Advertisement

ಐಇಡಿ ತಜ್ಞ, ಜೈಶ್‌ ಉಗ್ರ ಮುನ್ನಾ ಲಹೋರಿ ಹತ

01:38 AM Jul 28, 2019 | Team Udayavani |

ಶ್ರೀನಗರ: ಜಮ್ಮು – ಕಾಶ್ಮೀರದಲ್ಲಿ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುತ್ತಿರುವ ಭದ್ರತಾ ಪಡೆಗಳಿಗೆ ಶನಿವಾರ ಮಹತ್ವದ ಯಶಸ್ಸು ಪ್ರಾಪ್ತಿಯಾಗಿದೆ. ಶೋಪಿಯಾನ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಾಕ್‌ ನಾಗರಿಕ, ಜೆಇಎಂನ ಪ್ರಮುಖ ನಾಯಕ ಮುನ್ನಾ ಲಹೋರಿ ಮತ್ತು ಹಿಜ್ಬುಲ್ ಮುಜಾಹಿದೀನ್‌ಗೆ ಸೇರಿದ ಮತ್ತೂಬ್ಬನನ್ನು ಕೊಲ್ಲಲಾಗಿದೆ.

Advertisement

ಶೋಪಿಯಾನ್‌ ಜಿಲ್ಲೆಯ ಬಾಂಡೇ ಮೊಹಲ್ಲಾ ಎಂಬಲ್ಲಿ ಮುನ್ನಾ ಲಹೋರಿ ಮತ್ತು ಹಿಜ್ಬುಲ್ಗೆ ಸೇರಿದ ಮಿರ್‌ ಝೀನತ್‌-ಉಲ್-ಇಸ್ಲಾಮ್‌ ಎಂಬಾತ ಅವಿತಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾರ್ಯಾಚರಣೆ ಆರಂಭಿಸಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ಪ್ರಮುಖ ದಾಳಿಗಳಲ್ಲಿ ಭಾಗಿ

ಪಾಕ್‌ ನಾಗರಿಕನಾಗಿರುವ ಮುನ್ನಾ ಲಹೋರಿಗೆ ಬಿಹಾರಿ ಎಂಬ ಮತ್ತೂಂದು ಹೆಸರೂ ಇದೆ. ಈತ ಸುಧಾರಿತ ಸ್ಫೋಟಕ ಪರಿಣತ. ಮಾ.30ರಂದು ಬನಿಹಾಲ್ ಎಂಬಲ್ಲಿ ಸೇನಾ ಪಡೆ ಗಳ ಗಸ್ತು ವಾಹನದ ಮೇಲೆ ಮತ್ತು ಜೂ.17ರಂದು ಪುಲ್ವಾಮಾದ ಅರಿಹಾಲ್ ಎಂಬಲ್ಲಿ ಸೇನೆಯ ವಾಹನದಮೇಲೆ ನಡೆಸಲಾದ ದಾಳಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಈ 2 ದಾಳಿಗಳ ಸಹಿತ ಕಣಿವೆ ರಾಜ್ಯದಲ್ಲಿ ನಾಗರಿಕರು ಮತ್ತು ಪೊಲೀಸ್‌ ಅಧಿಕಾರಿಗಳ ಮೇಲೆ ನಡೆದ ಹಲವು ಆಕ್ರಮಣಗಳಲ್ಲಿ ಲಹೋರಿ ನೇರ ಭಾಗಿಯಾಗಿದ್ದಾನೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ತು ಸಾವಿರ ಯೋಧರ ರವಾನೆ

ಅಗ್ರೇಸರ ಉಗ್ರರಿಬ್ಬರನ್ನು ಸದೆಬಡಿದ ದಿನವೇ ಕೇಂದ್ರ ಸರಕಾರ ಹತ್ತು ಸಾವಿರ ಮಂದಿ ಯೋಧರನ್ನು ಕಾಶ್ಮೀರಕ್ಕೆ ತುರ್ತಾಗಿ ಕಳುಹಿಸಿಕೊಟ್ಟಿದೆ. ಜು.25ರಂದೇ ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಆದೇಶ ಹೊರಡಿಸಿತ್ತು. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್)ಯ 100 ಕಂಪೆನಿಗಳನ್ನು ಕಳುಹಿಸಿ ಕೊಡುವಂತೆ ಈ ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಸಿಆರ್‌ಪಿಎಫ್ನಿಂದ 50, ಸಶಸ್ತ್ರ ಸೀಮಾ ಬಲದಿಂದ 30, ಐಟಿಬಿಪಿ ಮತ್ತು ಬಿಎಸ್‌ಎಫ್ನಿಂದ ತಲಾ ಹತ್ತು ಕಂಪೆನಿಗಳನ್ನು ಆಯ್ಕೆ ಮಾಡಲಾಗಿದೆ. ಉಗ್ರ ನಿಗ್ರಹ ಹೋರಾಟದಲ್ಲಿ ಈ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಆ.15ರ ವರೆಗೆ ಅಮರನಾಥ ಯಾತ್ರೆ ಇರುವುದರಿಂದಲೂ ಈ ನಿರ್ಧಾರ ಮಹತ್ವ ಪಡೆದಿದೆ. ಒಂದು ಸಿಎಪಿಎಫ್ ಬೆಟಾಲಿಯನ್‌ನಲ್ಲಿ ಒಂದು ಸಾವಿರ ಸಿಬಂದಿ ಇರಲಿದ್ದಾರೆ.

Udayavani is now on Telegram. Click here to join our channel and stay updated with the latest news.

Next