Advertisement

ಚುನಾವಣೆಯಲ್ಲಿ ನಾನು ಸೋತರೆ ದೇಶ ತ್ಯಜಿಸಬೇಕಾದೀತು: ಡೊನಾಲ್ಡ್‌ ಟ್ರಂಪ್‌

12:07 PM Nov 03, 2015 | keerthan |

ವಾಷಿಂಗ್ಟನ್‌: ಫ್ಲೋರಿಡಾ ಹಾಗೂ ಜಾರ್ಜಿಯಾದಲ್ಲಿ ರವಿವಾರ ಚುನಾವಣಾ ಪ್ರಚಾರ ರ್ಯಾಲಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮತದಾರರನ್ನು ಸೆಳೆಯಲು ಭಾವನಾತ್ಮಕ ದಾಳ ಉರುಳಿಸಿದ್ದಾರೆ.

Advertisement

“ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌ ಅವರೇನಾದರೂ ಗೆದ್ದರೆ, ದೇಶದಲ್ಲಿ ಕಮ್ಯೂನಿಸಂ ಮತ್ತು ಕ್ರಿಮಿನಲ್‌ ವಲಸಿಗರ ಪ್ರವಾಹವೇ ಉಂಟಾಗಲಿದೆ. ನಾನೇನಾದರೂ ಈ ಚುನಾವಣೆಯಲ್ಲಿ ಸೋತರೆ ಏನಾಗಬಹುದು ಎಂದು ಯೋಚಿಸಿದ್ದೀರಾ? ನಾನು ಈ ದೇಶ ಬಿಟ್ಟೇ ಹೋಗಬೇಕಾಗಬಹುದು’ ಎಂದು ಟ್ರಂಪ್‌ ಹೇಳಿದ್ದಾರೆ.

ಇದನ್ನೂ ಓದಿ:ಕಾರಜೋಳ ಪುತ್ರನ ಅರೋಗ್ಯ ಸ್ಥಿತಿ ಗಂಭೀರ : ಚಿಕಿತ್ಸೆಗಾಗಿ ಏರ್‌ ಲಿಫ್ಟ್ ಮೂಲಕ ಹೈದರಾಬಾದ್‌ಗೆ

ಮಿಚಿಗನ್‌ನಲ್ಲಿ ಮಾತನಾಡಿದ ಬೈಡೆನ್‌, “ಡೊನಾಲ್ಡ್‌ ಟ್ರಂಪ್‌ ಯಾರೆಂದು ನಿಮಗೆಲ್ಲರಿಗೂ ಗೊತ್ತು. ಈಗ ನೀವು ಯಾರೆಂದು ತೋರಿಸುವ ಸಮಯ ಬಂದಿದೆ. ನಾವು ಭಯದ ಬದಲಿಗೆ ಭರವಸೆಯನ್ನೂ, ವಿಭಜನೆಯ ಬದಲಿಗೆ ಏಕತೆಯನ್ನೂ, ಕಲ್ಪನೆಯ ಬದಲಿಗೆ ವಿಜ್ಞಾನವನ್ನೂ, ಸುಳ್ಳುಗಳ ಬದಲಿಗೆ ಸತ್ಯವನ್ನು ಆಯ್ಕೆ ಮಾಡುವವರು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next