ಮುಂಬಯಿ: ಕೋವಿಡ್-19 ಮುನ್ನೆಚ್ಚರಿಕೆಯ ಕಾರಣ ಕ್ರಿಕೆಟ್ ಚೆಂಡಿಗೆ ಲಾಲಾರಸ (ಉಗುಳು) ಹಚ್ಚುವುದನ್ನು ಐಸಿಸಿ ನಿಷೇಧಿಸಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಪೇಸ್ ಬೌಲರ್ ಅಜಿತ್ ಅಗರ್ಕರ್ ಸಲಹೆಯೊಂದನ್ನು ನೀಡಿದ್ದಾರೆ.
ಕ್ರಿಕೆಟಿಗರೆಲ್ಲರ ಫಲಿತಾಂಶ ನೆಗೆಟಿವ್ ಇದ್ದರೆ ಉಗುಳು ಬಳಸಬಹುದು ಎಂದಿದ್ದಾರೆ.
“ಪಂದ್ಯಕ್ಕೂ ಮೊದಲು ಆಡುವ ಬಳಗಕ್ಕೆ ಕೋವಿಡ್-19ಟೆಸ್ಟ್ ಕಡ್ಡಾಯ ಇರುತ್ತದೆ. ಇಲ್ಲಿ ಎಲ್ಲರ ಫಲಿತಾಂಶ ನೆಗೆಟಿವ್ ಬಂದರೆ ಆಗ ಚೆಂಡಿಗೆ ಉಗುಳು ಹಚ್ಚಬಹುದು. ಇದೊಂದು ಸುರಕ್ಷಿತ ಕ್ರಮ ಆಗಿರುತ್ತದೆ’ ಎಂಬುದಾಗಿ ಅಜಿತ್ ಅಗರ್ಕರ್ ಹೇಳಿದ್ದಾರೆ.
“ಇದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ. ಇದಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಸೂಕ್ತ’ ಎಂದೂ ಅಜಿತ್ ಅಗರ್ಕರ್ ಹೇಳಿದರು.