ರಾಮನಗರ: ಮಹಿಳೆಯರು ವಿದ್ಯಾವಂತರು, ವಿಚಾರವಂತರೂ ಆದಾಗ ಮಾತ್ರ ತಮ್ಮ ವಿರುದ್ಧದ ಶೋಷಣೆಯಿಂದ ಪಾರಾಗಲು ಸಾಧ್ಯ ಎಂದು ಜಿಪಂ ಉಪಾಧ್ಯಕ್ಷೆ ಡಿ.ಎಚ್.ಜಯರತ್ನ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ವಿರುದ್ಧ ದೌರ್ಜನ್ಯ, ದುಷ್ಕೃತ್ಯಗಳಿಂದ ರಕ್ಷಣ ಪಡೆಯಲು ಕನಿಷ್ಠ ಕಾನೂನಿನ ಅರಿವಿರಬೇಕು. ಮನೆ ಹೊರಗೆ, ಒಳಗೆ ದುಡಿಯುವ ಶ್ರಮ ಜೀವಿ. ಆಕೆಗೂ ಒಂದು ಮನಸ್ಸಿದೆ, ಹೃದಯವಿದೆ. ಆಸೆ, ಆಕಾಂಕ್ಷೆಗಳಿವೆ. ಇವುಗಳನ್ನು ಸಾಧಿಸಬೇಕಾದರೆ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದರು.
ಅಡುಗೆ ಮನೆಗೆ ಸೀಮಿತವಿಲ್ಲ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿ ಅನಸೂಯಮ್ಮ ಮಾತನಾಡಿ, ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗಿಲ್ಲ, ಆಗಲೂಬಾರದು ಎಂದರು. ಕೋವಿಡ್ 19 ಸೋಂಕು ಲಾಕ್‌ಡೌನ್ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತಂದು ತಮಗೆ ಅನುಕೂಲವಾಗುವಂತೆ ಬದಲಾವಣೆ ಮಾಡಿಕೊಂಡಿವೆ ಎಂದು ಹರಿಹಾಯ್ದರು.
ಮೂಢನಂಬಿಕೆಗಳಿಂದ ದೂರವಿರಿ: ಮಹಿಳಾ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ನಾಗರತ್ನ ಬಂಜಗೆರೆ ಮಾತನಾಡಿ, ಮೂಢನಂಬಿಕೆ ಹಾಗೂ ಸಾಮಾಜಿಕ ಅನಿಷ್ಠಕಟ್ಟುಪಾಡುಗಳಿಂದ ದೂರ ಇರ ಬೇಕು. ಮಹಿಳೆ ಮತ್ತು ಸಮಾಜ ಕುರಿತು ಡಾ.ವಿಜಯಾ, ಡಾ.ಅಬೀದಾ ಬೇಗಂ, ಪುಣ್ಯ ಮಾತನಾಡಿದರು.ಕವಿಗೋಷ್ಠಿಯಲ್ಲಿ ಸುಮಂಗಳಾ, ಶೈಲಾ, ವಸಂತಲಕ್ಷ್ಮೀ, ಸುಪ್ರಿಯಾ ಕವಿತೆ ವಾಚಿಸಿದರು. ಮಹಿಳಾ ಕಲಾವಿದರಿಗೆ ರಂಗೋಲಿ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ನಡೆಯಿತು.
ಪುಸ್ತಕ ಮಳಿಗೆ, ಕರಕುಶಲ ವಸ್ತುಗಳ ಮಳಿಗೆ, ವಸ್ತು ಪ್ರದರ್ಶನ ನಡೆಯಿತು. ಮಹಿಳಾ ತಂಡಗಳಿಂದ ಪೂಜೆ, ಪಟ, ವೀರಗಾಸೆ, ಡೊಳ್ಳು, ಭರತನಾಟ್ಯ, ಸಮೂಹ ನೃತ್ಯ, ಲಂಬಾಣಿ ನೃತ್ಯ, ಜಾನಪದ ಗಾಯನ, ಸುಗ್ಗಿ ಕುಣಿತ, ಸೋಬಾನೆ ಪದ, ಯೋಗಾಸನ ಮತ್ತಿತರ ಪ್ರದರ್ಶನಗಳು ನಡೆದವು. ಎನ್.ಎಚ್.ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ವಿನಯ್ ಕುಮಾರ್, ಉಪನ್ಯಾಸಕ ಡಾ.ಅಂಕನಹಳ್ಳಿ ಪಾರ್ಥ ಮತ್ತಿತರರಿದ್ದರು.
ಮಹಿಳಾ ರಾಜಕೀಯ ಪಕ್ಷ ರಚನೆಯಾಗಲಿ : ವಿಚಾರಗೋಷ್ಠಿ ಮತ್ತುಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಪ್ರೇಮಾ ಸಿದ್ದರಾಜು ಮಾತನಾಡಿ, ಪುರುಷರಿಂದ ತಮ್ಮ ವಿರುದ್ಧ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುವ ಬದಲಿಗೆಕಾನೂನು ಮತ್ತು ಸಂವಿಧಾನ ಮಹಿಳೆಯರಿಗೆ ನೀಡಿರುವ ಅವಕಾಶ, ರಕ್ಷಣೆಗಳ ಬಗ್ಗೆ ಅರಿಯಬೇಕು. ಅಕ್ಕಮಹಾದೇವಿಯ ಧೈರ್ಯ,ಕೆಚ್ಚು,ಆತ್ಮವಿಶ್ವಾಸ ಪ್ರತಿಯೊಬ್ಬ ಮಹಿಳೆಯಲ್ಲಿ ಮೂಡಬೇಕೆಂದರು. ಹೆಚ್ಚು ಮಹಿಳೆಯರು ರಾಜಕೀಯ ಪ್ರವೇಶ ಮಾಡಬೇಕು. ಮಹಿಳೆಗೆ ಮದುವೆ ಒಂದೇ ಮಾನದಂಡವಲ್ಲ. ಅದರಿಂದಾಚೆ ಸಾಧಿಸಬೇಕಾದುದುಬಹಳಷ್ಟಿದೆ. ಮಹಿಳೆಯರುಒಗ್ಗಟ್ಟಾಗಿಮಹಿಳಾಪಕ್ಷವನ್ನುಕಟ್ಟಿ ರಾಜಕೀಯಪ್ರವೇಶ ಮಾಡಿಸರ್ಕಾರ ರಚಿಸಬೇಕು ಎಂದು ತಿಳಿಸಿದರು.