Advertisement

ಭಾರತದ ತಂಟೆಗೆ ಬಂದರೆ ತಕ್ಕಪಾಠ: ಚೀನಕ್ಕೆ ಭಾರತ ಕಠಿನ ಸಂದೇಶ

12:41 PM Apr 16, 2022 | Team Udayavani |

ವಾಷಿಂಗ್ಟನ್‌: ಭಾರತದ ಸಾರ್ವಭೌಮತ್ವಕ್ಕೆ ಹಾನಿಮಾಡಲು ಯಾರೇ ಪಿತೂರಿ ರೂಪಿಸಿದರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಮೂಲಕ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು, ಲಡಾಖ್‌ ಬಿಕ್ಕಟ್ಟಿನ ವಿಚಾರದಲ್ಲಿ ಚೀನಕ್ಕೆ ಕಠಿನ ಸಂದೇಶ ರವಾನಿಸಿದ್ದಾರೆ.

Advertisement

ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಇಂಡೋ- ಅಮೆರಿಕನ್‌ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಲಡಾಖ್‌ನ ಗಡಿಯಲ್ಲಿ ಭಾರತದ ಯೋಧರು ಏನು ಮಾಡಿದರು? ಕೇಂದ್ರ ಸರಕಾರ ಎಂಥ ನಿಲುವು ತೆಗೆದುಕೊಂಡಿತ್ತು? - ಇವೆಲ್ಲವನ್ನೂ ಸಾರ್ವಜನಿಕವಾಗಿ ಹೇಳಲಾಗದು. ಆದರೆ, ನಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂಬ ಕಠಿನ ಸಂದೇಶವನ್ನು ನಾವು ಎದುರಾಳಿಗಳಿಗೆ ಮುಟ್ಟಿಸಿದ್ದೇವೆ’ ಎಂದಿದ್ದಾರೆ.

ನಾವು ಏಕಪಕ್ಷೀಯವಲ್ಲ: “ಹೊಸದಿಲ್ಲಿಯ ವಿದೇಶಾಂಗ ನೀತಿ ಏಕಪಕ್ಷೀಯವಲ್ಲ. ನಮ್ಮ ಒಂದು ದೇಶದೊಂದಿಗಿನ ನಮ್ಮ ಸಂಬಂಧ ಇನ್ನೊಂದು ದೇಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಯಾವುದೇ ಚಿಂತೆ ಅನಗತ್ಯ’ ಎನ್ನುವ ಮೂಲಕ ರಷ್ಯಾದ ಜತೆಗಿನ ಭಾರತದ ಸಂಬಂಧವನ್ನು ಅಮೆರಿಕನ್ನರಿಗೆ ಮನವರಿಕೆ ಮಾಡಿಸಿದರು.

“ಭಾರತದ ಚಿತ್ರವೇ ಈಗ ಬದಲಾಗಿದೆ. ದೇಶ ಮತ್ತಷ್ಟು ಪ್ರತಿಷ್ಠಿತವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಜಗತ್ತಿನ ಟಾಪ್‌ 3 ರಾಷ್ಟ್ರಗಳಿಗೆ ಸೇರುವುದನ್ನು ಯಾರಿಂದಲೂ ತಪ್ಪಿಸಲಾಗದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next