Advertisement
ವೀಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಖಾನ್, ಘಟನೆ ಬಗ್ಗೆ ಸಾಕ್ಷ್ಯ ಕೇಳಿದ್ದಾರೆ. ನೀಡಿದರೆ ತನಿಖೆ ಎದುರಿ ಸಲು ಸಿದ್ಧ ಎಂದಿದ್ದಾರೆ. ಭಾರತ ಆಧಾರವಿಲ್ಲದ ಆರೋಪ ಹೊರಿಸುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಭಾರತದ ಮಾಧ್ಯಮ, ನಾಯಕರು ಸೇಡಿನ ಮಾತಾಡುತ್ತಿದ್ದಾರೆ. ನಮ್ಮ ಮೇಲೆ ದಾಳಿ ನಡೆಸಿದರೆ ಸುಮ್ಮನಿರುತ್ತೇವೆ ಎಂದು ಭಾವಿಸುವುದು ಬೇಡ. ಸೂಕ್ತ ಪ್ರತ್ಯುತ್ತರ ನೀಡುತ್ತೇವೆ ಎಂದೂ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್ ಹೇಳಿಕೆಯನ್ನು ಸಂಪೂರ್ಣ ವಾಗಿ ತಿರಸ್ಕರಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ಜಾಗತಿಕ ಉಗ್ರವಾದಕ್ಕೆ ಪಾಕಿಸ್ಥಾನವೇ ಮೂಲ ನೆಲೆ ಎಂದು ಆರೋಪಿಸಿದೆ. 2008ರ ಮುಂಬಯಿ ದಾಳಿ ಬಗ್ಗೆ ಸಾಕ್ಷ್ಯ ಕೊಟ್ಟು 10 ವರ್ಷ ಗಳಾದವು, ಏನು ಮಾಡಿದ್ದೀರಿ ಎಂದು ತಿವಿದಿದೆ. ಅಲ್ಲಿನ ಪ್ರಧಾನಿ ಹೇಳಿಕೆ ಯಿಂದ ಅಚ್ಚರಿಯಾಗಿಲ್ಲ ಎಂದು ವ್ಯಂಗ್ಯ ವಾಡಿದೆ. ಜೆಇಎಂ ಕೃತ್ಯದ ಬಗ್ಗೆ ಮಾಡಿರುವ ಸ್ವಯಂ ಘೋಷಣೆಯನ್ನು ನೆರೆಯ ರಾಷ್ಟ್ರದ ಪ್ರಧಾನಿ ಮರೆತಿದ್ದಾರೆ. ಜೆಇಎಂ ಮತ್ತು ಅದರ ನಾಯಕ ಮಸೂದ್ ಅಝರ್ ಪಾಕ್‌ನಲ್ಲೇ ಇದ್ದಾರೆ ಎಂದೂ ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.