ವಿ.ಮನೋಹರ್. ಐಪಿಆರ್‌ಎಸ್ (ಇಂಡಿಯನ್ ಪರ್‌ಫಾರ್ಮಿಂಗ್ ರೈಟ್ ಸೊಸೈಟಿ)ಗೆ ಮನೋಹರ್ ಕರ್ನಾಟಕದ ಪ್ರತಿನಿಧಿಯಾಗಿದ್ದವರು.
Advertisement
ಆಡಿಯೋ ಕಂಪೆನಿಗಳು ಸಂಗೀತ ನಿರ್ದೇಶಕರು, ಗೀತರಚನೆಕಾರರಿಂದ ಸಹಿ ಪಡೆದು ಹಕ್ಕು ಕಸಿದುಕೊಳ್ಳುತ್ತಿವೆ ಎಂಬ ಆರೋಪವಿದೆ. ಅದಕ್ಕೆ ಮನೋಹರ್ ಹೇಳ್ಳೋದು ಹೀಗೆ. “ಆಡಿಯೋ ಕಂಪೆನಿಗಳು ಸಹಿ ಮಾಡಿಸಿಕೊಂಡರೂ ಗೀತರಚನೆಕಾರ, ಸಂಗೀತ ನಿರ್ದೇಶಕರು ಭಯಪಡಬೇಕಿಲ್ಲ. ಯಾಕೆಂದರೆ, ಅವರು ತಮಗೆ ರಾಯಲ್ಟಿ ಬರಲ್ಲ ಅಂದುಕೊಳ್ಳುವುದೇ ತಪ್ಪು. ಐಪಿಆರ್‌ಎಸ್‌ಗೆ ಸದಸ್ಯತ್ವ ಪಡೆದಿದ್ದರೆ, ಅಂತಹವರಿಗೆ ರಾಯಲ್ಟಿ ಎಂದಿಗೂ ತಪ್ಪುವುದಿಲ್ಲ. ಆಡಿಯೋ ಕಂಪೆನಿಗಳು ಸಹಿ ಮಾಡಿಸಿಕೊಳ್ಳುವುದಕ್ಕೂ, ರಾಯಲ್ಟಿ ಬರೋದಿಲ್ಲ ಎನ್ನುವುದಕ್ಕೂ ಅರ್ಥವಿಲ್ಲ. ಯಾರು ಸದಸ್ಯರಾಗಿರುತ್ತಾರೋ, ಅವರ ಕೆಲಸಾನುಸಾರ ಅವರಿಗೆ ರಾಯಲ್ಟಿ ಬರುತ್ತಾ ಹೋಗುತ್ತೆ. ಒಂದು ರುಪಾಯಿಯಲ್ಲಿ ನಾಲ್ಕು ಭಾಗ ಮಾಡಿ, ಅದನ್ನು ತಲುಪಿಸುವ ಜವಾಬ್ದಾರಿಯನ್ನು ಐಪಿಆರ್‌ಎಸ್ ವಹಿಸಿಕೊಂಡಿದೆ. ತಮ್ಮ ಏಜೆಂಟ್ ಮೂಲಕ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಆಡಿಯೋ ಕಂಪೆನಿಯೂ ಸಹ ಐಪಿಆರ್ ಎಸ್ ಸದಸ್ಯತ್ವ ಹೊಂದಿರುತ್ತೆ. ಅವರನ್ನೂ ಒಳಗೊಂಡಂತೆ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗೂ ಗೀತರಚನೆಕಾರನಿಗೆ ಇಂತಿಷ್ಟು ಅಂತ ರಾಯಲ್ಟಿ ಹೋಗುತ್ತೆ. ಆದರೆ, ಇಲ್ಲಿ ಯಾರೋ ಹಾಡು ಬರೆದಿದ್ದೇನೆ, ನನ್ನ ಹಾಡು ಅಲ್ಲಿ ಬರುತ್ತಿದೆ ಅಂತ ಹೋಗಿ ರಾಯಲ್ಟಿ ಕೇಳ್ಳೋಕ್ಕಾಗಲ್ಲ. ಮೊದಲು ಸದಸ್ಯರಾಗಿರಬೇಕು. ಹಾಗಿದ್ದಲ್ಲಿ ಮಾತ್ರ ರಾಯಲ್ಟಿ ತಲುಪುತ್ತೆ.