Advertisement

ದೇಶಪ್ರೇಮವಿದ್ದರೆ ಮಗನನ್ನು ಸೈನಿಕನನ್ನಾಗಿ ಮಾಡಲಿ

12:36 PM Apr 14, 2019 | Team Udayavani |

ಮಳವಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೇಶಪ್ರೇಮವಿದ್ದರೆ ತಮ್ಮ ಮಗನನ್ನು ಸಂಸದನನ್ನಾಗಿ ಮಾಡುವ ಬದಲು ಸೈನಿಕನನ್ನಾಗಿ ಮಾಡಬಹುದಿತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ತಿರುಗೇಟು ನೀಡಿದರು.

Advertisement

ಹಲಗೂರು ಹೋಬಳಿಯ ಗೊಲ್ಲರಹಳ್ಳಿ, ಚಿಕ್ಕಎಲಚಗೆರೆ, ದೊಡ್ಡ ಎಲಚಗೆರೆ, ಬ್ಯಾಡರಹಳ್ಳಿ ಕರಲಕಟ್ಟೆ ಮತ್ತು ಹಲಗೂರಿನಲ್ಲಿರೋಡ್‌ ಶೋ ಮುಖಾಂತರ ಮತಯಾಚಿಸಿ ಹಲಗೂರಿನ ವೃತ್ತದಲ್ಲಿ ಮಾತನಾಡಿ, ನಮ್ಮ ದೇಶದ ಗಡಿ ಕಾಯುತ್ತಿರುವ ಸೈನಿಕರಿಂದ ನಾವು ಸುಖವಾಗಿ ಊಟ, ನಿದ್ರೆ, ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದೇವೆ. ಆದರೆ, ಮುಖ್ಯಮಂತ್ರಿಗಳು ಎರಡು ಹೊತ್ತಿನ ಊಟಕ್ಕೆ ತೊಂದರೆ ಇರುವವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಚುಚ್ಚು
ಮಾತನ್ನಾಡುತ್ತಾರೆ. ಜವಾಬ್ದಾರಿ ಇರುವವರು ಮಾತನಾಡುವ ಮಾತೇ ಇದು ಎಂದು ಪ್ರಶ್ನಿಸಿದರು.

ದೇಶ ಭಕ್ತಿ ಎಂಬುದು ಇವರಿಗೆನು ಗೊತ್ತಿದೆ, ದೇಶ ಭಕ್ತಿ ಇರುವವರು ಯೋಧರಾಗುತ್ತಾರೆ. ಇವರಿಗೆ ಕಾಳಜಿ ಇದ್ದರೆ ಮಗನನ್ನು ಸಂಸದನಾಗುವ ಬದಲು ಸೈನಿಕನಾಗು ಎಂದು ಹೇಳಬಹುದಿತ್ತು ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೈತರಿಗೆ ನೀಡಿದ ಭರವಸೆಗಳು ಸುಳ್ಳು ಎಂಬುದು ಈಗ ಸಾಬೀತಾಗಿದೆ. ಬರೀದಬ್ಟಾಳಿಕೆ ಮತ್ತು ದ್ವೆ‚àಷದ ರಾಜಕೀಯ ಮಾಡುತ್ತಿದ್ದಾರೆ. ಮಾಧ್ಯಮದವರ ಮೇಲೆ ನಮ್ಮಕಾರ್ಯಕರ್ತರು ಹಲ್ಲೆ ನಡೆಸಿದರೆ ನಾನು ಹೊಣೆಗಾರನಲ್ಲ ಎಂಬ ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ. ಹದಿನಾರನೇ ತಾರೀಖು ನನ್ನ ಮೇಲೆ ನಾನೇ ಕಲ್ಲು ಹೊಡೆಸಿಕೊಂಡು ನಾನೇ ಅವರ ಮೇಲೆ ಆರೋಪ ಮಾಡುತ್ತೇನೆ ಎಂದು ಹೇಳುತ್ತಾರಲ್ಲ ಇದು ಸರೀನಾ ಎಂದು ಪ್ರಶ್ನಿಸಿದರು.

ಇಡೀ ಸರ್ಕಾರನು °ಎದುರು ಹಾಕಿಕೊಂಡು ನಾನೊಬ್ಬಳೆ ನಿಮ್ಮಗಳ ಧೈರ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಇದು ಇತಿಹಾಸವಾಗಲಿದೆ ನನ್ನನ್ನು ಅರ್ಶಿರ್ವದಿಸಿ ಎಂದರು. ಜಿಲ್ಲೆಯ ಅಭಿವೃದ್ಧಿಗೆ ಅಂಬರೀಶ್‌ ಏನು ಕನಸು ಕಂಡಿದ್ದಾರೋ ಅದನ್ನು ನನಸು ಮಾಡುವ ಆಸೆ ಹೊಂದಿದ್ದು, ನೀವು ಸಹಕಾರ ನೀಡಿ ಎಂದು ಮನವಿ ಮಾಡಿದಚ ಅವರು, ವಿಷ್ಣುವರ್ಧನ್‌ ಸ್ಮಾರಕ ಮಾಡುವುದು ಈಗ ಅವರಿಗೆ ನೆನಪಾಗುತ್ತಿದೆ, ಇಲ್ಲಿಯವರೆಗೂ ಎಲ್ಲಿ ಹೋಗಿತ್ತು ಈ ಅಭಿಮಾನ. ಅಭಿಮಾನಿಗಳು ದಡ್ಡರಲ್ಲ, ಅವರೂ ಸಹ ಎಲ್ಲವನ್ನೂ ನೋಡುತ್ತಿದ್ದಾರೆ. ಈ ರೀತಿಯ ಕುತಂತ್ರ ರಾಜಕಾರಣಿಗಳನ್ನು ದೂರವಿಡಿ ಎಂದರು.

ಇದೇ ಸಂದರ್ಭದಲ್ಲಿ ಅಂಬಿ ಪ್ರಿಯ ಸ್ನೇಹ ಬಳಗದ ಅದ್ಯಕ್ಷರಾದ ದಡಮಹಳ್ಳಿ ಉಮೇಶ್‌ ಮತ್ತು ಸ್ನೇಹಿತರುಗಳಿಂದ ಚುನಾವಣೆ ವೆಚ್ಚಕ್ಕಾಗಿ 10 ಸಾವಿರ ರೂ.ಗಳನ್ನು ನೀಡಲಾಯಿತು

Advertisement
Advertisement

Udayavani is now on Telegram. Click here to join our channel and stay updated with the latest news.

Next