Advertisement

ಕೊಟ್ಟಿಗೆಹಾರ: ಗುಳಿಗ ದೈವದ ನುಡಿಯಂತೆ ಮರದ ಕೆಳಗೆ ಪತ್ತೆಯಾದ ವಿಗ್ರಹ

07:41 PM May 10, 2022 | Team Udayavani |

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‌ನ ಅಲೇಕಾಡು ಇತಿಹಾಸ ಪ್ರಸಿದ್ದ ಗುಳಿಗ ಕ್ಷೇತ್ರದ ಮೂಲ ವಿಗ್ರಹ ಆಲೇಕಾನ್ ಎಸ್ಟೇಟ್‌ನ ಮರವೊಂದರ ಬುಡದಲ್ಲಿ ಪತ್ತೆಯಾಗಿದೆ.

Advertisement

ಏಪ್ರಿಲ್ 24 ರಂದು ಅಲೇಕಾಡು ಇತಿಹಾಸ ಪ್ರಸಿದ್ದ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಶ್ರೀ ಗುಳಿಗ ದೈವದ ದರ್ಶತಿದಲ್ಲಿ ಕ್ಷೇತ್ರದಿಂದ ಮರ‍್ನಾಲ್ಕು ಕಿ.ಮಿ ದೂರದಲ್ಲಿ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ತಿಳಿಸಿದ್ದು ಅದರಂತೆ ಗುಳಿಗ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮರ‍್ನಾಲ್ಕು ಕಿ.ಮಿ ದೂರದಲ್ಲಿ ಮರವೊಂದರ ಕೆಳಗೆ ಅಗೆದು ನೋಡಿದಾಗ ಗುಳಿಗ ದೈವದ ಕಂಚಿನ ಮೂರ್ತಿ, ಕತ್ತಿ, ಗಂಟೆಗಳು ಮರದ ಕೆಳಗೆ ಪತ್ತೆಯಾಗಿದೆ.

ಇದನ್ನೂ ಓದಿ: ವಿದ್ಯುತ್ ಸ್ಪರ್ಶಗೊಂಡು ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅಲೆಕಾಡು ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಚನ್ನಕೇಶವ ಎಂ.ಜೆ, ಆಲೇಕಾನ್‌ನಲ್ಲಿ ಶ್ರೀ ಗುಳಿಗ ದೈವದ ದರ್ಶನದಲ್ಲಿ ಗುಳಿಗ ದೈವದ ನುಡಿಯಂತೆ ಮೂಲ ವಿಗ್ರಹ ಪತ್ತೆಯಾಗಿದ್ದು ವಿಗ್ರಹವನ್ನು ಪ್ರತಿಷ್ಠಾಪಿಸುವ ಬಗ್ಗೆ ಮುಂದಿನ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Advertisement

ಬಣಕಲ್ ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ ನೂರಾರು ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ, ಗುಳಿಗ ದೈವ,  ಬಬ್ಬುಸ್ವಾಮಿ ಮುಂತಾದ ಪೂಜೆ  ವಿಧಿವಿಧಾನಗಳು ಹಿಂದಿನಿಅದಲೂ ವಿಜೃಂಭಣೆಯಿಅದ ನಡೆಯುತ್ತಿದ್ದು ಈಗ ಮೂಲ ವಿಗೃಹ ಸಿಕ್ಕಿರುವುದು ಕ್ಷೇತ್ರದ ಮಹಿಮೆಯನ್ನು ಕಣ್ಮುಂದೆ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next