Advertisement
ಬಡ ಕುಟುಂಬದಿಂದ ಬಂದ ಅವರು ಕ್ರಿಕೆಟ್ ಆಟದ ಕಡೆ ಒಲವು ತೋರಿಸಿದ ಕಾರಣವನ್ನು ತಿಳಿಸಿದ್ದಾರೆ. ಕುಟುಂಬವನ್ನು ಬಡತನದಿಂದ ಹೊರತರುವುದು ಅವರ ಬಾಲ್ಯದ ಕನಸಾಗಿತ್ತು ಮತ್ತು ಅದಕ್ಕಾಗಿ ಕ್ರಿಕೆಟ್‌ನತ್ತ ನನ್ನ ಒಲವು ಹೋಗದಿದ್ದರೆ ಸೈನಿಕನಾಗುತ್ತಿದ್ದೆ ಎಂದವರು ಬಹಿರಂಗಪಡಿಸಿದರು.
Related Articles
Advertisement
ಕುಟುಂಬದ ಸದಸ್ಯ ಫ್ರಾಂಚೈಸಿ ಜತೆಗೆ ಯಾವ ರೀತಿ ಸಮಯ ಕಳೆಯುತ್ತಿದ್ದೆ ಎಂಬ ವಿಷಯದ ಬಗ್ಗೆ ಮಾತನಾಡಿದ ಪವರ್ ಹಿಟ್ಟರ್ ಪೊವೆಲ್ ಅವರು ತನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.
ಆಟಗಾರನೋರ್ವನಿಗೆ ತಂಡದಲ್ಲಿ ಒಳ್ಳೆಯ ವಾತಾವರಣದ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು ಇದು ಆಟಗಾರ ಶ್ರೇಷ್ಠ ನಿರ್ವಹಣೆ ನೀಡಲು ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದನ್ನು ಮನದಟ್ಟು ಮಾಡಿದರು.ಬಹಳಷ್ಟು ದೂರದ ಕೆರಿಬಿಯನ್‌ನಿಂದ ಬಂದಿರುವ ನನಗೆ ತವರಿನಲ್ಲಿ ಇರುವಂತಹ ಅನುಭವ ಸಿಗುವುದು ಅತ್ಯಗತ್ಯವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನನ್ನನ್ನು ಅವರ ಕುಟುಂಬದ ಸದಸ್ಯರೆಂಬುದನ್ನು ಒಪ್ಪಿಕೊಂಡಿದೆ ಮತ್ತು ತವರಿನಲ್ಲಿ ಇದ್ದೇನೆ ಎಂಬ ಭಾವನೆಯಾಗುತ್ತಿದೆ ಎಂದ ಅವರು ಈ ಭಾವನೆಯೇ ಶ್ರೇಷ್ಠ ನಿರ್ವಹಣೆ ನೀಡಲು ಪ್ರೇರಕ ಶಕ್ತಿಯಾಗಿದೆ ಎಂದರು. ರಿಷಬ್ ಪಂತ್ ಅವರ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮೊದಲ ದಿನದಿಂದ ಇಲ್ಲಿಯತನಕ ಅವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಮತ್ತು ಕೆರಿಬಿಯನ್ ಆಟಗಾರರೆಲ್ಲರೂ ಉತ್ತಮ ಆಟಗಾರರು ಎಂದು ಹೇಳುತ್ತ ಬಂದಿದ್ದಾರೆ ಎಂದರು.