Advertisement

ಕೃಷ್ಣ-ಮಲಪ್ರಭೆ ತಟದಲ್ಲಿ ಮೂರ್ತಿ-ಪ್ರತಿಮೆಗಳು

05:16 PM Dec 08, 2018 | Team Udayavani |

ಕೂಡಲಸಂಗಮ: ಕೃಷ್ಣ, ಮಲಪ್ರಭೆ ನದಿಗಳ ಸಂಗಮ ಸ್ಥಳ ಸುಕ್ಷೇತ್ರ ಕೂಡಲಸಂಗಮದಲ್ಲಿ ಪ್ರತಿ ವರ್ಷ ನದಿ ಇಳಿಮುಖವಾಗುತ್ತಿದ್ದಂತೆ ನದಿಯ ದಡದಲ್ಲಿ ವಿವಿಧ ರೂಪದ ಭಗ್ನಗೊಂಡ ಮೂರ್ತಿ, ಪ್ರತಿಮೆಗಳು ತೇಲಿಕೊಂಡು ಬಂದು ಬಿದ್ದಿವೆ. ನದಿಗಳು ಸಂಪೂರ್ಣ ತುಂಬಿದಾಗ ಭಗ್ನಗೊಂಡ ಮೂರ್ತಿಗಳನ್ನು ಭಕ್ತರು ನದಿಗೆ ಎಸೆಯುತ್ತಾರೆ. ನೀರು ಇಳಿಮುಖಗೊಂಡಾಗ ಮೂರ್ತಿಗಳು ನದಿಯಲ್ಲಿ ತೇಲುತ್ತ ನದಿಯ ದಡದಲ್ಲಿ ಬಿದ್ದಿವೆ.

Advertisement

ನಂದಿ ಬಸವಣ್ಣ, ವೀರಭದ್ರ, ನಾಗದೇವ, ಈಶ್ವರಲಿಂಗ, ಆಂಜನೇಯ, ಗಣಪತಿ ಮುಂತಾದ ದೇವರುಗಳ ನೂರಾರು ವಿಗ್ರಹಗಳು ಅಪರೂಪವಾದ ಕಟ್ಟಿಗೆ ಕೆತ್ತನೆಯ ಮೂರ್ತಿಗಳು ಬಸವಣ್ಣ ಐಕ್ಯ ಮಂಟಪದ ಬಳಿ, ರಥದ ಮನೆಯ ಬದಿಯ ನದಿಯ ದಡದಲ್ಲಿವೆ. ಸುಕ್ಷೇತ್ರಕ್ಕೆ ಆಗಮಿಸಿದ ವಿದ್ವಾಂಸರು, ಸಂಶೋಧಕರು ಐತಿಹಾಸಿಕ ಮಹತ್ವವುಳ್ಳ ಅಪರೂಪದ ವಿಗ್ರಹಳಿಗೆ, ಮೂರ್ತಿಗಳಿಗೆ ಸೂಕ್ತ ರಕ್ಷಣೆ ಇಲ್ಲದೆ ಇರುವುದು, ಅಧ್ಯಯನಕ್ಕೆ ನೆರವಾಗುವ ರೀತಿಯಲ್ಲಿ ಒಂದು ಕಡೆ ಜೋಡಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಇತ್ತೀಚಿನ ದಶಕಗಳಲ್ಲಿ ಕೆತ್ತಲಾದ ವಿವಿಧ ಮೂರ್ತಿಗಳಿದ್ದು. ಬಸವಣ್ಣನ ವಿಗ್ರಹ ಸೇರಿದಂತೆ ಈ ಭಾಗದಲ್ಲಿ ಆಗಿ ಹೋದ ಪೂಜ್ಯ ವ್ಯಕ್ತಿಗಳ ಮೂರ್ತಿಗಳು ಇವೆ. ವೀರಭದ್ರಸ್ವಾಮಿ, ನಾಗದೇವತೆಯ ಅಪರೂಪದ ಶಿಲಾಮೂರ್ತಿಗಳು ಇವೆ. ಸಣ್ಣ ಗಾತ್ರದಲ್ಲಿಯ ಚೌಕಾಕಾರದ ಕಲ್ಲಿನ ಕೆತ್ತನೆಯ ಸ್ತ್ರೀಯ ನೃತ್ಯ ಭಂಗಿಯ ವಿಗ್ರಹ ಚರಿತ್ರಾಕಾರರ, ಸಂಶೋಧಕರ ಗಮನ ಸೆಳೆಯುತ್ತಿದೆ.

ಐತಿಹಾಸಿಕ ಮಹತ್ವ ಸಾರುವ ಅಪರೂಪದ ಶಿಲಾಮೂರ್ತಿ, ಪ್ರತಿಮೆಗಳನ್ನು ಕಿತ್ತೂರಿನ ವಸ್ತು ಸಂಗ್ರಹಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಂಭಾಗದ ಎಡಬಲ ಬದಿಯಲ್ಲಿ ಜೋಡಿಸಿದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಕಚೇರಿ, ಗ್ರಂಥಾಲಯದ ಮುಂಭಾಗದಲ್ಲಿ ಇಲ್ಲವೇ ಪೂಜಾವನದಲ್ಲಿ ವಸ್ತು ಸಂಗ್ರಹಾಲಯದ ಮಾದರಿಯಲ್ಲಿ ಜೋಡಿಸಿ ಸೂಕ್ತ ನಾಮಫಲಕ ಅಳವಡಿಸಿ ರಕ್ಷಿಸುವ ಕಾರ್ಯ ಮಾಡಬೇಕು.

ಐತಿಹಾಸಿಕ, ಚಾರಿತ್ರಿಕ ಅಂಶಗಳ ಮೇಲೆ ಬೆಳಕು ಚಲ್ಲುವ ಹಲವಾರು ಮೂರ್ತಿ, ಪ್ರತಿಮೆಗಳು ನದಿಯ ದಡದಲ್ಲಿದ್ದು, ರಕ್ಷಣೆಯ ಕಾರ್ಯವನ್ನು ಮಂಡಳಿ ಅ ಧಿಕಾರಿಗಳು ಮಾಡಬೇಕು. ಇವೆಲ್ಲವುಗಳನ್ನು ಒಂದು ಕಡೆ ಸಂಗ್ರಹಿಸುವುದರಿಂದ ಅಧ್ಯಯನಗಾರರಿಗೆ ಅನುಕೂಲವಾಗುತ್ತದೆ.
„ಆದಪ್ಪ ಗೊರಚಿಕ್ಕನವರ, ಸಂಶೋಧನಾ ವಿದ್ಯಾರ್ಥಿ

Advertisement

ನದಿಯ ದಡದಲ್ಲಿ ಮೂರ್ತಿ- ಪ್ರತಿಮೆ ಬಿದ್ದಿವೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಂಗ್ರಹಿಸುವ ಕಾರ್ಯ ಮಾಡುವೆ.
„ಆರ್‌.ಎಸ್‌. ಹಿರೇಮಠ,
   ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next