಿಎಂಎಲ್‌ಎನ್‌) ಹಾಗೂ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ (ಪಿಪಿಪಿ)ಗೆ ಸವಾಲೊಡ್ಡಿ, “ರಾಜಕೀಯ ಟ್ರೋಫಿ’ ಎತ್ತಿಹಿಡಿದಿದ್ದಾರೆ. ಆದರೆ ಅವರ ಗೆಲುವು ಭಾರತಕ್ಕೆ ಹೆಚ್ಚಿನ ಲಾಭ ತರಲಾರದು.

Advertisement

ಇಸ್ಲಾಮಿಕ್‌ ಉಗ್ರರ ನಂಟು: ಸಹಜವಾಗಿ ದೇಶದ ಜನತೆಗೆ ಈ ಅಂಶ ಕಾಡುವುದರಲ್ಲಿ ಸಂದೇಹ ಇಲ್ಲ. ಬದ್ಧ ವೈರಿಯಂತೆ ಬಿಂಬಿಸ ಲಾಗುವ ಪಾಕಿಸ್ಥಾನದಲ್ಲಿ ರಾಜತಾಂತ್ರಿಕವಾಗಿ ಯಾವುದೇ ಬದಲಾ ವಣೆ ನಡೆದಾಗ ಒಂದಲ್ಲಾ ಒಂದು ರೀತಿಯಿಂದ ಭಾರತದ ಮೇಲೆ ಪರಿಣಾಮ ಇದ್ದೇ ಇದೆ. ಆದರೆ ಇದೀಗ ಅಲ್ಲಿನ ರಾಜಕೀಯ ಸನ್ನಿವೇಶ ಸಂಪೂರ್ಣ ಬದಲಾಗಿರುವುದನ್ನು ಗಮನಿಸಿದರೆ ಭಾರತ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸದೆ ಇದ್ದರೆ ಸಮಸ್ಯೆ ಎದುರಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತದೆ.

ಲಾಭಗಳೇನು?: ಸೂಕ್ಷ್ಮವಾಗಿ ಗಮನಿಸಿದರೆ ಭಾರತಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಭಾರತದೊಂದಿಗೆ ಸದಾಕಾಲ ಕಾಲ್ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ಥಾನ ಸೇನೆ ಜತೆ ಇಮ್ರಾನ್‌ ಖಾನ್‌ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದಾರೆ. ಇದು ಭಾರತ -ಪಾಕಿಸ್ಥಾನ ನಡುವಿನ ಗಡಿ ವಿಚಾರ ಬಂದಾಗ ಇಮ್ರಾನ್‌ ಸಕಾರಾತ್ಮಕ ನಿಲುವು ಹೊಂದಿದ್ದಲ್ಲಿ ವಿವಾದ ಉಲ್ಬಣಿಸುವ ಸಾಧ್ಯತೆಗಳು ಕಡಿಮೆ ಆಗಬಹುದು. ಚುನಾವಣೆಗೂ ಪೂರ್ವದ ಭಾಷಣಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಕಾಶ್ಮೀರ ಸೇರಿದಂತೆ ಭಾರತದ ಬಗ್ಗೆ ಇಮ್ರಾನ್‌ ಖಾನ್‌ ನಕಾರಾತ್ಮಕ ಹೇಳಿಕೆಗಳನ್ನು ನೀಡಿದ್ದಿಲ್ಲ. ಅಧಿಕಾರ ಸ್ವೀಕರಿಸಿದ ಕೂಡಲೇ ಭಾರತದ ಜತೆಗಿನ ಸಂಬಂಧವನ್ನು ಸುಧಾರಿಸಲು ಎಲ್ಲ ಪ್ರಯತ್ನ ಪಡುವುದಾಗಿ ಹೇಳಿರುವುದು ಸಕಾರಾತ್ಮಕ ಬೆಳವಣಿಗೆಯೇ. ಮೂಲತಃ ಕ್ರಿಕೆಟ್‌ ಪಟುವಾಗಿರುವುದರಿಂದ ಇವರನ್ನು ಇತರೆ ರಾಜ ಕಾರಣಿಗಳಂತೆ ನೋಡುವ ಹಾಗೂ ಇಲ್ಲ. ಭಾರತದಲ್ಲೂ ಅವರಿಗೆ ಸಾಕಷ್ಟು ಗೆಳೆಯರು ಇರುವುದರಿಂದ ಮಧುರ ಬಾಂಧವ್ಯಕ್ಕೆ ಇದೆಲ್ಲ ನೆರವಾಗಬಹುದು ಎನ್ನುವ ನಿರೀಕ್ಷೆಯೂ ಇದೆ.

ನಷ್ಟ ಏನೇನು?: ರಾಜಕೀಯ ಲಾಭಕ್ಕಾಗಿ ಇಮ್ರಾನ್‌ ಖಾನ್‌ ವಿಧ್ವಂಸಕ ಕೃತ್ಯಗಳನ್ನು ನಡೆಸಿಕೊಂಡುಬಂದಿರುವ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜತೆ ಕೈಜೋಡಿಸಿಕೊಂಡು ಬಂದಿರುವುದರಿಂದ ಭಾರತ ಅತಿಯಾದ ವಿಶ್ವಾಸವಿಡುವಂತಿಲ್ಲ. ಆರ್ಮಿಜತೆಗಿನ ಬಾಂಧವ್ಯವೂ ಇದಕ್ಕೆ ಮತ್ತೂಂದು ಪ್ರಮುಖ ಕಾರಣ. ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ಪ್ರಗತಿಪರ ಚಿಂತನೆಗಳೊಂದಿಗೆ, “ನಯಾ ಪಾಕಿಸ್ತಾನ್‌’ ಎನ್ನುತ್ತಲೇ ತಮ್ಮನ್ನು ಗುರುತಿಸಿಕೊಂಡಿದ್ದ ಇಮ್ರಾನ್‌ ಖಾನ್‌, ರಾಜಕೀಯ ಲಾಭಕ್ಕಾಗಿ ಮೂಲಭೂತವಾದಿಗಳ ಜತೆ ಕೈಜೋಡಿಸಿರುವುದೂ ಆತಂಕಕಾರಿ ಸಂಗತಿ. ಉಗ್ರರ ಹಿಟ್‌ ಲಿಸ್ಟ್‌ನಲ್ಲಿರುವ ಸಂಘಟನೆಗಳ ನಾಯಕರೊಂದಿಗೆ ಅನ್ಯೋನ್ಯವಾಗಿರುವುದನ್ನೂ ಗಮನಿಸಬಹುದಾಗಿದೆ. ಇಸ್ಲಾಮಿಕ್‌ ಉಗ್ರರ ನಂಟನ್ನು ಅನೇಕ ಸಂದರ್ಭಗಳಲ್ಲಿ ಸ್ವತಃ ಇಮ್ರಾನ್‌ ಸಮರ್ಥಿಸಿಕೊಂಡಿದ್ದೂ ಇದೆ.

ಪಾಕಿಸ್ಥಾನ ಸೇನೆಯ ಹೊಸ “ರಾಜಕುಮಾರ’ ಇಮ್ರಾನ್‌ ಖಾನ್‌
ಕೇವಲ ಆರೂವರೆ ವರ್ಷಗಳ ಹಿಂದೆ “ಪಾಕಿಸ್ಥಾನದಲ್ಲಿ ಸದ್ಯದಲ್ಲೇ ಸೇನಾಡಳಿತದ ಪರ್ವ ಕೊನೆಗೊಳ್ಳಲಿದೆ. ನೈಜ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರಲಿದೆ’ ಎಂದು ನುಡಿದಿದ್ದ ಮಾಜಿ ಕ್ರಿಕೆಟಿಗ ಹಾಗೂ ಹಿರಿಯ ರಾಜಕಾರಣಿ ಇಮ್ರಾನ್‌ ಖಾನ್‌, ಈಗ ಆ ದೇಶದ ಪ್ರಧಾನಿ ಗಾದಿಯತ್ತ ದಾಪುಗಾಲಿಟ್ಟಿರುವುದು ಆ ದೇಶದ ಅವಕಾಶವಾದಿತನ ಹಾಗೂ ಸೇನೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಒತ್ತಿ ಹೇಳಿದೆ. ಆರು ವರ್ಷಗಳ ಹಿಂದೆ ಸ್ವಿಜರ್ಲೆಂಡ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೇನೆಯ ವಿರುದ್ಧ ಗುಡುಗಿದ್ದ ಖಾನ್‌, ಇದೇ ಮೇ ತಿಂಗಳಲ್ಲಿ ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ “ನಾನು ನನ್ನ ದೇಶದ ಸೇನೆಯೊಂದಿಗೆ ಮುನ್ನಡೆಯುತ್ತಿದ್ದೇನೆ. ಯಾವುದೇ ಶತ್ರು ರಾಷ್ಟ್ರದ ಸೇನೆಯೊಂದಿಗಲ್ಲ’ ಎಂದಿದ್ದರು. ಈಗ, ಈ ಬಾರಿಯ ಚುನಾವಣೆಯಲ್ಲಿ ಅವರ ಪಕ್ಷ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಅವರ ಗೆಲುವಿಗೆ ಪಾಕಿಸ್ಥಾನ ಸೇನೆ ತೆರೆಮರೆಯಲ್ಲಿ ಕೈ ಜೋಡಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಖಾನ್‌ರ ಹಿಂದಿನ ಹೇಳಿಕೆಗಳು, ಚುನಾವಣೆ ಫ‌ಲಿತಾಂಶಗಳನ್ನು ತಾಳೆ ಹಾಕಿ ನೋಡಿದರೆ ಪಾಕಿಸ್ಥಾನ ನಡೆದು ಬಂದ ಹಾದಿ ಸೂಚ್ಯವಾಗಿ ತಿಳಿಯುತ್ತದೆ.

Advertisement

ಮೊದಲ ಬಾರಿ ಮತದಾನ ಮಾಡಿದ ಮಹಿಳೆಯರು
ಪಾಕಿಸ್ಥಾನದ ಹಲವು ಪ್ರಾಂತ್ಯಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಅವಕಾಶ ನೀಡಲಾಗಿದೆ. ಪಂಜಾಬ್‌ನ ಖುಹಾಬ್‌ನಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭ ವಾಗುತ್ತಲೇ ಮತ ಚಲಾಯಿಸಲು ಸರದಿಯಲ್ಲಿ ಮಹಿಳೆಯರು ಸಂಭ್ರಮದಿಂದ ನಿಂತಿದ್ದರು. ಮೊಹ ಮಂದ, ದಿರ್‌ನಲ್ಲೂ ಮಹಿಳೆಯರು ಕಿಲೋಮೀಟರುಗಟ್ಟಲೆ ದೂರದವರೆಗೆ ಕಾಲ್ನಡಿಗೆಯಲ್ಲೇ ಆಗಮಿಸಿ ಮತ ಚಲಾವನೆ ಮಾಡಿದ್ದಾರೆ. ದಿರ್‌ ಪ್ರದೇಶ ತಾಲಿಬಾನ್‌ ವಶದಲ್ಲಿದ್ದುದರಿಂದ ಇಲ್ಲಿ ಮಹಿಳೆಯರು ಹೊರಬರಲೂ ಹೆದರುತ್ತಿದ್ದರು. ಮತಚಲಾವಣೆಯ ಅವಕಾಶ ಇರಲಿಲ್ಲ. ದಿರ್‌ನ ಕೆಲವು ಭಾಗಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ. ಪೇಶಾವರದ ಹಲಿ ಬಂದಾ ಪ್ರದೇಶದಲ್ಲಿ ಮಹಿಳೆಯರನ್ನು ಮತಹಾಕದಂತೆ ನಿರ್ಬಂಧಿಸಲಾಗುತ್ತಿದೆ ಎಂಬ ಆರೋಪದ ಮಧ್ಯೆಯೇ ಚುನಾವಣಾ ಆಯೋಗದ ಕ್ರಮಗಳಿಂದಾಗಿ ಮಹಿಳೆಯರು ಮತ ಚಲಾವಣೆ ಮಾಡಿದ್ದಾರೆ. ಆದರೂ ಹಲವು ಪ್ರದೇಶಗಳಲ್ಲಿ ಮಹಿಳೆಯರಿಗೆ ಮತ ಹಾಕದಂತೆ ತಡೆಯಲಾಗಿದೆ.

ಆಪ್ತಮಿತ್ರನ “ಸ್ನೇಹ ಸಂದೇಶ’
ಪಾಕಿಸ್ಥಾನದಲ್ಲಿ ಯಾವುದೇ ಸರಕಾರ ಬಂದರೂ ಆ ಸರಕಾರದೊಂದಿಗೆ ದ್ವಿಪಕ್ಷೀ ಯ ಬಾಂಧವ್ಯವನ್ನು ಮುಂದುವರಿಸುವು ದಾಗಿ ಪಾಕಿಸ್ಥಾನ ಇತ್ತೀಚಿನ “ಆಪ್ತಮಿತ್ರ’ ಚೀನಾ ಹೇಳಿದೆ. ಚೀನಾ ಮತ್ತು ಪಾಕಿಸ್ತಾ ನದ ಸ್ನೇಹಕ್ಕೆ ಎರಡೂ ರಾಷ್ಟ್ರಗಳ ಜನತೆಯ ಬೆಂಬಲವಿದೆ. ಚುನಾವಣೆಯ ಫ‌ಲಿತಾಂಶ ಏನೇ ಇರಲಿ, ಉಭಯ ರಾಷ್ಟ್ರಗಳ ಅಭಿ ವೃದ್ಧಿ ವಿಚಾರದಲ್ಲಿ ಎರಡೂ ದೇಶಗಳು ಕೈಗೊಂಡಿರುವ ಯೋಜನೆಗಳು ಅಬಾ ಧಿತ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್‌ ಶುವಾಂಗ್‌ ತಿಳಿಸಿದ್ದಾರೆ. 

ಅಲ್ಪಸಂಖ್ಯಾತ ಹಿಂದೂ ಗೆಲುವು
ರಾಷ್ಟ್ರೀಯ ಅಸೆಂಬ್ಲಿಗೆ ಸಿಂಧ್‌ ಪ್ರಾಂತ್ಯದ ಥರ್ಪಾರ್ಕರ್‌ ಕ್ಷೇತ್ರದಿಂದ ಹಿಂದೂ ಒಬ್ಬರು ಗೆಲುವು ಸಾಧಿಸಿದ್ದಾರೆ. ಪಾಕಿಸಾನ್‌ ಪೀಪ ಲ್ಸ್‌ ಪಾರ್ಟಿಯ ಮಹೇಶ್‌ ಕುಮಾರ್‌ ಮಲಾನಿ, ಗ್ರಾಂಡ್‌ ಡೆಮಾಕ್ರಟಿಕ್‌ ಅಲಾಯನ್ಸ್‌ನ ಅರಬ್‌ ಝಕಾಉಲ್ಲಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮಹೇಶ್‌ 37,245 ಮತ ಗಳಿಸಿದ್ದು, ಝಕಾಉಲ್ಲಾ 18,323 ಮತ ಪಡೆದಿದ್ದಾರೆ. 2003ರಲ್ಲೂ ಮಲಾನಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಸಿಂಧ್‌ ಪ್ರಾಂತೀಯ ಅಸೆಂಬ್ಲಿಗೆ ಸ್ಪರ್ಧಿಸಿ ಗೆದ್ದಿದ್ದರು.

ಖಾನ್‌ ಏನೆಲ್ಲಾ ಹೇಳಿದ್ದರು
2016, ಅಕ್ಟೋಬರ್‌: ನರೇಂದ್ರ ಮೋದಿ ಪೂರ್ವಗ್ರಹ ಪೀಡಿತ ಉಗ್ರವಾದಿ. ಅವರೊಬ್ಬ ಭಾರತದ ಉಗ್ರವಾದಿಯಷ್ಟೆ, ರಾಜನೀತಿ ತಜ್ಞ ಅಲ್ಲ. ರಾಜತಾಂತ್ರಿವಾಗಿ ಭಾರತ ಮತ್ತು ಪಾಕಿಸ್ಥಾನ ಇಟ್ಟುಕೊಂಡಿದ್ದ ಭರವಸೆಗಳೆಲ್ಲವನ್ನೂ ಸುಳ್ಳಾಗಿಸಿದ್ದಾರೆ.

2016, ಜುಲೈ: ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಬೇರಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಪಾಕ್‌ ಸೇನೆಯಿಂದ ಮಾತ್ರ ಪರಿಹಾರ ಸಾಧ್ಯ.

2016, ಅಕ್ಟೋಬರ್‌: ನನಗೆ ಶಾಂತಿ ಕಾಪಾಡುವ ವಿಚಾರದಲ್ಲಿ ನಂಬಿಕೆ ಇದೆ.ಯುದ್ಧದಿಂದ ಯಾವುದೇ ಸಮಸ್ಯೆಗೂ ಎಲ್ಲಿಯೂ ಪರಿಹಾರ ಇಲ್ಲ. ಮೊದಲ ಭೇಟಿಯಲ್ಲಿ ಶಾಂತಿ ಭರವಸೆ ನೀಡಿದ್ದರು.

ಖಾನ್‌ ಗೆಲುವಿಗೆ ಕಾರಣ
ಷರೀಫ್ ವಿರುದ್ಧದ ಭ್ರಷ್ಟಾಚಾರ ಸಮರವನ್ನು, ರಾಷ್ಟ್ರೀಯತೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವುದು
ಸೇನೆ ಜತೆ ಉತ್ತಮ ಬಾಂಧವ್ಯ,ಉಗ್ರ ಸಂಘಟನೆಗಳ ಬಗ್ಗೆ ಮೃದು ಧೋರಣೆ.
ಯುವಕರ ವಿಶ್ವಾಸಗಳಿಸುತ್ತಲೇ, ತಮ್ಮ ಫೌಂಡೇಶನ್‌ನಿಂದ ಸಾಮಾಜಿಕ ಸೇವೆಗೆ ಆದ್ಯತೆ.

ಇಮ್ರಾನ್‌ ಖಾನ್‌ ಪಕ್ಷ ಚುನಾವಣೆಯಲ್ಲಿ ಗೆದ್ದದ್ದು ಸಂತೋಷವಾಗಿದೆ. ಭಾರತದ ವಿರುದ್ಧ ಆತ ಯಾವುದೇ ಭಾವನೆ ಹೊಂದಿಲ್ಲ.ಆತ ನಿಜಕ್ಕೂ ಪ್ರಾಮಾಣಿಕ ವ್ಯಕ್ತಿ. ಅವರು ಉತ್ತಮ ಕೆಲಸ ಮಾಡಬೇಕೆನ್ನುತ್ತೇನೆ. 
ಪರ್ವೇಜ್‌ ಮುಷರ್ರೀಫ್, ಮಾಜಿ ಅಧ್ಯಕ್ಷ

ಯಾವುದೇ ಹಂತದಲ್ಲಿ ಪಾಕಿಸ್ಥಾನ ನಮ್ಮ ದೇಶದ ಮೇಲೆ ಯುದ್ಧ ಸಾರಿದರೆ ಅದನ್ನು ಎದುರಿಸಲು ಸಿದ್ಧರಾ ಗಿರಬೇಕು. ನಾವು ಆ ರಾಷ್ಟ್ರವನ್ನು ನಾಲ್ಕು ಭಾಗಗಳನ್ನಾಗಿ ಮಾಡಬೇಕು. ಆ ಅವ ಕಾಶ ಸದುಪಯೋಗ ಮಾಡಬೇಕು. 
ಡಾ.ಸುಬ್ರಹ್ಮಣ್ಯನ್‌ ಸ್ವಾಮಿ, ಬಿಜೆಪಿ ನಾಯಕ

2013 ಪಾಕ್‌ ಚುನಾವಣೆ
166 ಪಿಎಂಎನ್‌ಎಲ್‌ಎನ್‌
42 ಪಿಪಿಪಿ
35 ಪಿಟಿಐ

ಸೋತ ಪ್ರಮುಖರು
ಶಾಹಿದ್‌ ಖಾನ್‌ ಅಬ್ಟಾಸಿ ಮಾಜಿ ಪ್ರಧಾನಿ
ಶೆಹಬಾಜ್‌ ಷರೀಫ್ ಪಿಎಂಎಲ್‌-ಎನ್‌ ನಾಯಕ
ಸಿರಾಜುಲ್‌ ಹಕ್‌ ಜಮಾತ್‌-ಇ- ಇಸ್ಲಾಮಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next