Advertisement

ಆವಂತಿಪೋರಾ: ಉಗ್ರರಿಂದ ಐಇಡಿ ಬ್ಲಾಸ್ಟ್‌; 12 CRPF ಗಳಿಗೆ ಗಾಯ

10:50 AM Feb 14, 2019 | udayavani editorial |

ಶ್ರೀನಗರ : ಉಗ್ರರ ಗುಂಪೊಂದು ಇಂದು ಗುರುವಾರ ಪುಲ್ವಾಮಾದ ಆವಂತಿಪೋರಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಐಇಡಿ ಬ್ಲಾಸ್ಟ್‌ ನಡೆಸಿದ್ದು ಕನಿಷ್ಠ 12 ಸಿಆರ್‌ಪಿಎಫ್ ಸೈನಿಕರು ಗಾಯಗೊಂಡರು. 

Advertisement

ಘಟನೆಯ ಸುದ್ದಿ ತಿಳಿದೊಡನೆಯೇ ಹೆಚ್ಚುವರಿ ಭದ್ರತಾ ಪಡೆಯನ್ನು ಬ್ಲಾಸ್ಟ್‌ ನಡೆದ ತಾಣಕ್ಕೆ ರವಾನಿಸಲಾಗಿದ್ದು ಇಡಿಯ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ ನಿನ್ನೆಯಷ್ಟೇ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಘಟನೆಗೆ ಪ್ರತೀಕಾರವಾಗಿ ಉಗ್ರರು ಇಂದಿನ ಐಇಡಿ ಬ್ಲಾಸ್ಟ್‌ ನಡೆಸಿರಬೇಕೆಂದು ಶಂಕಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next