Advertisement

‘ಬಿಜೆಪಿ ಗೆದ್ದರೆ ಪ್ರತ್ಯೇಕ ಮರಳು ನೀತಿ ಜಾರಿ: ಹರೀಶ್‌ ಪೂಂಜ

08:25 AM May 05, 2018 | Team Udayavani |

ಮಡಂತ್ಯಾರು: ಬಡವರಿಗೆ ನೇರವಾಗಿ ಸವಲತ್ತನ್ನು ನೀಡುವ ಕೆಲಸ ಮೋದಿ ಸರಕಾರ ಮಾಡುತ್ತಿದೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಸ್ಥಾನ ಕೊಟ್ಟ ಪಕ್ಷ ಬಿಜೆಪಿ. ನವಬೆಳ್ತಂಗಡಿ ನಿರ್ಮಾಣದ ಮೂಲಕ ರಾಜ್ಯವನ್ನು ನವಕರ್ನಾಟಕ ಮಾಡಲು ಸಂಕಲ್ಪ ಮಾಡಬೇಕಿದೆ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಹೇಳಿದರು.

Advertisement

ಅವರು ಗುರುವಾರ ಮಚ್ಚಿನದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಹಿಂದೂ ಸಮಾಜ ಸುರಕ್ಷಿತವಾಗಿಲ್ಲ. ದ.ಕ. ಜಿಲ್ಲೆಯ ಮರಳನ್ನು ಬೇರೆ ಊರುಗಳಿಗೆ ನೀಡು ಮೂಲಕ ಮರಳು ಮಾಫಿಯಾ ನಡೆಯುತ್ತಿದೆ. ನಮ್ಮ ಜಿಲ್ಲೆಯವರು ಒಂದು ಲೋಡಿಗೆ 15ರಿಂದ 20 ಸಾವಿರ ರೂ. ಕೊಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಉಸ್ತುವಾರಿ ಸಚಿವರು. ಬಿಜೆಪಿ ಗೆಲ್ಲಿಸಿದರೆ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರುವ ಮೂಲಕ ಜನತೆಗೆ ಮನೆ ನಿರ್ಮಾಣಕ್ಕೆ ನೆರವಾಗುತ್ತೇವೆ ಎಂದರು.

ಭ್ರಷ್ಟಾಚಾರ ಮುಕ್ತ
ತಾಲೂಕಿನ 81 ಗ್ರಾಮಗಳಲ್ಲಿ ಇನ್ನೂ ರಸ್ತೆಯಾಗಿಲ್ಲ. ಪ್ರವಾಸೋದ್ಯಮ ಅಭಿ ವೃದ್ಧಿಯಾಗಿಲ್ಲ. ತಾಲೂಕು ಕಚೇರಿಗಳಲ್ಲಿ ಭ್ರಷ್ಟರೇ ತುಂಬಿದ್ದಾರೆ. ಇದಕ್ಕೆ ಕಾರಣ ತಾಲೂಕಿನ ಭ್ರಷ್ಟ ರಾಜಕೀಯ. ಬಿಜೆಪಿ ಆಡಳಿತ ಬಂದರೆ ತಾಲೂಕನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ. ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಾಡಿದಂತೆ ತಾಲೂಕಿನಲ್ಲೂ ಚಕ್‌ ಡ್ಯಾಂ ನಿರ್ಮಾಣ ಮಾಡಿ ತಾಲೂಕಿನ ಎಲ್ಲ ಗ್ರಾಮ ಗಳಿಗೂ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ಹರಿಕಷ್ಣ ಬಂಟ್ವಾಳ, ಜಿಲ್ಲಾ ಬಿಜೆಪಿ ಪ್ರಚಾರ ಸಮಿತಿಯ ರತ್ನಾಕರ ಪೂಜಾರಿ ಬಲ್ಪುಂಜ, ಕಾನೂನು ಪ್ರಕೋಷ್ಟದ ಸಂಚಾಲಕ ವಸಂತ ಮರಕ್ಕಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ ಕಾರಂದೂರು, ಅನೀಷ್‌ ಅಮೀನ್‌, ಹಿತೇಶ್‌ ಕಾಪಿನಡ್ಕ, ತಾ.ಪಂ. ಸದಸ್ಯೆ ವಸಂತಿ ಎಲ್‌., ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ಬಿಜೆಪಿ ಗ್ರಾ. ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಬಿಎಸ್‌. ಉಪಸ್ಥಿತರಿದ್ದರು.

ಉದ್ಯೋಗ
ತಾಲೂಕಿನಲ್ಲಿ 70 ಸಾವಿರ ಕುಟುಂಬಗಳಿವೆ. ಇದರಲ್ಲಿ ಅನೇಕರು ಉದ್ಯೋಗ ವಂಚಿತರು ಇದ್ದಾರೆ. ಉದ್ಯೋಗ ಮೇಳದ ಮೂಲಕ ಉದ್ಯೋಗ ಕಲ್ಪಿಸಿ ನೆರವಾಗುವ ಮೂಲಕ ಪ್ರಣಾಳಿಕೆಯಲ್ಲಿ ಮೊದಲ ಆದ್ಯತೆ ನೀಡುತ್ತೇವೆ.
– ಹರೀಶ್‌ ಪೂಂಜ, ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next