Advertisement

ಮಾರ್ಗದರ್ಶನ ದೊರೆತರೆ ಯಶಸ್ಸು

11:34 AM Jan 13, 2018 | Team Udayavani |

ಕ‌ಲಬುರಗಿ: ವಿದ್ಯಾರ್ಥಿ ಜೀವನವಲ್ಲದೇ ಯಾವುದೇ ಕ್ಷೇತ್ರದಲ್ಲಿಯೂ ಸೂಕ್ತ ತರಬೇತಿ ಹಾಗೂ ಉತ್ತಮ ಮಾರ್ಗದರ್ಶನ ದೊರೆತರೆ ಖಂಡಿತವಾಗಿ ಯಶಸ್ಸು ಸಾಧಿಸಬಹುದು ಎಂದು ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಶರಣಬಸವಪ್ಪ ಹರವಾಳ ಹೇಳಿದರು.

Advertisement

ವಿಷನ್‌ ಎಜುಕೇಷನ್‌ ಗ್ರೂಪ್‌ನ ವಿಷನ್‌ ನೀಟ್‌ ಅಕಾಡೆಮಿ ವತಿಯಿಂದ ನಗರದ ಆಳಂದ ರಸ್ತೆಯ ಅಣ್ಣಾರಾವ್‌ ಬೆಣ್ಣೂರಕರ್‌ ಕಲ್ಯಾಣ ಮಂಟಪದಲ್ಲಿ ಅಕಾಡೆಮಿಯಿಂದ ನೀಟ್‌ ವೈದ್ಯಕೀಯ ಪ್ರವೇಶಾತಿ ತರಬೇತಿ ಪಡೆದು ವೈದ್ಯಕೀಯ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ ಹಾಗೂ ಯಶಸ್ವಿ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕೋರ್ಸ್‌ ಪ್ರವೇಶಾತಿ ಪಡೆಯಬೇಕಾದರೆ ಹೈಕ ಭಾಗದ ವಿದ್ಯಾರ್ಥಿಗಳು ದೂರದ ಬೆಂಗಳೂರು, ಹೈದ್ರಾಬಾದ, ಮುಂಬೆ„, ಚೆನ್ನೈ ಮಹಾನಗರಗಳನ್ನೇ ನೆಚ್ಚಿಕೊಳ್ಳಬೇಕಿತ್ತು. ಆದರೆ ಹಿಂದುಳಿದ ಈ ಭಾಗಕ್ಕೆ ವಿಷನ್‌ ಅಕಾಡೆಮಿ ಕಲಬುರಗಿ ನಗರಕ್ಕೆ ಬಂದಿರುವುದು ಸುದೈವ ಎನ್ನಬಹುದಾಗಿದೆ ಎಂದರು.

ತಂದೆ-ತಾಯಿ ತಮ್ಮ ಮಕ್ಕಳು ವೈದ್ಯ, ಇಂಜಿನಿಯರ್‌ ಆಗಬೇಕೆಂದು ಅಭಿಲಾಷೆ ಹೊಂದುತ್ತಾರೆ. ಇಂತಹ ಅಕಾಡೆಮಿಗಳಲ್ಲಿ ತರಬೇತಿ ನೀಡುವಂತಹ ಅವಕಾಶ ಕಲ್ಪಿಸಿದರೆ ಆಸೆ ಈಡೇರಬಹುದು. ಒಟ್ಟಾರೆ ಈ ನೂತನ ಅಕಾಡೆಮಿಯ ಲಾಭವನ್ನು ಸದುಪಯೋಗ ಪಡೆದುಕೊಳ್ಳಬೆಕೆಂದು ಕರೆ ನೀಡಿದರು.

ಮುಖ್ಯ ಅಥಿಯಾಗಿದ್ದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಟಿ. ವೆಂಕಟರೆಡ್ಡಿ ಮಾತನಾಡಿ, ವೈದ್ಯೋ ನಾರಾಯಣ ಎನ್ನಲಾಗುತ್ತದೆ. ಈ ವಾಕ್ಯಕ್ಕೆ ಮತ್ತಷ್ಟು ಬಲ ತುಂಬಲು ವೈದ್ಯರಾಗುತ್ತಿರುವ ನಾವುಗಳೆಲ್ಲ ಉತ್ತಮ
ಸಮಾಜಮುಖೀಯಾಗಿ ಸೇವೆ ಸಲ್ಲಿಸುತ್ತೇವೆಂದು ಶಪಥ ಮಾಡಬೇಕು ಎಂದು ಕರೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿಷನ್‌ ಎಜುಕೇಷನ್‌ ಗ್ರೂಪ್‌ನ ಅಧ್ಯಕ್ಷ ರಾಮ ಮನೋಹರ ರೆಡ್ಡಿ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಅಕಾಡೆಮಿ ವತಿಯಿಂದ ತರಬೇತಿ ಪಡೆದವರಲ್ಲಿ 500 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ
ಪ್ರವೇಶಾತಿ ಪಡೆದಿದ್ದಾರೆ. ಅದರಲ್ಲಿ 40 ವಿದ್ಯಾರ್ಥಿಗಳು ಟಾಪ್‌ನಲ್ಲಿ ರ್‍ಯಾಂಕ್‌ ಪಡೆದಿದ್ದಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎನ್‌. ಪಾಟೀಲ, ಐಡಿಯಾ ಬೋರ್ಡ್‌ನ ನಿರ್ದೇಶಕ ರಾವನ್‌, ಉಪನ್ಯಾಸಕರಾದ ಜಾಹೀದ್‌ ಅಹ್ಮದ, ಎನ್‌. ಜಾಗೀರದಾರ್‌, ಕೃಷ್ಣಾರೆಡ್ಡಿ ಸೇರಿದಂತೆ ಮುಂತಾದವರಿದ್ದರು.
ವಿಷನ್‌ ಎಜುಕೇಷನ್‌ ಗ್ರೂಪ್‌ನನ ನಿರ್ದೇಶಕ ಐ. ಲಕ್ಷ್ಮೀರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉತ್ತಮ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next